Advertisement

ವಿಶ್ವದ 8 ಕೋಟಿ ಮಂದಿಗೆ ಗ್ಲುಕೋಮಾ

05:39 PM Mar 15, 2020 | Suhan S |

ಮಂಡ್ಯ: ವಿಶ್ವದಲ್ಲಿ 8 ಕೋಟಿ ಮಂದಿ ಗ್ಲುಕೋಮಾ ಕಾಯಿಲೆಯಿಂದ ಬಳುತ್ತಿದ್ದು, ಭಾರತದಲ್ಲಿ ಸುಮಾರು 1.10 ಕೋಟಿ ಜನತೆ ಈ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದು ಕೃಷಿಕ್‌ ಲಯನ್ಸ್‌ ಸಂಸ್ಥೆ ಪೋಷಕ ಕೆ.ಟಿ.ಹನುಮಂತು ಆತಂಕ ವ್ಯಕ್ತ ಪಡಿಸಿದರು.

Advertisement

ತಾಲೂಕಿನ ಕಾರಸವಾಡಿ ಪ್ರಾಥಮಿಕ ಶಾಲಾ ಅವರಣದಲ್ಲಿ ಕೃಷಿಕ್‌ ಲಯನ್ಸ್‌ ಸಂಸ್ಥೆ, ನಂಜಮ್ಮ- ಮೋಟೇಗೌಡ ಚಾರಿಟಬಲ್‌ ಟ್ರಸ್ಟ್‌, ಭಾರತೀಯ ದಂತ ವೈದ್ಯಕೀಯ ಸಂಘದ ವತಿಯಿಂದ ನಡೆದ ವಿಶ್ವ ಗ್ಲುಕೋಮಾ ದಿನ-2020ರ ಅಂಗವಾಗಿ ಕಣ್ಣು, ದಂತ ಹಾಗೂ ಮಕ್ಕಳ ಆರೋಗ್ಯ ತಪಾಸಣೆಯನ್ನು ಉದ್ಘಾಟಿಸಿ ಮಾತನಾಡಿದರು.

11 ಲಕ್ಷ ಮಂದಿ ಕುರುಡು: 2010ರ ವೇಳೆಗೆ ವಿಶ್ವದಲ್ಲಿ 6 ಕೋಟಿ ಜನರು ಗ್ಲುಕೋಮಾ ಕಾಯಿಲೆಗೆ ಒಳಗಾಗಿದ್ದರೆ, 2020ರ ಹೊತ್ತಿಗೆ 8 ಕೋಟಿ ಜನತೆ ಈ ಕಾಯಿಲೆಗೆ ತುತ್ತಾಗಿದ್ದಾರೆ. ಸರಿಯಾದ ಚಿಕಿತ್ಸೆ ಪಡೆಯದೆ ಭಾರತದಲ್ಲಿ ಸುಮಾರು 11 ಲಕ್ಷ ಮಂದಿ ಶಾಶ್ವತವಾಗಿ ಕುರುಡ ರಾಗಿದ್ದಾರೆ ಎಂದು ವಿವರಿಸಿದರು. ಮುಂದುವರಿದ ರಾಷ್ಟ್ರಗಳಲ್ಲಿ ಕಂಡುಹಿಡಿಯಲಾಗದ ಗ್ಲುಕೋಮಾ ಸಂಖ್ಯೆ ಶೇ. 50ರಷ್ಟಿದ್ದರೆ ಭಾರತದಂತಹ ರಾಷ್ಟ್ರಗಳಲ್ಲಿ ಶೇ. 90ರಷ್ಟಿದ್ದು, ಇದು ಈ ದೇಶದ ಅತ್ಯಂತ ದೊಡ್ಡ ಪಿಡುಗಾಗಿದೆ ಎಂದು ಹೇಳಿದರು.

ದೃಷ್ಟಿ ಕದಿಯುವ ಗಂಭೀರ ಕಾಯಿಲೆ: ಸಕ್ಕರೆ ಕಾಯಿಲೆಯಂತೆ ಜೀವನ ಪರ್ಯಂತ ಇರುವಂತಹ ಕಾಯಿಲೆ. ಇದನ್ನು ನಿಯಂತ್ರಿಸಬಹುದು. ಈ ರೋಗ 40 ವರ್ಷ ಮೇಲ್ಪಟ್ಟವರಲ್ಲಿ ಕಾಣಿಸಿ ಕೊಳ್ಳುತ್ತದೆ. ಯಾವುದೇ ರೋಗ ಲಕ್ಷಣಗಳಿಲ್ಲದೆ ದೃಷ್ಟಿ ಕದಿಯುವ ಗಂಭೀರ ಕಾಯಿಲೆ ಗುÉಕೋಮಾ ಕಾಯಿಲೆ ಎಂದು ಎಚ್ಚರಿಸಿದರು.

ಆಫ್ಟಿಕ್ ನರಕ್ಕೆ ಬಹಳಷ್ಟು ತೊಂದರೆ: ಗ್ಲುಕೋಮಾ ಕಾಯಿಲೆಯನ್ನು ನಿಶ್ಯಬ್ಧ ದೃಷ್ಟಿಚೋರ ಎನ್ನುತ್ತಾರೆ. ಇದರಲ್ಲಿ ಕಣ್ಣಿನ ಒಳಗಿನ ಒತ್ತಡ ಹೆಚ್ಚಾಗುತ್ತದೆ ಎಂದ ಅವರು, ಈ ಕಾಯಿಲೆ ಗಂಭೀರವಾಗಲು ಹೆಚ್ಚಿನ ಸಂದರ್ಭದಲ್ಲಿ ಕಣ್ಣಿನ ದೃಷ್ಟಿ ನರವಾದ ಆಫ್ಟಿಕ್‌ ನರಕ್ಕೆ ಬಹಳಷ್ಟು ತೊಂದರೆ ಉಂಟಾಗುತ್ತದೆ ಎಂದು ಹೇಳಿದರು.

Advertisement

ಅರಿವಿನ ಸಪ್ತಾಹ ಕಾರ್ಯಕ್ರಮ: ಈ ಕಾಯಿಲೆಯಿಂದ ನಾಶವಾದ ದೃಷ್ಟಿ ಮತ್ತು ಪುನಶ್ಚೇತನಗೊಳಿಸಲು ಸಾಧ್ಯವಿಲ್ಲ. ಮುಂದೆ ಬರುವಂತಹ ದೃಷ್ಟಿ ದೋಷವನ್ನು ಮಾತ್ರ ತಡೆಯಬಹುದು. ಪ್ರತಿ ವರ್ಷ ಮಾರ್ಚ್‌ 8 ರಿಂದ 14ರವರೆಗೆ ಈ ಕಾಯಿಲೆ ಬಗ್ಗೆ ಜನಸಾಮಾನ್ಯರಲ್ಲಿ ಅರಿವು ಮೂಡಿಸಲು ಗ್ಲುಕೋಮಾ ಅರಿವಿನ ಸಪ್ತಾಹ ಕಾರ್ಯಕ್ರಮವಾಗಿ ವಿಶ್ವದಾದ್ಯಂತ ಆಚರಿಸಲಾಗುತ್ತದೆ ಎಂದರು. ಕಣ್ಣಿನ ಒತ್ತಡ ಮತ್ತು ನರದ ಪರೀಕ್ಷೆಯನ್ನು ವರ್ಷಕ್ಕೊಮ್ಮೆಯಾದರೂ ತಪಾಸಣೆ ಮಾಡಿಸಿ ಗ್ಲುಕೋಮಾ ಕಂಡುಬಂದಲ್ಲಿ ತಜ್ಞ ವೈದ್ಯರಿಂದ ಸೂಕ್ತ ಚಿಕಿತ್ಸೆ ಪಡೆದು ಇದರಿಂದ ದೂರ ಇರುವುದು ಸೂಕ್ತ ಎಂದು ಸಲಹೆ ನೀಡಿದರು.

ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಪ್ರೀತೇಶ್‌ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರಪ್ರಶಸ್ತಿ ವಿಜೇತ ಕಾರಸವಾಡಿ ಮಹದೇವು, ಕೃಷಿಕ್‌ ಲಯನ್ಸ್‌ ಸಂಸ್ಥೆ ಖಜಾಂಚಿ ಮಂಗಲ ಎಂ. ಯೋಗೀಶ್‌, ಸಮೃದ್ಧಿ ಲಯನ್ಸ್‌ನ ನೀನಾ ಪಟೇಲ್‌, ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪ್ರಕಾಶ್‌, ಸಂತೇಕಸಲಗೆರೆ ಬಸವರಾಜು ಇದ್ದರು. ವರ್ಧಮಾನ್‌ ಜೈನ್‌ ಆಸ್ಪತ್ರೆಯ ವೈದ್ಯಾಧಿಕಾರಿ ಡಾ. ನಿರ್ಮಲಾ ಪ್ರಸಾದ್‌ ಹಾಗೂ ಆಸ್ಪತ್ರೆಯ ತಜ್ಞ ವೈದ್ಯರು ಕಣ್ಣಿನ ತಪಾಸಣೆ ನಡೆಸಿದರು. ಡಾ. ಹರೀಶ್‌ ಮಕ್ಕಳ ಪರೀಕ್ಷೆ ನಡೆಸಿ ಔಷಧಗಳನ್ನು ವಿತರಿಸಿದರು. ಡಾ. ನಿಸರ್ಗ ಅರುಣಾನಂದ ದಂ ತಪಾಸಣೆ ನಡೆಸಿದರು.

ಹಲವರು ಕಾರ್ಯಕ್ರಮದಲ್ಲಿ ಭಾಗವಹಿಸಿ ತಪಾಸಣೆ ಮಾಡಿಸಿಕೊಂಡರು. ಅದರಲ್ಲಿ 15 ಮಂದಿಯನ್ನು ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆಗೆ ಆಯ್ಕೆ ಮಾಡಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next