Advertisement

ಆಕ್ಸಿಜನ್‌ ಅವಘಡ: ತಜ್ಞರ ತಂಡ ಭೇಟಿ

04:53 PM May 08, 2021 | Team Udayavani |

ಚಾಮರಾಜನಗರ: ಆಮ್ಲಜನಕಪೂರೈಕೆ ಬಳಿಕವೂ ಸಂಭವಿಸುತ್ತಿರುವಸಾವುಗಳ ಬಗ್ಗೆ ತಿಳಿದುಕೊಳ್ಳಲು ತಜ್ಞವೈದ್ಯರ ತಂಡ ಶುಕ್ರವಾರ ಭೇಟಿನೀಡಿ ಪರಿಶೀಲನೆ ನಡೆಸಿದೆ.ಮೈಸೂರು ಜಿಲ್ಲಾಸ್ಪತ್ರೆಯ ಸ್ಥಾನಿಕವೈದ್ಯಾಧಿಕಾರಿ ಡಾ. ನಯಾಜ್‌ಪಾಷಾ, ಪಿಕೆಟಿಬಿ ಆಸ್ಪತ್ರೆ ಅಧೀಕ್ಷಕಡಾ|ವಿರೂಪಾಕ್ಷ ಮತ್ತು ತಂಡಆಗಮಿಸಿ ಆಸ್ಪತ್ರೆಯ ವ್ಯವಸ್ಥೆ,ರೋಗಿಗಳ ಪರಿಸ್ಥಿತಿಯನ್ನುಪರಿಶೀಲಿಸಿದರು.

Advertisement

ದಿನ ನಿತ್ಯ ಆಸ್ಪತ್ರೆಗೆ ದಾಖಲಾಗುವರೋಗಿಗಳ ಸಂಖ್ಯೆ, ಆಸ್ಪತ್ರೆಯಲ್ಲಿನಔಷಧ ಹಾಗೂ ಐಸಿಯು ಬೆಡ್‌ಗಳಸಂಖ್ಯೆಯ ಕಲೆ ಹಾಕಿದರು.ಆಸ್ಪತ್ರೆಯ ವೈದ್ಯರ ಜತೆಸಮಾಲೋಚನೆ ನಡೆಸಿದರು. ಈವೇಳೆ ಡಾ.ನಯಾಜ್‌ ಪಾಷಾಸುದ್ದಿಗಾರರೊಂದಿಗೆ ಮಾತನಾಡಿ,ಆಸ್ಪತ್ರೆಯ ವ್ಯವಸ್ಥೆ ಕುರಿತುಪರಿಶೀಲನೆ ಮಾಡಿದ್ದೇವೆ. ಇನ್ನೆರಡುದಿನಗಳಲ್ಲಿ ಸರ್ಕಾರಕ್ಕೆ ವರದಿಸಲ್ಲಿಸುತ್ತೇವೆ ಎಂದು ಹೇಳಿದರು.

ಡಿಎಚ್‌ವಿಶ್ರಾಂತಿ: ರಕ್ತದೊತ್ತಡಹೆಚ್ಚಾಗಿ ಕುಸಿದು ಬಿದ್ದಿದ್ದ ಡಿಎಚ್‌ಎಡಾ.ಎಂ.ಸಿ.ರವಿ ವಿಶ್ರಾಂತಿಪಡೆಯುತ್ತಿದ್ದಾರೆ. ಆಮ್ಲಜನಕದುರಂತ ಪ್ರಕರಣದ ಸತ್ಯಶೋಧನೆನಡೆಸಲು ಹೈಕೋರ್ಟ್‌ ಸೂಚನೆಮೇರೆಗೆ ದಾಖಲೆಗಳನ್ನು ವಶಕ್ಕೆಪಡೆದುಕೊಳ್ಳಲು ದಾಳಿ ನಡೆಸಿದ್ದಬಳಿಕ ಕುಸಿದು ಬಿದ್ದಿದ್ದರು.

9 ಮಂದಿ ಸಾವು: ಜಿಲ್ಲೆಯಲ್ಲಿಶುಕ್ರವಾರ ಕೋವಿಡ್‌ನಿಂದ 9ಮಂದಿ ಮೃತಪಟ್ಟಿದ್ದಾರೆ. 611 ಹೊಸಪ್ರಕರಣಗಳು ವರದಿಯಾಗಿವೆ. 386ಮಂದಿ ಗುಣಮುಖರಾಗಿದ್ದಾರೆ.4017 ಸಕ್ರಿಯ ಪ್ರಕರಣಗಳಿವೆ. 50ಮಂದಿ ಐಸಿಯುನಲ್ಲಿದ್ದಾರೆ. 2220ಮಾದರಿಗಳನ್ನು ಪರೀಕ್ಷಿಸಲಾಗಿತ್ತು.

Advertisement

Udayavani is now on Telegram. Click here to join our channel and stay updated with the latest news.

Next