Advertisement

ಮನೆ ಮನೆಗೆ ಆಹಾರದ ಪೊಟ್ಟಣ ವಿತರಣೆ

01:45 PM Jun 12, 2021 | Team Udayavani |

ಬೆಂಗಳೂರು: ಬಿಟಿಎಂ ಲೇ ಔಟ್‌ ವಿಧಾನಸಭೆಕ್ಷೇತ್ರದಲ್ಲಿ ದಿನಗೂಲಿ ನೌಕರರು, ವಲಸೆ ಕಾರ್ಮಿಕರುಸೇರಿದಂತೆ ವಿವಿಧ ವರ್ಗದವರು ಕೋವಿಡ್‌ಕಾಣಿಸಿಕೊಂಡ ಬಳಿಕ ಸಂಕಷ್ಟಕ್ಕೆ ಸಿಲುಕಿದ್ದಾರೆ.

Advertisement

ಲಾಕ್‌ಡೌನ್‌ನಿಂದ ಸಂಕಷ್ಟಕ್ಕೆ ಒಳಗಾದವರ ಸಮಸ್ಯೆಗಳಿಗೆಸ್ಪಂದಿಸಿರುವ ರಾಮಲಿಂಗಾ ರೆಡ್ಡಿ, ಪಕ್ಷದಕಾರ್ಯಕರ್ತರ ನೆರವಿನಿಂದ ನಿತ್ಯ ಮನೆ ಮನೆಗೆಆಹಾರದ ಪೊಟ್ಟಣಗಳನ್ನು ಒದಗಿಸು ತ್ತಿದ್ದಾರೆ.ಆಟೋ ಚಾಲಕರು, ಬೀದಿ ಬದಿ ವ್ಯಾಪಾರಿಗಳು,ಕಟ್ಟಡ ಕಾರ್ಮಿಕರು ಸೇರಿದಂತೆ ಅಗತ್ಯಸಮಸ್ಯೆಯಲ್ಲಿ ಇರುವವರನ್ನು ಪ್ರತಿನಿತ್ಯ ಆಹಾರದಪೊಟ್ಟಣಗಳನ್ನು ಬಿಟಿಎಂ ಕ್ಷೇತ್ರದ ಎಲ್ಲವಾರ್ಡ್‌ಗಳಲ್ಲೂ ನೀಡಲಾಗುತ್ತಿದೆ.ಕ್ಷೇತ್ರದ 20 ಕಡೆ ಅಡುಗೆ ಕೋಣೆ ಸಿದ್ಧಪಡಿಸಿನಿತ್ಯ ಹಲವು ಬಗೆಯ ರೈಸ್‌ ಬಾತ್‌ ತಯಾರಿಸಲಾಗುತ್ತಿದೆ.

ಆಹಾರ ತಯಾರಿಕಾ ಕೇಂದ್ರಗಳಿಗೆ ಖುದ್ದು ರಾಮಲಿಂಗರೆಡ್ಡಿ ಅವರು ಬೇಟಿ ನೀಡಿ,ಗುಣಮಟ್ಟ ಪರಿಶೀಲಿಸುವುದರ ಜತೆಗೆ ಕಾರ್ಯಕರ್ತರ ಜತೆ ನಿತ್ಯ ತಾವೂ ಸೇವಿಸಿ ನಂತರಬಡವರಿಗೆ ವಿತರಣೆಗೆ ಕ್ರಮ ಕೈಗೊಂಡಿದ್ದಾರೆ.ಕಳೆದ ವರ್ಷ ಕೊರೊನಾ ಲಾಕ್‌ಡೌನ್‌ಸಂದರ್ಭದಲ್ಲಿ ಬಿಟಿಎಂ ವಿಧಾನಸಭೆ ಕ್ಷೇತ್ರ ಹಾಗೂಜಯನಗರ ವಿಧಾನಸಭೆ ಕ್ಷೇತ್ರದಲ್ಲಿ 50 ಸಾವಿರಜನರಿಗೆ ನಿತ್ಯ ಮಧ್ಯಾಹ್ನ ಮತ್ತು ರಾತ್ರಿ ಊಟದವ್ಯವಸ್ಥೆ ಮಾಡಿಸಲಾಗಿತ್ತು. ಈ ಬಾರಿ ಕೂಡ ಲಾಕ್‌ಡೌನ್‌ ಘೋಷಣೆಯಾದ ಬಳಿಕ ತಕ್ಷಣ ಕ್ಷೇತ್ರದ 20ಕಡೆ ಆಹಾರ ತಯಾರಿಕಾ ಕೇಂದ್ರ ಸ್ಥಾಪಿಸಿ 34ಸಾವಿರ ಆಹಾರ ಪೊಟ್ಟಣ ವಿತರಿಸಲಾಗುತ್ತಿದೆ.ಪ್ರತಿನಿತ್ಯ 106 ಕಡೆ ಪಕ್ಷದ ಮುಖಕರು ಹಾಗೂಕಾರ್ಯಕರ್ತರು ಬಿಸಿಯೂಟವನ್ನು ಒದಗಿಸುತ್ತಿದ್ದಾರೆ.

34 ಸಾವಿರ ಊಟದ ಪೊಟ್ಟಣಗಳನ್ನು 8 ವಾರ್ಡ್‌ಗಳಲ್ಲಿ ವಿತರಿಸಲಾ ಗುತ್ತಿದೆ. 2,500 ಸಾವಿರಆಹಾರ ಪೊಟ್ಟಣ ಇಸ್ಕಾನ್‌ನ ಅಕ್ಷಯಪಾತ್ರಒದಗಿಸುತ್ತಿದೆ. ನನ್ನ ಕ್ಷೇತ್ರದ ವ್ಯಾಪ್ತಿಗೆ ಬರುವನಿಮ್ಹಾನ್ಸ್‌ ರೋಗಿಗಳ 500ಕ್ಕೂ ಅಧಿಕ ಸಂಬಂಧಿಗಳಿಗೆ ಪ್ರತಿನಿತ್ಯ ಊಟವನ್ನು ನೀಡಲಾಗುತ್ತಿದೆ’ಎಂದು ರಾಮಲಿಂಗಾರೆಡ್ಡಿ ಹೇಳುತ್ತಾರೆ.

Advertisement

Udayavani is now on Telegram. Click here to join our channel and stay updated with the latest news.

Next