Advertisement

ವಿಧಾನಸಭಾ ಚುನಾವಣೆ: NOTA ಆಯ್ಕೆ ಮಾಡಿಕೊಂಡ 2.6 ಲಕ್ಷ ಮತದಾರರು

09:55 PM May 13, 2023 | Team Udayavani |

ಬೆಂಗಳೂರು : ಚುನಾವಣಾ ಆಯೋಗದ ಅಂಕಿಅಂಶಗಳ ಪ್ರಕಾರ ಮೇ 10 ರಂದು ನಡೆದ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ತಮ್ಮ ಹಕ್ಕು ಚಲಾಯಿಸಿದ 2.6 ಲಕ್ಷಕ್ಕೂ ಹೆಚ್ಚು ಮತದಾರರು ‘ಮೇಲಿನ ಯಾವುದೂ ಅಲ್ಲ’ ಅಥವಾ ನೋಟಾ ಆಯ್ಕೆಯನ್ನು ಬಳಸಿದ್ದಾರೆ.

Advertisement

ಮಧ್ಯಾಹ್ನ 3.30ರ ಸುಮಾರಿಗೆ ಲಭ್ಯವಿರುವ ಅಂಕಿಅಂಶಗಳ ಪ್ರಕಾರ, ಬುಧವಾರ ಮತ ಚಲಾಯಿಸಲು ಬಂದ ಸುಮಾರು 3.84 ಕೋಟಿ ಜನರಲ್ಲಿ 2,59,278 (ಶೇ. 0.7) ಮಂದಿ ನೋಟಾಕ್ಕೆ ಮತ ಚಲಾಯಿಸಿದ್ದಾರೆ.

ವಿದ್ಯುನ್ಮಾನ ಮತಯಂತ್ರಗಳಲ್ಲಿ (ಇವಿಎಂ) ನೋಟಾ ಆಯ್ಕೆಯನ್ನು 2013 ರಲ್ಲಿ ಪರಿಚಯಿಸಲಾಗಿತ್ತು ಇದು ಕಪ್ಪು ಶಿಲುಬೆಯೊಂದಿಗೆ ಬ್ಯಾಲೆಟ್ ಪೇಪರ್ ಚಿಹ್ನೆಯನ್ನು ಹೊಂದಿದೆ.

ಸೆಪ್ಟೆಂಬರ್ 2013 ರಲ್ಲಿ ಸುಪ್ರೀಂ ಕೋರ್ಟ್ ಆದೇಶದ ನಂತರ, ಚುನಾವಣಾ ಆಯೋಗವು ಇವಿಎಂಗಳಲ್ಲಿ ನೋಟಾ ಬಟನ್ ಅನ್ನು ಮತದಾನ ಫಲಕದಲ್ಲಿ ಕೊನೆಯ ಆಯ್ಕೆಯಾಗಿ ಸೇರಿಸಿತ್ತು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next