ನವದೆಹಲಿ: ಭಾರತದ ಟ್ರಾವೆಲ್ ಟೆಕ್ ಕಂಪನಿ “ಓಯೋ’, ಶೇ.10ರಷ್ಟು ಉದ್ಯೋಗ ಕಡಿತಕ್ಕೆ ಮುಂದಾಗಿದೆ. ಪ್ರಸ್ತುತ ಕಂಪನಿಯಲ್ಲಿ 3,700 ಉದ್ಯೋಗಿಗಳು ಇದ್ದು, ತಂತ್ರಜ್ಞಾನ ಮತ್ತು ಕಾರ್ಪೊರೇಟ್ ವಿಭಾಗದ 600 ಉದ್ಯೋಗಗಳನ್ನು ಕಡಿತಗೊಳಿಸಲಾಗುವುದು.
Advertisement
ಇದೇ ವೇಳೆ ರಿಲೇಶನ್‌ಶಿಪ್ ಮ್ಯಾನೇಜ್ಮೆಂಟ್ ತಂಡಕ್ಕೆ 250 ಮಂದಿಯನ್ನು ನೇಮಕ ಮಾಡಿಕೊಳ್ಳಲಾಗುವುದು ಎಂದು ಓಯೋ ತಿಳಿಸಿದೆ.
ಈ ಕ್ರಮವು ಕಂಪನಿಯಲ್ಲಿ ವ್ಯಾಪಕ ಬದಲಾವಣೆ ಅನುಷ್ಠಾನಗೊಳಿಸುವ ಭಾಗವಾಗಿದೆ. ಉತ್ಪನ್ನ ಮತ್ತು ಎಂಜಿನಿಯರಿಂಗ್ ವಿಭಾಗ, ಕಾರ್ಪೊರೇಟ್ ಪ್ರಧಾನ ಕಚೇರಿ ಮತ್ತು ಓಯೋ ವೆಕೇಶನ್ ಹೋಮ್ಸ್ ತಂಡಗಳಲ್ಲಿನ ಉದ್ಯೋಗಿಗಳ ಸಂಖ್ಯೆ ಕಡಿತಗೊಳಿಸಲಾಗುತ್ತದೆ ಎಂದು ಓಯೋ ತಿಳಿಸಿದೆ.