Advertisement
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ 1650 ತಾಂಡಾಗಳ ಪೈಕಿ ಈಗ 700 ತಾಂಡಾಗಳ ಹಕ್ಕು ಪತ್ರ ನೀಡುವ ಕಾರ್ಯ ಪ್ರಗತಿಯಲ್ಲಿದೆ. ಜ. 19ರಂದು ಪ್ರಧಾನಿ ನರೇಂದ್ರ ಮೋದಿ 51900 ಫಲಾನುಭವಿಗಳಿಗೆ ಹಕ್ಕು ಪತ್ರಗಳನ್ನು ಜಿಲ್ಲೆಯ ಸೇಡಂ ತಾಲೂಕಿನ ಮಳಖೇಡದಲ್ಲಿ ನೀಡುವ ಮುಖಾಂತರ ಚಾಲನೆ ನೀಡುವರು ಎಂದರು.
Related Articles
Advertisement
ಒಂದು ಲಕ್ಷ ಯುವಕರು: ಮೋದಿ ಅವರ ಕಾರ್ಯಕ್ರಮಕ್ಕೆ ಐದು ಸಾವಿರ ಕಾರ್ಯಕರ್ತರು ವಾರದಿಂದ ಶ್ರಮಿಸುತ್ತಿದ್ದಾರೆ. ಐದು ಲಕ್ಷ ಜನ ಭಾಗವಹಿಸುವ ನಿರೀಕ್ಷೆಯಿದೆ. ಅದಲ್ಲದೇ ಒಂದು ಲಕ್ಷ ಯುವಕರು ಬೈಕ್ ಮೇಲೆ ಪಾಲ್ಗೊಳ್ಳಲಿದ್ದಾರೆ ಎಂದು ಕೆಕೆಆರ್ ಟಿಸಿ ಅಧ್ಯಕ್ಷರಾಗಿರುವ ಸೇಡಂ ಶಾಸಕ ರಾಜಕುಮಾರ ಪಾಟೀಲ್ ತೇಲ್ಕೂರ ತಿಳಿಸಿದರು.
ಲಂಬಾಣಿ ಮಹಿಳೆಯರು ತಮ್ಮ ಸಾಂಪ್ರದಾಯಿಕ ಉಡುಗೆಗಳೊಂದಿಗೆ ಪಾಲ್ಗೊಳ್ಳಲಿದ್ದು, ಪ್ರಧಾನಿ ಅವರನ್ನು ತಮ್ಮ ನೃತ್ಯದ ಮೂಲಕ ಸ್ವಾಗತ ಕೋರುವರು ಎಂದು ತೇಲ್ಕೂರ ತಿಳಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಶಿವರಾಜ ಪಾಟೀಲ್ ರದ್ದೇವಾಡಗಿ, ನಗರಾಧ್ಯಕ್ಷ ಸಿದ್ದಾಜೀ ಪಾಟೀಲ್, ಮುಖಂಡರಾದ ಅಶೋಕ ಬಗಲಿ, ಸಂತೋಷ ಹಾದಿಮನಿ ಉಪಸ್ಥಿತರಿದ್ದರು.