ಮಂಡ್ಯ: ಕೋವಿಡ್-19 ಜನರಿಗೆ ಹಲವಾರುಸಮಸ್ಯೆಗಳನ್ನು ತಂದೊಡ್ಡಿದೆ. ಅಕ್ಸಿಜನ್ ಸಮಸ್ಯೆತೀವ್ರವಾಗಿದ್ದು, ಸದ್ಯಕ್ಕೆ ಆಕ್ಸಿಜನ್ ಸಮಸ್ಯೆ ಸ್ವಲ್ಪಮಟ್ಟಿಗೆಸುಧಾರಿಸುವಂತೆ ಕಾಣುತ್ತಿದೆ.
ಭವಿಷ್ಯದಲ್ಲಿ ಇದು ಯಾವಸ್ವರೂಪ ಪಡೆಯಲಿದೆಯೋ ತಿಳಿದಿಲ್ಲ ಎಂದುಎಂ.ಬಿ.ನಾಗಣ್ಣಗೌಡ ತಿಳಿಸಿದರು.ಈ ಹಿನ್ನೆಲೆಯಲ್ಲಿ ಜನರಿಗೆ ಅಗತ್ಯ ವೈದ್ಯಕೀಯ ನೆರವುಒದಗಿಸಲು ಸಮಾನ ಮನಸ್ಕರು ಸೇರಿ ಒತ್ತಾಸೆ ಎಂಬ ತಂಡರಚಿಸಿಕೊಂಡಿದ್ದು, ಮೊದಲ ಹಂತದಲ್ಲಿ ಆಕ್ಸಿಜನ್‌ಕಾನ್ಸ್ ಕಾನ್ಸಟ್ರೇಟರ್‌ಗಳನ್ನು (ಉಸಿರುಗಾಳಿ ಸಂಗ್ರಾಹಕ)ಅವಶ್ಯವಿರುವವ ರಿಗೆ ಮನೆಗೆ ನೀಡಲಾಗುವುದು ಎಂದುಸುದ್ದಿಗೋಷ್ಠಿಯಲ್ಲಿ ಹೇಳಿದರು.
ತಮ್ಮ ಈ ಪ್ರಯತ್ನಕ್ಕೆ ಪೂರಕವಾಗಿ ಕರ್ನಾಟಕ ಮೆಡಿ ಕಲ್‌ಕೌನ್ಸಿಲ್ ಸದಸ್ಯರಾದ ಡಾ.ಎಚ್.ಎನ್.ರವೀಂದ್ರ,ಪ್ರವಾಸೋದ್ಯಮ ಮಂಡಳಿ ಮಾಜಿ ಅಧ್ಯಕ್ಷ ಬೆಂಗಳೂರಿನಸಯ್ಯದ್ ಅಹಮದ್ ಹುಸೇನ್, ಮುಸಾದಿಕ್ ಅವರುಉಸಿರುಗಾಳಿ ಸಂಗ್ರಾಹಕಗಳನ್ನು ನೀಡಿದ್ದು, ಒತ್ತಾಸೆ ತಂಡಅವರಿಗೆ ಅಭಾರಿಯಾಗಿದೆ.
ತಂಡದಿಂದ ಅಗತ್ಯ ವೈದ್ಯಕೀಯಪರಿಕರ ಸಂಗ್ರಹಿಸಲಾಗುವುದು. ಇಚ್ಛೆಯುಳ್ಳವರು ಒತ್ತಾಸೆಯೊಂದಿಗೆ ಕೈಜೋಡಿಸಿ ಜನರ ಸೇವೆ ಮಾಡಬಹುದಾಗಿದೆಎಂದು ಮನವಿ ಮಾಡಿದರು.
ಉಸಿರುಗಾಳಿ ಸಂಗ್ರಾಹಕದ ಅವಶ್ಯವಿರುವವರುಜಬೀವುಲ್ಲಾ, ಮೊ: 9742115343, ಸೋಮುಸ್ವರ್ಣಸಂದ್ರ, ಮೊ: 9845147077, ಜಾಕೀರ್ ಪಾಷ,ಮೊ:8618884343 ಷೇಕ್ ಉಬೇದುಲ್ಲಾ ಮೊ:9448414560, ಎಂ.ಬಿ.ನಾಗಣ್ಣಗೌಡ ಮೊ:9844466013 ಅವರನ್ನು ಸಂಪರ್ಕಿಸಬಹುದು ಎಂದುತಿಳಿಸಿದರು. ಗೋಷ್ಠಿಯಲ್ಲಿ ಕರ್ನಾಟಕ ಮೆಡಿಕಲ್ ಕೌನ್ಸಿಲ್‌ಸದಸ್ಯರಾದ ಡಾ.ಎಚ್.ಎನ್.ರವೀಂದ್ರ, ನಗರಸಭೆ ಸದಸ್ಯಜಾಕೀರ್ ಪಾಷ ಸೇರಿದಂತೆ ಮತ್ತಿತರರಿದ್ದರು.