Advertisement

ಸಾಗರೋತ್ತರ ಕನ್ನಡಿಗರು

07:52 PM Apr 24, 2021 | Team Udayavani |

ವಿಶ್ವವೇ ಕೊರೊನಾ ಸಾಂಕ್ರಾಮಿಕದ ಕರಿನೆರಳಲ್ಲಿದ್ದಾಗ ಜಗತ್ತಿನಾದ್ಯಂತ ಕಾಯಕದ ನಿಮಿತ್ತ ಹಂಚಿಹೋಗಿದ್ದ ಕನ್ನಡಿಗರು ಸಾಕಷ್ಟು ಸಂಕಷ್ಟಕ್ಕೆ ಸಿಲುಕಿದರು. ರೋಗದ ಅನಿಶ್ಚಿತತೆ, ಸಾಂಕ್ರಾಮಿಕತೆ, ಸಾವು ನೋವಿನ ಡಂಗುರ, ಪ್ರತಿಯೊಬ್ಬರ ಹೃದಯದಲ್ಲಿ  ಆತಂಕ, ಅಸಹಾಯಕತೆ, ದುಗುಡ ಮತ್ತು ದುಮ್ಮಾನಗಳಿಗೆ ಕಾರಣವಾಯಿತು. ಸಹಕಾರ, ಉಪಕಾರ, ಆತ್ಮಸ್ಥೈರ್ಯ ಮತ್ತು ಸಾಂತ್ವನದ ನುಡಿಗಳಿಗೆ ಕನ್ನಡಿಗರು ಹಾತೊರೆಯುತ್ತಿದ್ದಾಗ ಬೇರೆಬೇರೆ ದೇಶಗಳಲ್ಲಿದ್ದ ಕೆಲವು ಕನ್ನಡಿಗರನ್ನು ಸೇರಿಸಿ ಒಂದು ಯೋಜನೆ ರೂಪಿಸಿ ಅಂತರ್ಜಾಲವನ್ನು ವೇದಿಕೆಯನ್ನಾಗಿಸಿ ರೂಪುಗೊಂಡಿದ್ದೇ ಸಾಗರೋತ್ತರ ಕನ್ನಡಿಗರ ಸಂಘ.

Advertisement

ಸುಮಾರು 48 ಗಂಟೆಗಳಲ್ಲಿ ಪೋಸ್ಟರ್‌ ಸಿದ್ಧಪಡಿಸಿ ಸಾಗರೋತ್ತರ ಕನ್ನಡಿಗರೊಂದಿಗೆ ಸಂವಾದ ತಲೆಬರಹದೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಡಲಾಯಿತು. ಇದಕ್ಕೆ ಸಾಕಷ್ಟು ಮಂದಿಯ ಪ್ರತಿಸ್ಪಂದನೆಯೂ ದೊರೆಯಿತು. ಇದೇ ನಿರಂತರ 25 ಕಾರ್ಯಕ್ರಮಗಳಿಗೆ ನಾಂದಿಯಾಯಿತು.

ಯುಎಇಯಿಂದ ಚಂದ್ರಶೇಖರ್‌ ಲಿಂಗದಳ್ಳಿ,  ಇಂಗ್ಲೆಂಡ್‌ನಿಂದ ಗೋಪಾಲ ಕುಲಕರ್ಣಿ,  ಇಟಲಿಯಿಂದ ಹೇಮೇಗೌಡ ಮಧು, ಸೌದಿ ಅರೇಬಿಯಾದಿಂದ ರವಿ ಮಹದೇವ, ಯುಕೆಯಿಂದ ಬಸವ ಪಾಟೀಲ್‌ ಸೇರಿಕೊಂಡು ರಾಜಕೀಯ ನಾಯಕರು, ಧಾರ್ಮಿಕ ಗುರುಗಳು, ವಿವಿಧ ಕ್ಷೇತ್ರಗಳ ಸಾಧಕರನ್ನು ಕರೆಸಿ ಅವರೊಂದಿಗೆ ಮಾತುಕತೆ ನಡೆಸಲು ವೇದಿಕೆ ಕಲ್ಪಿಸಿ ಕನ್ನಡಿಗರ ಮನಸ್ಸನ್ನು ಹಗುರವಾಗಿಸಲು ಸಂವಾದ ಕಾರ್ಯಕ್ರಮಗಳು 2020ರ ಎಪ್ರಿಲ್‌- ಮೇ ತಿಂಗಳಲ್ಲಿ ಆರಂಭವಾಯಿತು.

ಪರಸ್ಪರ ಜವಾಬ್ದಾರಿಗಳನ್ನು ಹಂಚಿಕೊಂಡು ಎಲ್ಲರೂ ಒಂದೇ ಕುಟುಂಬದ ಸದಸ್ಯರು ಎಂಬಂತೆ ದುಡಿದು ಕೌಟುಂಬಿಕ ಮೌಲ್ಯಗಳನ್ನು ಒಳಗೊಂಡ ಬೆಳೆಯನ್ನು ಬೆಳೆದು ಅದನ್ನು ಜಗತ್‌ವ್ಯಾಪಿ ಮಾಡಿದೆವು. ಅತಿಥಿ ಯಾರು, ಯಾಕೆ, ಕಾರ್ಯಕ್ರಮ ಪ್ರಸ್ತುತಿ ಹೇಗಿರಬೇಕು, ಸಂವಾದ ಯಾವ ರೀತಿ ನಡೆಯಬೇಕು ಮೊದಲಾದ ವಿಚಾರಗಳ ಕುರಿತು ಸಂವಾದ ನಡೆಯುವ ಮುನ್ನ, ಅನಂತರ ಸಮಾಲೋಚನೆ ನಡೆಸುತ್ತ ಬಂದಿದ್ದರಿಂದ ಈವರೆಗೆ ನಿರಂತರವಾಗಿ ಸಂವಾದ ಕಾರ್ಯಕ್ರಮ ನಡೆಯುತ್ತ ಬಂದಿದೆ. ಇದಕ್ಕೆ ಪತ್ರಕರ್ತರಾದ ಹರೀಶ್‌ ರಾಮಯ್ಯ, ಮೆಲ್ವಿನ್‌, ವೆಲೇರಿಯನ್‌ ಡಾಲ್ಮೇಡಾ ಅವರು ಪ್ರೋತ್ಸಾಹದ ನೀರೆರದರು. ಇದರಿಂದ ಮುಂದೆ ಇನ್ನಷ್ಟು ಮಾಧ್ಯಮ ಮಿತ್ರರೂ ಜತೆಯಾದರು. ಇದರಿಂದ ಕಾರ್ಯಕ್ರಮದ ಪ್ರಸ್ತುತಪಡಿಸುವ ಶೈಲಿಯಲ್ಲಿ ಗುಣಮಟ್ಟ ಹೆಚ್ಚಾಯಿತು.

ಬಳಿಕ ಲಾಂಛನವೊಂದನ್ನು ಮಾಡಿ ಶ್ರೀ ನಿರ್ಮಾಲಾನಂದನಾಥ ಸ್ವಾಮೀಜಿ ಅವರಿಂದ ಬಿಡುಗಡೆಯನ್ನೂ ಮಾಡಿಸಲಾಯಿತು.

Advertisement

ಹೀಗೆ ವೇದಿಕೆ, ಲಾಂಛನ ಸೃಷ್ಟಿಯಾದ ಮೇಲೆ ಅನೇಕ ಅತಿಥಿಗಳನ್ನು ಪûಾತೀತವಾಗಿ, ಧರ್ಮಾತೀತವಾಗಿ, ಜಾತ್ಯತೀತವಾಗಿ ಕರೆದು ಸಂಕಷ್ಟದಲ್ಲಿರುವ ಕನ್ನಡಿಗರನ್ನು ತಾಯ್ನಾಡಿಗೆ ಮರಳಿಸುವ ಕಾರ್ಯ,

ಕೌಶಲಾಭಿವೃದ್ಧಿ ಚಟುವಟಿಕೆಗಳು,

ಜಗತ್ತಿನಾದ್ಯಂತ ಕನ್ನಡ ಭವನ ನಿರ್ಮಾಣಕ್ಕೆ ಒತ್ತಾಯ, ಸಾಗರೋತ್ತರದ ಕನ್ನಡಿಗರ

ಸಮಸ್ಯೆಯನ್ನು ಅರಿಯಲು ಸಂಪರ್ಕ ಸಾಧನಕ್ಕೆ ಒತ್ತಾಯ, ಕನ್ನಡಿಗರ ಸಾಧನೆಯನ್ನು ಗುರುತಿಸಿ ಹೆಮ್ಮೆಯ ಸಾಗರೋತ್ತರ ಕನ್ನಡಿಗ ಪ್ರಶಸ್ತಿ ವಿತರಣೆ, ಧಾರ್ಮಿಕ ಗುರುಗಳ ತಣ್ತೀಗಳು, ಅಭಿವೃಕ್ತಿ ಸ್ವಾತಂತ್ರ್ಯಕ್ಕೆ ವೇದಿಕೆ ನಿರ್ಮಾಣ, ಜ್ವಲಂತ ಸಮಸ್ಯೆಗಳನ್ನು ಸರಕಾರದ ಗಮನಕ್ಕೆ ತರುವ ಪ್ರಯತ್ನ, ಹಲವು ಕನ್ನಡ ಸಂಘಗಳಿಗೆ ಪ್ರೋತ್ಸಾಹ ನೀಡುವ ಕಾರ್ಯವನ್ನು ಮಾಡಿದೆವು.

9 ತಿಂಗಳುಗಳಲ್ಲಿ 25 ಸಂವಾದ ಕಾರ್ಯಕ್ರಮಗಳಲ್ಲಿ ಎಂ.ಬಿ. ಪಾಟೀಲ್‌,

ಸುರೇಶ್‌ ಅಂಗಡಿ, ಗೋವಿಂದ ಕಾರಜೋಳ, ಶಂಕರ್‌ ಬಿದರಿ, ರತ್ನಪ್ರಭಾ, ನಿರ್ಮಲಾನಂದನಾಥ ಸ್ವಾಮೀಜಿ, ಭಾಸ್ಕರ್‌ ರಾವ್‌, ಈಶ್ವರ್‌ ಖಂಡ್ರೆ, ಡಿ.ಕೆ. ಶಿವಕುಮಾರ್‌, ಸಂತೋಷ್‌ ಹೆಗ್ಡೆ, ಡಿ. ರೂಪಾ ಮೌದ್ಗೀಲ್‌, ವೀರೇಂದ್ರ ಹೆಗ್ಗಡೆ, ರವಿ ಡಿ. ಚೆನ್ನಣ್ಣವರ್‌, ಎಚ್‌.ಡಿ. ಕುಮಾರಸ್ವಾಮಿ,

ಡಾ| ಶಿವಾಚಾರ್ಯ ಸ್ವಾಮಿ, ಸೀಮಂತ್‌ ಕುಮಾರ್‌ ಸಿಂಗ್‌, ಡಾ| ಮನು ಬಳಿಗಾರ್‌, ಟಿ.ಎಸ್‌. ನಾಗಾಭರಣ, ಶ್ರೀ ಸುಭುದೇಂದ್ರ ತೀರ್ಥ, ಸುನೀಲ್‌ ಪುರಾಣಿಕ್‌,

ಶ್ರೀ ಶಿವಾನಂದಪುರಿ ಮಹಾಸ್ವಾಮಿ, ಬಿ.ಸಿ. ಪಾಟೀಲ್‌, ಕ್ಯಾ| ಗಣೇಶ್‌ ಕಾರ್ಣಿಕ್‌,  ಶ್ರೀ ನಿರ್ಭಯಾನಂದ ಸರಸ್ವತಿ ಸ್ವಾಮಿ ಅವರನ್ನು ಕರೆಸಿ, ಸಂವಾದ ನಡೆಸಿ, ಎಲ್ಲರ

ಮನಸ್ಸನ್ನು ಹಗುರವಾಗಿಸುವ ಕಾರ್ಯವನ್ನು ನಡೆಸಿತು.

ಬಸವ ಪಾಟೀಲ, ಕೊಂಡಗೂಳಿಯಂವ,  ಯುಕೆ

Advertisement

Udayavani is now on Telegram. Click here to join our channel and stay updated with the latest news.

Next