Advertisement

ಶಾಶ್ವತ ನೀರಾವರಿ ಯೋಜನೆಗೆ ನಿರ್ಣಾಯಕ ಹೋರಾಟಕ್ಕೆ ಸಜ್ಜಾಗಿ

02:45 PM Sep 14, 2020 | Suhan S |

ಚಿಕ್ಕಬಳ್ಳಾಪುರ: ಸತತ ಬರಗಾಲದಿಂದ ತತ್ತರಿಸುತ್ತಿರುವ ಅವಿಭಜಿತ ಕೋಲಾರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಲು ನಿರ್ಣಾಯಕ ಹೋರಾಟ ನಡೆಸಲು ಜಿಲ್ಲೆಯ ಜನ ಸಜ್ಜಾಗಬೇಕೆಂದು ಸಮಾಜ ಸೇವಕ ಆರ್‌.ರವಿ ಬಿಳೇಶಿವಾಲೆ ಕರೆ ನೀಡಿದರು.

Advertisement

ಜಿಲ್ಲೆಯ ಶಿಡ್ಲಘಟ್ಟ ತಾಲೂಕಿನ ಚಿಕ್ಕದಾಸರಹಳ್ಳಿ ಗ್ರಾಮದಲ್ಲಿ ಲಯನ್‌ ಕ್ಲಬ್‌ ಯಣ್ಣೂರು ಅರವಿಂದ ನಗರ ಕ್ಲಬ್‌ ವತಿಯಿಂದ ಜಿಲ್ಲೆ 317 (ಎಫ್‌) ಓಝೋನ್‌ ದಿನಾಚರಣೆ ಅಂಗವಾಗಿ ಗಿಡಗಳನ್ನು ನೆಡುವ ಮೂಲಕ ಪರಿಸರ ಸಂರಕ್ಷಣೆ ಅಭಿಯಾನಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂಘಟಿತರಾಗಿ ಹೋರಾಟ ನಡೆಸಬೇಕು: ರೇಷ್ಮೆ,ಹೈನುಗಾರಿಕೆ, ತರಕಾರಿ, ಹೂ ಹಣ್ಣು ಉತ್ಪಾದನೆಯಲ್ಲಿ ಅಗ್ರಸ್ಥಾನ ಹೊಂದಿರುವ ಚಿಕ್ಕಬಳ್ಳಾಪುರ ಜಿಲ್ಲೆಗೆ ಶಾಶ್ವತ ನೀರಾವರಿ ಯೋಜನೆಜಾರಿಗೊಳಿಸಲು ಕೇವಲ ಪೊಳ್ಳು ಭರವಸೆಗಳನ್ನು ನೀಡುತ್ತಾ ಬಂದಿದ್ದು, ಮುಂದಿನ ಪೀಳಿಗೆ ಭವಿಷ್ಯದ ಹಿತದೃಷ್ಟಿಯಿಂದ ಶಾಶ್ವತ ನೀರಾವರಿ ಯೋಜನೆ ಜಾರಿಗೊಳಿಸಲು ಜಿಲ್ಲೆಯ ಜನಪ್ರತಿನಿಧಿಗಳು, ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ರೈತ ಸಂಘಗಳ ಸದಸ್ಯರು, ಯುವಕರ ಸಂಘ ಸಂಸ್ಥೆಗಳು ಸಂಘಟಿತರಾಗಿ ಪಕ್ಷಾತೀತ ಮತ್ತು ಜಾತ್ಯತೀತವಾಗಿ ಹೋರಾಟ ನಡೆಸಬೇಕೆಂದು ಹೇಳಿದರು.

ಪರಿಸರ ಸಂರಕ್ಷಣೆ ಜನಾಂದೋಲನವಾಗಲಿ: ಮನುಷ್ಯನ ಸ್ವಾರ್ಥ ಸಾಧನೆಗಾಗಿ ಮರಗಿಡಗಳನ್ನು ಕಡಿದು ಹಾಕಿದ್ದರಿಂದ ಪ್ರಾಕೃತಿಕ ಅಸಮತೋಲನ ಉಂಟಾಗಿ ಸಕಾಲದಲ್ಲಿ ಮಳೆ ಬೆಳೆ ಲಭಿಸದೇ ಜನ ಸಂಕಷ್ಟದಲ್ಲಿ ಸಿಲುಕುವಂತಹ ಪರಿಸ್ಥಿತಿ ನಿರ್ಮಾಣ ವಾಗಿದೆ. ಜಿಲ್ಲೆಯಲ್ಲಿ ಪರಿಸರ ಸಂರಕ್ಷಣೆ ಜನಾಂದೋಲನದ ಸ್ವರೂಪ ಪಡೆದುಕೊಳ್ಳಬೇಕು ಎಂದರು.

ಗ್ರಾಮೀಣ ಶಾಖೆ ಆರಂಭಿಸಲು ತೀರ್ಮಾನ ಶಿಡ್ಲಘಟ್ಟ ತಾಲೂಕಿನಲ್ಲಿ ಸಕ್ರಿಯವಾಗಿ ಸಮಾಜಸೇವೆಯಲ್ಲಿ ತೊಡಗಿಸಿಕೊಂಡಿರುವ ಬಿಳೇಶಿವಾಲೆ ರವಿ ಕುಮಾರ್‌ ಅವರ ನೇತೃತ್ವದಲ್ಲಿ ಲಯನ್ಸ್‌ ಕ್ಲಬ್‌ನ ಗ್ರಾಮೀಣ ಶಾಖೆ ಆರಂಭಿಸಲು ಒಮ್ಮತದ ತೀರ್ಮಾನ ತೆಗೆದುಕೊಂಡು ಸುಮಾರು 15 ಜನ ಸದಸ್ಯರನ್ನು ಒಳಗೊಂಡಂತೆ ಲಯನ್ಸ್‌ ಕ್ಲಬ್‌ ಸ್ಥಾಪಿಸಿ ಪರಿಸರ ಸಂರಕ್ಷಣೆ ಮತ್ತು ಸಮಾಜಸೇವಾ ಚಟುವಟಿಕೆ ಗಳನ್ನು ನಡೆಸಲು ಸಹಮತ ವ್ಯಕ್ತಪಡಿಸಿದರು.

Advertisement

ಕಾರ್ಯಕ್ರಮದಲ್ಲಿ ಲಯನ್‌ ಕ್ಲಬ್‌ ಯಣ್ಣೂರು ಅರವಿಂದನಗರ ಕ್ಲಬ್‌ನ ಜಿಲ್ಲೆ 317 (ಎಫ್‌) ಪ್ರದೇಶಾಧ್ಯಕ್ಷ ಕೆ.ಶ್ರೀನಿವಾಸ್‌ಮೂರ್ತಿ, ರಾಜ್ಯ ಪಾಲರು ದೀಪಕ್‌ ಸುಮನ್‌, ಫರಸ್ಟ್‌ ಜಿಲ್ಲಾ ಗರ್ವನರ್‌ ಮನೋಹಡಿಯರ್‌, 2ನೇ ವಿಡಿಸಿಬಿ.ಎಸ್‌.ರಾಜಶೇಖರಯ್ಯ, ಹುಲಿಕಲ್‌ ನಟರಾಜ್‌, ಲಕ್ಷ್ಮೀ ವಿದ್ಯಾನಿಕೇತನ ಶಾಲೆಯ ಅಧ್ಯಕ್ಷ ದೇವರಾಜ್‌, ಮಳಮಾಚನಹಳ್ಳಿ ಗ್ರಾಪಂಅಧ್ಯಕ್ಷೆಭಾಗ್ಯಮ್ಮ ಪಾಪಣ್ಣ, ಮಾಜಿ ಅಧ್ಯಕ್ಷ ಬ್ಯಾಟರಾಯಶೆಟ್ಟಿ, ಗ್ರಾಮ ಸದಸ್ಯ ದೇವರಾಜ್‌, ಚಿಕ್ಕದಾಸರಹಳ್ಳಿದಾಮೋಧರ್‌, ತಾಲೂಕು ಕಸಾಪ ಅಧ್ಯಕ್ಷ ತ್ಯಾಗರಾಜ್‌ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next