Advertisement

ಬೆಳಗಾವಿ : ಆಕ್ಸಿಜನ್ ಸಾಗಿಸುತ್ತಿದ್ದ ಟ್ಯಾಂಕರ್ ಅಪಘಾತ

10:18 AM May 07, 2021 | Team Udayavani |

ಬೆಳಗಾವಿ  :  ಬಳ್ಳಾರಿಯಿಂದ ಮೆಡಿಕಲ್ ಆಕ್ಸಿಜನ್ ಹೊತ್ತು ಬೆಳಗಾವಿ ಆಸ್ಪತ್ರೆಯತ್ತ ಸಾಗುತ್ತಿದ್ದ ಟ್ಯಾಂಕರ್ ಅಪಘಾತಕ್ಕೀಡಾಗಿದೆ.

Advertisement

ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಸಮೀಪದ  ಮುತ್ನಾಳ ಗ್ರಾಮದ ಬಳಿಯ ಪೂನಾ-ಬೆಂಗಳೂರು ರಾ.ಹೆ-4ರಲ್ಲಿ  ಈ ಘಟನೆ ನಡೆದಿದೆ.  ಮುಂದೆ ಹೋಗುತ್ತಿದ್ದ ಲಾರಿಯನ್ನು ಓವರ್ ಟೇಕ್ ಮಾಡುವ ಲಾರಿಗೆ ಈ ಟ್ಯಾಂಕರ್ ಅಪ್ಪಳಿಸಿದೆ.

ಡಿಕ್ಕಿ ರಭಸಕ್ಕೆ ಆಕ್ಸಿಜನ್ ಟ್ಯಾಂಕರ್ ಟೈರ್ ಬ್ಲಾಸ್ಟ್ ಆಗಿದ್ದು, ಎಕ್ಸಲ್ ತುಂಡಾಗಿದೆ. ಸ್ಥಳಕ್ಕೆ ಪೊಲೀಸರು ಹಾಗೂ ಸಂಬಂಧಿತ ಅಧಿಕಾರಿಗಳು ಭೇಟಿ ನೀಡಿದ್ದು, ಬೆಳಗಾವಿಗೆ ಆಕ್ಸಿಜನ್ ಸ್ಥಳಾಂತರಿಸುವ ಕಾರ್ಯ ನಡೆದಿದೆ. ಹಿರೇಬಾಗೇವಾಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

Advertisement

Udayavani is now on Telegram. Click here to join our channel and stay updated with the latest news.

Next