Advertisement

ಚಿದು, ಕಾರ್ತಿ ವಿರುದ್ಧ  ಹೊಸ ಆರೋಪಪಟ್ಟಿ

06:00 AM Jul 20, 2018 | Team Udayavani |

ಹೊಸದಿಲ್ಲಿ: ಏರ್‌ಟೆಲ್‌-ಮ್ಯಾಕ್ಸಿಸ್‌ ಹಗರಣಕ್ಕೆ ಸಂಬಂಧಿಸಿದಂತೆ ಕೇಂದ್ರದ ಮಾಜಿ ಹಣಕಾಸು ಸಚಿವ ಪಿ. ಚಿದಂಬರಂ ಹಾಗೂ ಅವರ ಪುತ್ರ ಕಾರ್ತಿ ಚಿದಂಬರಂ ವಿರುದ್ಧ ಪ್ರಕರಣದ ತನಿಖೆ ನಡೆಸುತ್ತಿರುವ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ಪೂರಕ ಆರೋಪ ಪಟ್ಟಿ ಸಲ್ಲಿಸಿದೆ. ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಲಾಗಿರುವ ಈ ಆರೋಪ ಪಟ್ಟಿಯನ್ನು ಜು. 31ರಂದು ಪರಿಶೀಲನೆಗೆ ತೆಗೆದು ಕೊಳ್ಳಲಾಗುತ್ತದೆ.

Advertisement

ಈ ಪಟ್ಟಿಯಲ್ಲಿ ಚಿದಂಬರಂ, ಕಾರ್ತಿ ಚಿದಂಬರಂ ಹಾಗೂ  ಸರಕಾರಿ ಅಧಿಕಾರಿಗಳ ಸಹಿತ 10 ವ್ಯಕ್ತಿಗಳು ಹಾಗೂ 6 ಕಂಪೆನಿಗಳನ್ನು ಹೆಸರಿಸಲಾಗಿದೆ. ಆರೋಪ ಸಾಬೀತಾದಲ್ಲಿ ಆರೋಪಿಗಳಿಗೆ ತಲಾ 7 ವರ್ಷ ಜೈಲು ಶಿಕ್ಷೆ ನೀಡಬಹುದಾಗಿದೆ.

ಆರೋಪ ಪಟ್ಟಿಯಲ್ಲಿ ಏನಿದೆ? 
2006ರಲ್ಲಿ ಚಿದಂಬರಂ ವಿತ್ತ ಸಚಿವರಾಗಿದ್ದಾಗ ಮ್ಯಾಕ್ಸಿಸ್‌ ಕಂಪೆನಿಯ ಅಂಗಸಂಸ್ಥೆಯಾದ ಮಾರೀಷಿ ಯಸ್‌ ಮೂಲದ ಗ್ಲೋಬಲ್‌ ಕಮ್ಯೂನಿ ಕೇಶನ್‌ ಸರ್ವಿಸಸ್‌ ಹೋಲ್ಡಿಂಗ್ಸ್‌ ಲಿಮಿಟೆಡ್‌ಗೆ 5,522 ಕೋಟಿ ರೂ. ಪ್ರಾಜೆಕ್ಟ್ಗೆ ವಿದೇಶಿ ಹೂಡಿಕೆ ಉತ್ತೇಜನಾ ಮಂಡಳಿ(ಎಫ್ಐಪಿಬಿ)ಯ ಅನುಮತಿ ನೀಡಿದ್ದರು. ಆದರೆ ಎಫ್ಐಪಿಬಿ ನಿಯಮದಂತೆ 600 ಕೋಟಿ ರೂ.ಗಳವರೆಗಿನ ಯೋಜನೆಗಳಿಗೆ ಮಾತ್ರ ಅನುಮತಿ ನೀಡುವ ಅವಕಾಶ ವಿತ್ತ ಸಚಿವರಿಗಿರುತ್ತದೆ. ಅದಕ್ಕಿಂತ ಹೆಚ್ಚಿನ ಮೊತ್ತವಾದರೆ ಅದಕ್ಕೆ ಆರ್ಥಿಕ ವ್ಯವಹಾರಗಳಿಗೆ ಸಂಬಂಧಿಸಿದ ಸಂಪುಟ ಸಮಿಸಿ(ಸಿಸಿಇಎ)ಯ ಅನುಮತಿ ಅಗತ್ಯ. ಆದರೆ ಇಲ್ಲಿ ಸಿಸಿಇಎಗೆ ಮಾಹಿತಿ ನೀಡದೆ ಸಚಿವರೇ ಒಪ್ಪಿಗೆ ಸೂಚಿಸುವ ಮೂಲಕ ನಿಯಮ ಉಲ್ಲಂ ಸಲಾಗಿದೆ ಎಂದು ಸಿಬಿಐ ಆರೋಪಿಸಿದೆ.

ವಿಶೇಷ  ಕೋರ್ಟ್‌ಗೆ ಚಾರ್ಜ್‌ಶೀಟ್‌ ಸಲ್ಲಿಸಿದ ಸಿಬಿಐ
ಆರೋಪ ಸಾಬೀತಾದರೆ ಏಳು ವರ್ಷ ಜೈಲು ಶಿಕ್ಷೆ

Advertisement

Udayavani is now on Telegram. Click here to join our channel and stay updated with the latest news.

Next