Advertisement

ಮದುವೆ ಊಟ ಮಾಡಿದ 150 ಮಂದಿ ಅಸ್ವಸ್ಥ; ಮೂವರ ಸ್ಥಿತಿ ಗಂಭೀರ

04:05 PM Mar 01, 2017 | udayavani editorial |

ಬಿಜನೂರ್‌ : ಇಲ್ಲಿನ ಗ್ರಾಮವೊಂದರಲ್ಲಿ ಮದುವೆ ಊಟ ಮಾಡಿದ ಸುಮಾರು 150 ಮಂದಿ ವಾಂತಿ – ಬೇಧಿಗೆ ಗುರಿಯಾದ ಘಟನೆ ವರದಿಯಾಗಿದೆ.

Advertisement

ನಗೀನಾ ಪೊಲೀಸ್‌ ಠಾಣೆ ವ್ಯಾಪಿಗೆ ಒಳಪಡುವ ತುಖ್‌ಮಾಪುರ್‌ ಹರ್‌ವಂಶ್‌ ಗ್ರಾಮದಲ್ಲಿ ನಡೆದ ಮದುವೆ ಸಮಾರಂಭದಲ್ಲಿ  ಊಟಮಾಡಿ ತೀವ್ರ ಅಸ್ವಸ್ಥರಾದ ಸುಮಾರು 150 ಜನರನ್ನು ಒಡನೆಯೇ ಆಸ್ಪತ್ರೆಗೆ ಒಯ್ಯಲಾಯಿತು. ಈ ಪೈಕಿ 40 ಮಂದಿಯನ್ನು ಒಳರೋಗಿಗಳನ್ನಾಗಿ  ದಾಖಲಿಸಲಾಗಿ ಅವರಲ್ಲಿ ಮೂವರ ಸ್ಥಿತಿ ಚಿಂತಾಜನಕವಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ. 

ಮದುವೆ ಊಟದ ಐಟಂ ಗಳ ಸ್ಯಾಂಪಲ್‌ಗ‌ಳನ್ನು ಪರೀಕ್ಷೆಗಾಗಿ ಪ್ರಯೋಗಶಾಲೆಗೆ ಕಳುಹಿಸಲಾಗಿದೆ. ಅಲ್ಲಿಂದ ವರದಿ ಬಂದ ಬಳಿಕವಷ್ಟೇ ಆಹಾರದಲ್ಲಿ ಬೆರೆತ ವಿಷವಸ್ತು ಯಾವುದೆಂಬುದು ಗೊತ್ತಾದೀತು ಎಂದು ಪೊಲೀಸರು ತಿಳಿಸಿದ್ದಾರೆ. 

ಸುದ್ದಿ ತಿಳಿದೊಡನೆಯೇ ನಗೀನಾ  ಸಮುದಾಯದ ಆರೋಗ್ಯ ಕೇಂದ್ರ ವೈದ್ಯಕೀಯ ತಂಡವನ್ನು ಕಳುಹಿಸಲಾಗಿತ್ತು. ವೈದ್ಯಕೀಯ ಸಿಬಂದಿಗಳು ಅಸ್ವಸ್ಥರಿಗೆ ಸಕಾಲದಲ್ಲಿ ಪ್ರಾಥಮಿಕ ಚಿಕಿತ್ಸೆ ನೀಡಿ ಪರಿಸ್ಥಿತಿ ಹದ ಮೀರುವುದನ್ನು ತಪ್ಪಿಸಿದ್ದರು. 

Advertisement

Udayavani is now on Telegram. Click here to join our channel and stay updated with the latest news.

Next