Advertisement

ಪಾದಯಾತ್ರೆ ವೇಳೆ ಅವಘಡ : ಜೀಪ್ ಡಿಕ್ಕಿ ಹೊಡೆದು 20 ಯಾತ್ರಾರ್ಥಿಗಳು ಗಂಭೀರ

01:26 PM Nov 27, 2021 | Team Udayavani |

ಪುಣೆ : ಆಳಂದಿಯಲ್ಲಿರುವ ವಿಠ್ಠಲನ ದರ್ಶನಕ್ಕೆ ಪಾದಯಾತ್ರೆ ಮೂಲಕ ತೆರಳುತ್ತಿದ್ದ ಭಕ್ತರ ಗುಂಪಿಗೆ ಜೀಪೊಂದು ಡಿಕ್ಕಿ ಹೊಡೆದ ಪರಿಣಾಮ ಇಪ್ಪತ್ತು ಮಂದಿ ಯಾತ್ರಾರ್ಥಿಗಳು ಗಂಭೀರ ಗಾಯಗೊಂಡ ಘಟನೆ ಪುಣೆಯ ವಡಗಾವ್ ಮಾವೆಲ್ ಪ್ರದೇಶದಲ್ಲಿ ಶನಿವಾರ ಮುಂಜಾನೆ ಸಂಭವಿಸಿದೆ.

Advertisement

ಪುಣೆಯಿಂದ ಇಪ್ಪತೈದು ಕಿಲೋಮೀಟರ್ ದೂರದಲ್ಲಿರುವ ಆಳಂದಿ ವಿಠ್ಠಲ ದೇವಸ್ಥಾನಕ್ಕೆ ಭಕ್ತರ ತಂಡವೊಂದು ಪಾದಯಾತ್ರೆಯ ಮೂಲಕ ತೆರಳುತ್ತಿತ್ತು, ಈ ವೇಳೆ ರಸ್ತೆ ಬದಿ ನಡೆದುಕೊಂಡು ತೆರಳುತ್ತಿದ್ದ ಯಾತ್ರಾರ್ಥಿಗಳ ಗುಂಪಿಗೆ ಹಿಂದಿನಿಂದ ಬಂದ ಜೀಪೊಂದು ಡಿಕ್ಕಿ ಹೊಡೆದಿದೆ, ಘಟನೆಯಲ್ಲಿ ಸುಮಾರು ಇಪ್ಪತ್ತು ಮಂದಿ ಗಂಭೀರ ಗಾಯಗೊಂಡಿದ್ದಾರೆ.

ಗಾಯಗೊಂಡವರನ್ನು ಕೂಡಲೇ ಸ್ಥಳೀಯ ಬೇರೆ ಬೇರೆ ಆಸ್ಪತ್ರೆಗಳಿಗೆ ಸಾಗಿಸಲಾಗಿದ್ದು ಚಿಕಿತ್ಸೆ ನೀಡಲಾಗುತ್ತಿದೆ ಎಂದು ವಡ್ಗಾಂವ್ ಮಾವಲ್ ಪೊಲೀಸರು ತಿಳಿಸಿದ್ದಾರೆ.

ಜೀಪು ಚಾಲಕನನ್ನು ವಶಕ್ಕೆ ಪಡೆದ ಪೊಲೀಸರು ತನಿಖೆ ನಡೆಸುತ್ತಿದ್ದಾರೆ

ಇದನ್ನೂ ಓದಿ : ಲಸಿಕೆ ಹಾಕಲು ಬಂದ ಆರೋಗ್ಯ ಸಿಬ್ಬಂದಿಯನ್ನು ಕಂಡು, ಮೈಯಲ್ಲಿ ದೇವರು ಬಂದಂತೆ ನಟಿಸಿದ ಭೂಪ.!

Advertisement
Advertisement

Udayavani is now on Telegram. Click here to join our channel and stay updated with the latest news.

Next