Advertisement

ಮುದ್ದೇಬಿಹಾಳ ಆಸ್ಪತ್ರೆಗೆ ಆಕ್ಸಿಜನ್‌ ಪ್ಲಾಂಟ್‌ ಮಂಜೂರು

01:06 PM May 08, 2021 | Suhan S |

ಮುದ್ದೇಬಿಹಾಳ: ಗೊಂದಲಕ್ಕೆ ಕಾರಣವಾಗಿದ್ದ ಮುದ್ದೇಬಿಹಾಳ ತಾಲೂಕು ಸರ್ಕಾರಿ ಆಸ್ಪತ್ರೆಗೆ ನಿಮಿಷಕ್ಕೆ 500 ಲೀಟರ್‌ ಉತ್ಪತ್ತಿ ಸಾಮರ್ಥ್ಯದ ಆನ್‌ಸೈಟ್‌ ಆಕ್ಸಿಜನ್‌ ಜನರೇಶನ್‌ ಪ್ಲಾಂಟ್‌ ಮಂಜೂರು ಮಾಡಿ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಮೇ 5ರಂದೇ ಆದೇಶ ಹೊರಡಿಸಿದ್ದ ಘಟನೆ ಬೆಳಕಿಗೆ ಬಂದಿದೆ.

Advertisement

ಈ ಕುರಿತು ಶುಕ್ರವಾರ ಸುದ್ದಿಗಾರರೊಂದಿಗೆ ಮಾತನಾಡಿದ ಶಾಸಕ ಎ.ಎಸ್‌. ಪಾಟೀಲ ನಡಹಳ್ಳಿ, ಮುದ್ದೇಬಿಹಾಳದಲ್ಲಿ ಘಟಕದ ಅವಶ್ಯಕತೆ ಕುರಿತು 2 ತಿಂಗಳ ಹಿಂದೆ ಸರ್ಕಾರಕ್ಕೆ ಪತ್ರ ಬರೆದಿದ್ದೆ. ಮೊದಲ ಲಿಸ್ಟ್‌ನಲ್ಲಿ ಮುದ್ದೇಬಿಹಾಳದ ಹೆಸರನ್ನು ಹೈ ಪವರ್‌ ಕಮಿಟಿಯಲ್ಲಿ ಕೈಬಿಡಲಾಗಿತ್ತು. ನಾನು ಬೆಂಗಳೂರಿನ ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವಾಗಲೇ ಈ ವಿಷಯ ಗೊತ್ತಾಗಿ ಆರೋಗ್ಯ ಸಚಿವ ಡಾ| ಕೆ. ಸುಧಾಕರ ಅವರೊಂದಿಗೆ ಮಾತನಾಡಿ ಬೇಡಿಕೆ ಈಡೇರಿಸುವಂತೆ, ನಮ್ಮ ಜನರಿಗೆ ಆಕ್ಸಿಜನ್‌ ಅನುಕೂಲ ಮಾಡಿಕೊಡುವಂತೆ ಒತ್ತಾಯಿಸಿದ್ದೆ ಎಂದು ತಿಳಿಸಿದರು.

ಇದೇ ವಿಷಯಕ್ಕೆ ಸಂಬಂ ಧಿಸಿದಂತೆ ಮೇ 3ರಂದು ಸಚಿವ ಸುಧಾಕರ, ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ, ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಅಧೀ ನ ಕಾರ್ಯದರ್ಶಿಗೆ ಪತ್ರ ಬರೆದಿದ್ದೆ. ವಿಜಯಪುರದ ಜಿಲ್ಲಾ ಆರೋಗ್ಯಾಧಿ ಕಾರಿಯಿಂದಲೂ ಪತ್ರ ಬರೆಸಿದ್ದೆ. ನನ್ನ ಬೇಡಿಕೆ ಅವಶ್ಯಕತೆ ಮತ್ತು ಗಂಭೀರತೆ ಅರಿತ ಡಾ| ಸುಧಾಕರ ಇಲಾಖೆ ನಿರ್ದೇಶಕರಿಗೆ ಸೂಚನೆ ನೀಡಿ ಮಂಜೂರಾತಿ ಪತ್ರದಲ್ಲಿ ಮುದ್ದೇಬಿಹಾಳದ ಹೆಸರು ಸೇರ್ಪಡೆ ಮಾಡುವಂತೆ ಸೂಚಿಸಿದ್ದರು ಎಂದರು.

ಮೇ 5ರಂದು ಆರೋಗ್ಯ ಇಲಾಖೆ ನಿರ್ದೇಶಕರ ಸೂಚನೆ ಮೇರೆಗೆ ಆರೋಗ್ಯ ಇಲಾಖೆ ಇಂಜಿನಿಯರಿಂಗ್‌ ಘಟಕದವರು ಕಾರ್ಯಪಾಲಕ ಅಭಿಯಂತರರಿಗೆ ಪತ್ರ ಬರೆದು ಮುದ್ದೇಬಿಹಾಳ ಸೇರಿದಂತೆ ರಾಜ್ಯವ್ಯಾಪಿ 40 ಪ್ಲಾಂಟ್‌ಗಳ ಪರಿಷ್ಕೃತ ನಿರ್ದೇಶಕರ ಅನುಮೋದಿತ ಪಟ್ಟಿ ಲಗತ್ತಿಸಿ ಸಂಬಂ ಧಿಸಿದ ಸ್ಥಳಗಳಲ್ಲಿ ಸಿವಿಲ್‌ ಮತ್ತು ವಿದ್ಯುತ್‌ ಕಾಮಗಾರಿ ಕೈಗೊಳ್ಳುವಂತೆ ತಿಳಿಸಿದ್ದಾರೆ.

ಕೋವಿಡ್‌ ಪರಿಸ್ಥಿತಿಯಲ್ಲಿ ಇದನ್ನು ಅತಿ ತುರ್ತು ಎಂದು ಪರಿಗಣಿಸಿ ಕೆಲಸ ಪ್ರಾರಂಭಿಸುವಂತೆಯೂ ಸೂಚಿಸಲಾಗಿದೆ ಎಂದು ಶಾಸಕರು ತಿಳಿಸಿದರು. ಒಟ್ಟಾರೆ ನಮ್ಮ ಜನರಿಗೋಸ್ಕರ ನಾನು ನಡೆಸಿದ ಪ್ರಯತ್ನಕ್ಕೆ ಯಶಸ್ಸು ದೊರಕಿದೆ. ನಮ್ಮ ಭಾಗದ ಜನರು ಇನ್ಮುಂದೆ ಆಕ್ಸಿಜನ್‌ ಸಮಸ್ಯೆಯಿಂದ ಮುಕ್ತರಾಗಲಿದ್ದಾರೆ.

Advertisement

ಮುದ್ದೇಬಿಹಾಳ ಸರ್ಕಾರಿ ಆಸ್ಪತ್ರೆಗೆ 50, ತಾಳಿಕೋಟೆ ಸರ್ಕಾರಿ ಆಸ್ಪತ್ರೆಗೆ 40 ಹಾಗೂ ನಾಲತವಾಡ ಸರ್ಕಾರಿ ಆಸ್ಪತ್ರೆಗೆ 30 ಸಿಲಿಂಡರ್‌ ಆಕ್ಸಿಜನ್‌ ಸ್ಥಳೀಯವಾಗಿ ಲಭ್ಯವಾಗಿ ಸಮಸ್ಯೆ ನಿವಾರಣೆ ಆಗಲಿದೆ. ನನ್ನ ಮನವಿಗೆ ಸ್ಪಂದಿಸಿ ಮಂಜೂರಾತಿ ನೀಡಿದ ಸಿಎಂ ಯಡಿಯೂರಪ್ಪ, ಆರೋಗ್ಯ ಸಚಿವ ಡಾ| ಸುಧಾಕರ ಅವರಿಗೆ ಅಭಿನಂದನೆ ಸಲ್ಲಿಸುತ್ತೇನೆ ಎಂದು ತಿಳಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next