Advertisement

20 ಲಕ್ಷ ರೂ.ಗಳ 201 ಕಿಲೋ ಗಾಂಜಾ ವಶ; ಇಬ್ಬರ ಬಂಧನ

03:30 PM Oct 27, 2017 | Team Udayavani |

ರಾಜಾಮಹೇಂದ್ರವರಂ : ಕಂದಾಯ ಗುಪ್ತಚರ ವಿಭಾಗದವರು ಇಲ್ಲಿಗೆ ಸಮೀಪ ಕಾರೊಂದನ್ನು ತಡೆದು ತಪಾಸಣೆ ನಡೆಸಿದಾಗ 201 ಕಿಲೋ ಗಾಂಜಾ ಪತ್ತೆಯಾಗಿದ್ದು ಈ ಸಂಬಂಧ ಇಬ್ಬರನ್ನು ಬಂಧಿಸಿದ್ದಾರೆ. 

Advertisement

ನಿನ್ನೆ ಗುರುವಾರ ವಿಜಯವಾಡ ಮತ್ತು ಕಾಕಿನಾಡ ಡಿಆರ್‌ಐ ಅಧಿಕಾರಿಗಳು ಖಚಿತ ಮಾಹಿತಿಯ ಮೇರೆಗೆ ಶೋಧ ಕಾರ್ಯಾಚರಣೆ ನಡೆಸಿ ರಾಜಾಮಹೇಂದ್ರವರಂ ಸಮೀಪ ಶಂಕಿತ ಕಾರನ್ನು ತಡೆದು ಅದರೊಳಗಿದ್ದ 201.35 ಕಿಲೋ ಗಾಂಜಾವನ್ನು ವಶಪಡಿಸಿಕೊಂಡರು.

ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಟುನಿ ಸಮೀಪದ ಕಾಟನಂದೂರು ಗ್ರಾಮದಿಂದ ಈ ಗಾಂಜಾವನ್ನು ತರಲಾಗಿದ್ದು ಅದನ್ನು ಪಶ್ಚಿಮ ಗೋದಾವರಿಯ ದೇವರಪಲ್ಲಿ  ಪಟ್ಟಣಕ್ಕೆ ಒಯ್ಯಲಾಗುತ್ತಿತ್ತು.

ಈ ಗಾಂಜಾದ ಬೆಲೆ ಅಂದಾಜು 20 ಲಕ್ಷ ರೂ. ಇದೆ. ಕಾರನ್ನು ವಶಪಡಿಸಿಕೊಂಡ ಚಾಲಕನ ಸಹಿತ ಇಬ್ಬರನ್ನು ಬಂಧಿಸಲಾಗಿದೆ ಎಂದು ಡಿಆರ್‌ಐ ತಿಳಿಸಿದೆ. 

Advertisement

Udayavani is now on Telegram. Click here to join our channel and stay updated with the latest news.

Next