ನವ ದೆಹಲಿ : ಹಾಸ್ಪಿಟಾಲಿಟಿ ಸಂಸ್ಥೆ OYO ಭಾರತದ ವ್ಯವಹಾರವು ಈಗ ಇಬಿಐಟಿಡಿಎ(earnings before interest, taxes, depreciation, and amortization) ಸಕಾರಾತ್ಮಕವಾಗಿದೆ ಮತ್ತು ಕಂಪನಿಯು 2021 ರ ಜನವರಿಯಿಂದ ಮತ್ತೆ ಕೋವಿಡ್ ಪೂರ್ವದ ಅವಧಿಯಲ್ಲಿ ಇದ್ದ ಹಾಗೆಯೇ ಜಾಗತಿಕವಾಗಿ ಕೋವಿಡ್ ಪೂರ್ವದ ಅವಧಿಯಲ್ಲಿ ಗಳಲ್ಲಿ ಲಾಭವನ್ನು ಗಳಿಸುತ್ತಿದೆ ಎಂದು ಸಂಸ್ಥೆಯ ಸಂಸ್ಥಾಪಕ ಮತ್ತು ಸಮೂಹ ಸಿಇಒ ರಿತೇಶ್ ಅಗರ್ವಾಲ್ ಅವರು ಇ-ಮೇಲ್ ನಲ್ಲಿ ಉದ್ಯೋಗಿಗಳಿಗೆ ತಿಳಿಸಿದ್ದಾರೆ.
ಓದಿ : ಬೆಳಗಾವಿ ಉಪಚುನಾವಣೆ: ಹೈಕಮಾಂಡ್ ಹೇಳಿದರೆ ಸ್ಪರ್ಧೆಗೆ ಸಿದ್ದ ಎಂದ ಸತೀಶ್ ಜಾರಕಿಹೊಳಿ
“OYO, 2021 ರಲ್ಲಿ ಸ್ಥಿರವಾದ ಪುನರುತ್ಥಾನದ ಹಾದಿಯಲ್ಲಿದೆ ಮತ್ತು ಭಾರತ, ಯುರೋಪ್ ಮತ್ತು ಆಗ್ನೇಯ ಏಷ್ಯಾದಾದ್ಯಂತ ನಾವು ಚೇತರಿಕೆಯ ಲಕ್ಷಣಗಳನ್ನು ನೋಡುತ್ತಿದ್ದೇವೆ. ಕೋವಿಡ್ ಬಿಕ್ಕಟ್ಟಿನ ಮೂಲಕ OYO ನ ಉಳಿವು ಮತ್ತು ನಮ್ಮ ಪುನರುತ್ಥಾನವು ಹೆಚ್ಚಿನ ಮೌಲ್ಯದ ಸಾಮರ್ಥ್ಯವನ್ನು ಹೊಂದಿರುವ ಕಂಪನಿಯಾಗಿದೆ ಎಂದು ತೋರಿಸುತ್ತದೆ, ” ಇ-ಮೇಲ್ ಹೇಳುತ್ತದೆ ಎಂದು ಪಿಟಿಐ ವರದಿ ಮಾಡಿದೆ.
ಕೋವಿಡ್ ನ ನಿರ್ಬಂಧಗಳು ಮತ್ತು ಲಾಕ್ ಡೌನ್ ಗಳು ಈಗ ಸ್ವಲ್ಪ ಸಡಿಲವಾಗುವುದರೊಂದಿಗೆ ಹಾಗೂ ವ್ಯಾಕ್ಸಿನೇಷನ್ ಹೆಚ್ಚಾದಂತೆ 2021 ರಲ್ಲಿ ಒಟ್ಟು ಲಾಭವು ಹೆಚ್ಚಳವಾಗಬಹುದು ಎಂದು ನಾವು ನಿರೀಕ್ಷಿಸುತ್ತೇವೆ “ಎಂದು ಅಗರ್ ವಾಲ್ ಹೇಳಿದ್ದಾರೆ.
2021 ರಲ್ಲಿ, OYO ಈಗ ಮೂರು ದೊಡ್ಡ ಭೌಗೋಳಿಕತೆಗಳ ಅಡಿಯಲ್ಲಿ ಸಂಘಟನೆಯನ್ನು ವಿಸ್ತರಿಸಿಕೊಳ್ಳುತ್ತಿದೆ. OYO INSEA (ಭಾರತ, ಇಂಡೋನೇಷ್ಯಾ, ಮಲೇಷ್ಯಾ ಮತ್ತು ಫಿಲಿಪೈನ್ಸ್), OYO ಯುರೋಪ್ ಮತ್ತು OYO ಇಂಟರ್ನ್ಯಾಷನಲ್ (ಯುಎಸ್ಎ, ಯುಕೆ, ಚೀನಾ ಇತ್ಯಾದಿ) .
ರೋಹಿತ್ ಕಪೂರ್ OYO INSEA ಸಿಇಒ ಆಗಲಿದ್ದಾರೆ, ಮಂದರ್ ವೈದ್ಯ OYO ಯುರೋಪ್ ಸಿಇಒ ಆಗಲಿದ್ದಾರೆ ಮತ್ತು ಗೌತಮ್ ಸ್ವರೂಪ್ OYO ಇಂಟರ್ನ್ಯಾಷನಲ್ ಸಿಇಒ ಆಗಲಿದ್ದಾರೆ ಎಂದು ಅವರು ತನ್ನ ಮೇಲ್ ನಲ್ಲಿ, ಮಾಹಿತಿ ನೀಡಿದ್ದಾರೆ.
ಓದಿ : 20 ಕಿಲೋಮೀಟರ್ ಗೂ ಹೆಚ್ಚು ದೂರ ಹಿಮ್ಮುಖವಾಗಿ ಚಲಿಸಿದ ರೈಲು: ತಪ್ಪಿದ ಭಾರಿ ದುರಂತ