Advertisement

ಪಚ್ಚನಾಡಿ: ಬರಿಗೈಯಲ್ಲಿ ತ್ಯಾಜ್ಯ ಪ್ರತ್ಯೇಕಿಸುವ ಕಾರ್ಮಿಕರು!

03:25 PM Jan 29, 2024 | Team Udayavani |

ಮಹಾನಗರ: ಪಚ್ಚನಾಡಿಯ ತ್ಯಾಜ್ಯ ನಿರ್ವಹಣೆ ಘಟಕದಲ್ಲಿ ಕೆಲಸ ಮಾಡುವ ಪುರುಷ- ಮಹಿಳಾ ಕಾರ್ಮಿಕರು ಸೂಕ್ತ ಸುರಕ್ಷ ಪರಿಕರಗಳನ್ನು ಹಾಕದೆ, ಬರಿ ಕೈ ಕಾಲಿನಲ್ಲಿ ತ್ಯಾಜ್ಯದ ಕೆಲಸ ನಿರ್ವಹಿಸುತ್ತಿರುವುದು ಕಂಡು ಬಂದಿದೆ. ಇಂತಹ ನಿರ್ಲಕ್ಷéದಿಂದ ಕಾರ್ಮಿಕರ ಪಾಲಿಗೆ ಆಪಾಯ ಉಂಟಾಗುವ ಸಾಧ್ಯತೆ ಹೆಚ್ಚು.

Advertisement

ತ್ಯಾಜ್ಯ ವಿಲೇವಾರಿ, ನಿರ್ವಹಣೆ ಅತ್ಯಂತ ಅಪಾಯಕಾರಿ ಕೆಲಸವಾಗಿದ್ದು, ಅತೀ ಹೆಚ್ಚಿನ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವುದು ಅಗತ್ಯವಾಗಿದೆ. ಇದಲ್ಲಿ ಸ್ವಲ್ಪ ನಿರ್ಲಕ್ಷ್ಯ ತೋರಿದರೂ ಬ್ಯಾಕ್ಟೀರಿಯಾ ವೈರಸ್‌ ಮೊದಲಾದವುಗಳು ಹರಡುವ ಸೋಂಕು ತಗುಲುವ ಪರಿಸ್ಥಿತಿ ಎದುರಾಗಬಹುದು. ಆದ್ದರಿಂದ ಇಂತಹ ಘಟಕಗಳಲ್ಲಿ ದುಡಿಯುವ ಕಾರ್ಮಿಕರು ಸೂಕ್ತ ಮುನ್ನೆಚ್ಚರಿಕಾ ಕ್ರಮಗಳನ್ನು ಅನುಸರಿಸಬೇಕಿದೆ. ಆದರೆ ಪಚ್ಚನಾಡಿಯ ತ್ಯಾಜ್ಯ ನಿರ್ವಹಣಾ ಘಟಕದಲ್ಲಿ ಅದ್ಯಾವುದನ್ನೂ ಪಾಲಿಸುತ್ತಿಲ್ಲ ಎನ್ನುವುದು ವಿಪರ್ಯಾಸ.

ತ್ಯಾಜ್ಯ ಘಟಕಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ತ್ಯಾಜ್ಯಗಳನ್ನು ಬರಿ ಕೈಯಲ್ಲಿ ಮುಟ್ಟುವಂತಿಲ್ಲ. ಕೆಲಸದ ವೇಳೆ ಹ್ಯಾಂಡ್‌
ಗ್ಲೌಸ್‌ (ಕೈಗವಸು), ಬೂಟ್‌, ಮಾಸ್ಕ್, ಹೆಲ್ಮೆಟ್‌ ಇತ್ಯಾದಿಗಳನ್ನು ಕಡ್ಡಾಯವಾಗಿ ಧರಿಸಬೇಕು. ಆದರೆ ಪಚ್ಚನಾಡಿಯಲ್ಲಿ ಬಹುತೇಕ ಕಾರ್ಮಿಕರಲ್ಲಿ ಇಂತಹ ಯಾವುದೇ ರಕ್ಷಣಾತ್ಮಕ ವಸ್ತುಗಳಿಲ್ಲ. ಕೆಲವರು ರೇಡಿಯಂ ಪಟ್ಟಿ ಹೊಂದಿರುವ ಜಾಕೆಟ್‌ ಧರಿಸಿದ್ದು, ಅದರಿಂದ ಯಾವುದೇ ಪ್ರಯೋಜನವಿಲ್ಲ.

ಸೂಕ್ತ ವ್ಯವಸ್ಥೆ ಕಲ್ಪಿಸಬೇಕು
ಹಸಿ, ಒಣ ತ್ಯಾಜ್ಯಗಳು ಪ್ರತ್ಯೇಕಗೊಳ್ಳದೆ ಮಿಶ್ರತ್ಯಾಜ್ಯ ಪಚ್ಚನಾಡಿಗೆ ಬರ್ತುತದೆ. ಯಂತ್ರದ ಮೂಲಕ ತ್ಯಾಜ್ಯವನ್ನು ಬೇರ್ಪಡಿಸು
ವಲ್ಲಿಯೂ ಕಾರ್ಮಿಕರು ಬರಿ ಕೈ ಮತ್ತು ಕಾಲಿನಲ್ಲಿ ತ್ಯಾಜ್ಯವನ್ನು ಮುಟ್ಟುತ್ತಾರೆ. ಅದೇ ಕೈಯಲ್ಲು ಊಟ-ತಿಂಡಿ ಮಾಡುವುದರಿಂದ ಅದರಲ್ಲಿರುವ ರೋಗಕಾರಕ ಸೂಕ್ಷ್ಮಾಣು ಜೀವಿಗಳು ಹೊಟ್ಟೆಯೊಳಗೆ ಸೇರಿ ಅನಾರೋಗ್ಯಕ್ಕೂ ಕಾರಣವಾಗಬಹುದು.

ಕಾರ್ಮಿಕರಿಗೆ ಘಟಕದಲ್ಲಿ ಸೂಕ್ತ ನೀರು, ಕೈಗಳನ್ನು ತೊಳೆಯಲು ಸೋಪು, ಸ್ಯಾನಿಟೈಸೇಶನ್‌ ವ್ಯವಸ್ಥೆ ಸರಿಯಾಗಿರುವಂತೆ
ನೋಡಿಕೊಳ್ಳಬೇಕು. ಕೆಲವು ಮಹಿಳಾ ಕಾರ್ಮಿಕರು ಪುಟ್ಟ ಮಕ್ಕಳನ್ನೂ ಘಟಕದೊಳಗೆ ಕರೆದುಕೊಂಡು ಬರುತ್ತಿದ್ದು, ಇದು ಅಪಾಯಕಾರಿಯಾಗಿದೆ.

Advertisement

ಪರಿಶೀಲಿಸಲಾಗುವುದು
ಪಚ್ಚನಾಡಿಯಲ್ಲಿ ತ್ಯಾಜ್ಯ ನಿರ್ವಹಣೆಯ ಕೆಲಸವನ್ನು ಏಜೆನ್ಸಿಯವರಿಗೆ ನೀಡಲಾಗಿದ್ದು, ಕಾರ್ಮಿಕರಿಗೆ ಪೂರಕ ವ್ಯವಸ್ಥೆಗಳನ್ನು
ಒದಗಿಸುವುದು ಗುತ್ತಿಗೆ ಪಡೆದವರ ಜವಾಬ್ದಾರಿ ಮತ್ತು ಕರ್ತವ್ಯ. ಈ ಬಗ್ಗೆ ಈಗಾಗಲೇ ಅವರಿಗೆ ಸೂಚನೆ ನೀಡಲಾಗಿದೆ. ಇದರಲ್ಲಿ
ಲೋಪವಾಗಿದೆಯೇ ಎಂದು ಪರಿಶೀಲಿಸಲಾಗುವುದು.
ಸುಧೀರ್‌ ಶೆಟ್ಟಿ, ಮೇಯರ್‌

*ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next