ನವದೆಹಲಿ: ಕೋಟ್ಯಂತರ ಭಾರತೀಯರು ಬಳಸುತ್ತಿರುವ ಜಗತ್ತಿನ ಅತ್ಯಂತ ವಿಶ್ವಾಸಾರ್ಹ ಡಿಜಿಟಲ್ ಐಡಿ ಆಧಾರ್ ವ್ಯವಸ್ಥೆ ಗೌಪ್ಯತೆ ಮತ್ತು ಭದ್ರತಾ ಲೋಪದೋಷ ಹೊಂದಿರುವುದಾಗಿ ಆರೋಪಿಸಿರುವ ಜಾಗತಿಕ ಕ್ರೆಡಿಟ್ ಏಜೆನ್ಸಿ ಮೂಡೀಸ್ ವರದಿಯನ್ನು ಕೇಂದ್ರ ಸರ್ಕಾರ ಸಾರಾಸಗಟಾಗಿ ತಳ್ಳಿಹಾಕಿದೆ.
ಇದನ್ನೂ ಓದಿ:Asian Games: ಸೈಲಿಂಗ್ ನಲ್ಲಿ ಭಾರತಕ್ಕೆ ಚೊಚ್ಚಲ ಪದಕ; ರಜತ ಗೆದ್ದ ನೇಹಾ ಠಾಕೂರ್
ದೇಶದಲ್ಲಿನ ಆಧಾರ್ ವ್ಯವಸ್ಥೆಯನ್ನು ದ ಯೂನಿಕ್ ಐಡೆಂಟಿಫಿಕೇಶನ್ ಆಥಾರಿಟಿ ಆಫ್ ಇಂಡಿಯಾ (UIDAI) ನೋಡಿಕೊಳ್ಳುತ್ತಿದೆ. ಆದರೆ ಮೂಡೀಸ್ ಆರೋಪದಲ್ಲಿ ಯಾವುದೇ ಹುರುಳಿಲ್ಲ ಎಂದು ಕೇಂದ್ರ ಸರ್ಕಾರ ತಿರುಗೇಟು ನೀಡಿದೆ.
ವಿಶ್ವದ ಅತ್ಯಂತ ವಿಶ್ವಾಸನೀಯ ಡಿಜಿಟಲ್ ಐಡಿ ಆಧಾರ್ ವಿರುದ್ಧ ಜಾಗತಿಕ ಸಂಸ್ಥೆ ಮೂಡೀಸ್ ನಿರಾಧಾರ ಆರೋಪ ಮಾಡುವುದರಲ್ಲಿ ಯಾವುದೇ ಸತ್ಯಾಂಶವಿಲ್ಲ. ಅಂತಾರಾಷ್ಟ್ರೀಯ ಹಣಕಾಸು ನಿಧಿ(ಐಎಂಎಫ್) ಮತ್ತು ವಿಶ್ವ ಬ್ಯಾಂಕ್ ಕೂಡಾ ಆಧಾರ್ ವ್ಯವಸ್ಥೆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿವೆ. ನಮ್ಮ ಡಿಜಿಟಲ್ ಐಡೆಂಟಿಫಿಕೇಶನ್ ಸಿಸ್ಟಮ್ ಅನ್ನು ತಮ್ಮ ದೇಶದಲ್ಲೂ ಹೇಗೆ ಜಾರಿಗೊಳಿಸಬಹುದು ಎಂಬ ಬಗ್ಗೆ ಹಲವು ದೇಶಗಳು ಯುಐಡಿಎಐ ಅನ್ನು ಸಂಪರ್ಕಿಸಿರುವುದಾಗಿ ಕೇಂದ್ರ ಸರ್ಕಾರ ಹೇಳಿದೆ.
ಮೂಡೀಸ್ ಆರೋಪವೇನು?
ಡಿಜಿಟಲ್ ಐಡಿ ಆಧಾರ್ ನ ಕೇಂದ್ರೀಕೃತ ವ್ಯವಸ್ಥೆಯು ಬಳಕೆದಾರರ ಗುರುತಿನ ಮಾಹಿತಿಯು ಆನ್ ಲೈನ್ ಬಳಕೆದಾರರಿಗೆ ಲಭ್ಯವಾಗುವ ಮೂಲಕ ಗೌಪ್ಯತೆ ಮತ್ತು ಭದ್ರತೆಗೆ ಅಪಾಯಕಾರಿಯಾಗಿ ಪರಿಣಮಿಸಲಿದೆ ಎಂದು ಮೂಡೀಸ್ ವರದಿಯಲ್ಲಿ ಆರೋಪಿಸಿದೆ. ಆದರೆ ಆಧಾರ್ ಕುರಿತ ಆರೋಪಕ್ಕೆ ಮೂಡೀಸ್ ಯಾವುದೇ ನಿಖರ ಅಂಕಿಅಂಶದ ಮಾಹಿತಿಯನ್ನು ಕೊಟ್ಟಿಲ್ಲ ಎಂದು ವರದಿ ತಿಳಿಸಿದೆ.