Advertisement

ಸಂತೆಕಟ್ಟೆ ಓವರ್‌ಪಾಸ್‌ ಕಾಮಗಾರಿಗೆ ಸಿದ್ಧತೆ

12:24 AM Jan 03, 2023 | Team Udayavani |

ಉಡುಪಿ: ಉಡುಪಿ- ಕುಂದಾಪುರ ಮುಖ್ಯರಸ್ತೆಯ ರಾಷ್ಟ್ರೀಯ ಹೆದ್ದಾರಿ-66ರ ಸಂತೆಕಟ್ಟೆ ಜಂಕ್ಷನ್‌ನಲ್ಲಿ ವೆಹಿಕ್ಯೂಲರ್‌ ಓವರ್‌ಪಾಸ್‌ ನಿರ್ಮಾಣ ಕಾಮಗಾರಿಗೆ ಸಿದ್ಧತೆ ನಡೆಸಲಾಗುತ್ತಿದೆ.

Advertisement

ಹಲವಾರು ವರ್ಷಗಳಿಂದ ಸಂಚಾರ ದಟ್ಟಣೆ, ಅಪಘಾತಗಳ ಕೇಂದ್ರವಾಗಿದ್ದ ಈ ಜಂಕ್ಷನ್‌ನಲ್ಲಿ ಓವರ್‌ಪಾಸ್‌ ನಿರ್ಮಿಸುವಂತೆ ಸಾರ್ವಜನಿಕ ವಲಯದಲ್ಲಿ ಬೇಡಿಕೆ ಹೆಚ್ಚಿತ್ತು. ಅನಂತರ ಇಲ್ಲಿ ಓವರ್‌ಪಾಸ್‌ ನಿರ್ಮಾಣ ಕುರಿತ ಪ್ರಸ್ತಾವನೆಗೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ(ಎನ್‌ಎಚ್‌ಎಐ) 27.4 ಕೋ. ರೂ. ವೆಚ್ಚದ ಅನುಮೋದನೆ ನೀಡಿದ್ದು, ಇದೀಗ ಟೆಂಡರ್‌ ಪಕ್ರಿಯೆ ಪೂರ್ಣಗೊಂಡು ಕಾಮಗಾರಿಗೆ ತಯಾರಿ ನಡೆಸಲಾಗುತ್ತಿದೆ. ಟ್ರಿನಿಟಿ ಕನ್‌ಸ್ಟ್ರಕ್ಷನ್‌ ಸಂಸ್ಥೆಯು ಓವರ್‌ಪಾಸ್‌ ನಿರ್ಮಾಣ ಗುತ್ತಿಗೆ ಪಡೆದಿದೆ.

ಸೋಮವಾರದಿಂದ ಜಂಕ್ಷನ್‌ನಲ್ಲಿ ವಾಹನಗಳು ಸಂಚರಿಸದಂತೆ ಬ್ಯಾರಿಕೇಡ್‌ ಇಟ್ಟು ನಿರ್ಬಂಧಿಸಲಾಗಿದ್ದು, ಸರ್ವಿಸ್‌ ರಸ್ತೆ ಮೂಲಕ ವಾಹನಗಳ ಓಡಾಟಕ್ಕೆ ಅವಕಾಶ ಮಾಡಿಕೊಡಲಾಗಿದೆ. ಜ.12ಕ್ಕೆ ಭೂಮಿ ಪೂಜೆ ಜರಗಲಿದ್ದು, ಒಂದು ವರ್ಷದೊಳಗೆ ಕಾಮಗಾರಿ ಪೂರ್ಣಗೊಳ್ಳಬಹುದು ಎಂದು ಹೆದ್ದಾರಿ ಸಚಿವಾಲಯದ ಮೂಲಗಳು ತಿಳಿಸಿದೆ.

ಸಂತೆಕಟ್ಟೆ ಜಂಕ್ಷನ್‌ ಅವ್ಯವಸ್ಥೆ ಸಂಬಂಧಿಸಿ “ಉದಯವಾಣಿ’ ಸರಣಿ ವರದಿ ಪ್ರಕಟಿಸಿ ಗಮನ ಸೆಳೆದಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next