ಕಾರವಾರ: ಹೊರ ಗುತ್ತಿಗೆ ಕಾರ್ಮಿಕರಿಗೆ ಎಸ್ಮಾ ಕಾಯ್ದೆ ಹೇರಲು ಮೆಡಿಕಲ್ ಕಾಲೇಜು ಆಡಳಿತ ಮಂಡಳಿ ಮುಂದಾಗಿದೆ. ಕಾರ್ಮಿಕರಿಗೆ ಶರತ್ತು ಪತ್ರಕ್ಕೆ ಸಹಿ ಹಾಕಲು ಅರ್ಜಿ ಸಿದ್ಧಪಡಿಸಿದ್ದು, ಯಾವುದೇ ಪ್ರತಿಭಟನೆ ಮಾಡುವಂತಿಲ್ಲ. ಪಿಎಫ್, ಇಎಸ್‌ಐ ಕೇಳಬಾರದು ಎಂದುಪ್ರತಿಜ್ಞಾ ಪತ್ರಕ್ಕೆ ಸಹಿ ಹಾಕಲು ಒತ್ತಾಯಿಸಲಾಗುತ್ತಿದೆ. ಇದು ಅನ್ಯಾಯದ ಪರಮಾವಧಿ ಎಂದು ಹೊರಗುತ್ತಿಗೆ ನೌಕರರಸಂಘದ ಅಧ್ಯಕ್ಷ ವಿಲ್ಸನ್ ಬೈತಕೋಲ್ ಆರೋಪಿಸಿದರು.
ಆಸ್ಪತ್ರೆ ಹೊರಗುತ್ತಿಗೆ ನೌಕರರ ಸಂಘದ ಪದಾಧಿಕಾರಿಗಳ ಜೊತೆ ಬುಧವಾರ ಪತ್ರಿಕಾ ಭವನದಲ್ಲಿ ಸುದ್ದಿಗೋಷ್ಠಿ ಮಾಡಿದ ಅವರು, ದಶಕಗಳ ಕಾಲ ಕಾರ್ಮಿಕರಾಗಿದುಡಿದವರು ಸಾಯುವಂತಹ ವಾತಾವರಣವನ್ನುಮೆಡಿಕಲ್ ಕಾಲೇಜು ಆಡಳಿತ ನಡೆಸುವವರು ಸೃಷ್ಟಿಸುತ್ತಿದ್ದಾರೆ. ಕಾರ್ಮಿಕ ಸಚಿವರು, ಶಾಸಕರು,ಮೆಡಿಕಲ್ ಕಾಲೇಜು ಆಡಳಿತ ಸರ್ವಾಧಿಕಾರಿ ಧೋರಣೆ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಇಲ್ಲವಾದದಲ್ಲಿ ನಾವು ಸಚಿವರ ಮನೆಯ ಎದುರು ಧರಣಿ ಮಾಡಬೇಕಾಗುತ್ತದೆ ಎಂದು ವಿಲ್ಸನ್ ಎಚ್ಚರಿಸಿದರು.
ಕಾರ್ಮಿಕ ಇಲಾಖೆ ನಿಯಮದ ವಿರುದ್ಧ ನಿಯಮ ಬಾಹಿರ ಶರತ್ತು ಪತ್ರವನ್ನು ಮೆಡಿಕಲ್ ಕಾಲೇಜು ಹೊರಗುತ್ತಿಗೆ ಪಡೆದ ಏಜೆನ್ಸಿ ರೂಪಿಸಿದ್ದು, ಇದಕ್ಕೆ ಕಾಲೇಜುಆಡಳಿತ ಮಂಡಳಿಯ ಕುಮ್ಮಕ್ಕು ಇದೆ. ಇದನ್ನು ನಾವು ಕಾರ್ಮಿಕ ಅಧಿಕಾರಿ, ಜಿಲ್ಲಾಧಿಕಾರಿಗಳ ಗಮನಕ್ಕೆತಂದಿದ್ದೇವೆ. ನಿಯಮ ಬಾಹಿರ ಶರತ್ತು ಸಿಡಿಲಿಸದಿದ್ದರೆಹೋರಾಟ ಮುಂದುವರಿಯಲಿದೆ. ಜನಪ್ರತಿನಿಧಿಗಳುಈಗಲಾದರೂ ಮಹಿಳಾ ಕಾರ್ಮಿಕರ ಪರ ನಿಲ್ಲದಿದ್ದರೆ,ನಮ್ಮ ಹೋರಾಟ ಭಿನ್ನ ಹಾದಿ ಹಿಡಿಯಲಿದೆ. ಸರ್ಕಾರಕ್ಕಿಂತ,ಕಾರ್ಮಿಕ ಇಲಾಖೆಗಿಂತ ಹೊರ ಗುತ್ತಿಗೆ ಏಜೆನ್ಸಿ ಪ್ರಬಲವೇ ಎಂದು ಕಾರ್ಮಿಕ ಸಚಿವರು ಹೇಳಬೇಕು. ಅವರುಕಾರ್ಮಿಕರ ಗೋಳು ಕೇಳದಿದ್ದರೆ ಹೇಗೆ ಎಂದೂಫರ್ನಾಂಡೀಸ್ ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ ಈ ಎಲ್ಲಾ ಬೆಳವಣಿಗೆ ಗಮನಿಸುತ್ತಿದ್ದಾರೆ. ಗುರುವಾರ ಮೆಡಿಕಲ್ ಕಾಲೇಜು ಹಾಗೂ ಹೊರ ಗುತ್ತಿಗೆ ಕಾರ್ಮಿಕರ ಸಭೆ ಕರೆದಿದ್ದಾರೆ. ಅಲ್ಲಿ ಪರಿಹಾರ ಸಿಗುವ ವಿಶ್ವಾಸವಿದೆ. ನಾಳಿನ ನಿರ್ಣಯ ನೋಡಿ ನಾವು ಹೋರಾಟ ರೂಪಿಸಲಿದ್ದೇವೆ. ಪರಿಹಾರ ಸಿಕ್ಕರೆ, ಬೇಡಿಕೆ ಈಡೇರಿದರೆ ಕರ್ತವ್ಯಕ್ಕೆಹಾಜರಾಗುವೆವು. ಆದರೆ ಕಿರುಕುಳ ನಿಲ್ಲಬೇಕು.ಕಾರ್ಮಿಕರಿಗೆ ಸಿಗಬೇಕಾದ ನ್ಯಾಯಯುತ ವೇತನ,ಹಕ್ಕುಗಳು ಸಿಕ್ಕರೆ ಸಾಕು. ನಾವು ನ್ಯಾಯದ ದಾರಿಯಲ್ಲಿ ಹಕ್ಕು ಕೇಳುತ್ತಿದ್ದೇವೆ ಎಂದು ವಿಲ್ಸನ್ ಹೇಳಿದರು.