Advertisement

ಬೇಡಿಕೆ ಈಡೇರಿಕೆಗೆ ಹೊರಗುತ್ತಿಗೆ ನೌಕರರ ಆಗ್ರಹ

12:05 PM Dec 31, 2019 | Suhan S |

ಸಿಂದಗಿ: ವಿವಿಧ ಬೇಡಿಕೆಗಳ ಈಡೇರಿಸುವಂತೆ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ತಾಲೂಕು ಘಟಕದ ವತಿಯಿಂದ ಸೋಮವಾರ ಪಟ್ಟಣದ ತಹಶೀಲ್ದಾರ್‌ ಕಚೇರಿ ಎದುರು ಪ್ರತಿಭಟನೆ ನಡೆಯಿತು.

Advertisement

ನಂತರ ಪ್ರತಿಭಟನಾಕಾರರು ತಹಶೀಲ್ದಾರ್‌ ಬಿ.ಎಸ್‌. ಕಡಕಭಾವಿ ಮೂಲಕ ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ, ಸಮಾಜ ಕಲ್ಯಾಣ ಇಲಾಖೆ ಸಚಿವ ಗೋವಿಂದ ಕಾರಜೋಳ, ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಸಚಿವ ಬಿ. ಶ್ರೀರಾಮುಲು ಅವರಿಗೆ ಮನವಿ ಸಲ್ಲಿಸಿದರು.

ಪ್ರತಿಭಟನೆ ನೇತೃತ್ವ ವಹಿಸಿದ್ದ ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘ ಜಿಲ್ಲಾಧ್ಯಕ್ಷ ಹುಲಗಪ್ಪ ಚಲವಾದಿ ಮಾತನಾಡಿ, ಸರಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲೆಗಳಲ್ಲಿ ಹೊರಗುತ್ತಿಗೆ ಆಧಾರವಾಗಿ ಕೆಲಸ ಮಾಡುತ್ತಿರುವ ನೌಕರರ ಬಾಕಿ ವೇತನ ಕೂಡಲೇ ಪಾವತಿಸಬೇಕು.

ನಿವೃತ್ತಿ ವಯೋಮಾನದವರೆಗೆ ಸೇವೆ ಮುಂದುವರಿಸಬೇಕು. ಕನಿಷ್ಠ ವೇತನ ಕಾಯ್ದೆಯಡಿ ವೇತನ ನೀಡಬೇಕು. ಈಗ ನೀಡುತ್ತಿರುವ ಅಲ್ಪ ವೇತನ ಇಂದಿನ ದಿನಮಾನಗಳಲ್ಲಿ ಸಾಕಾಗುತ್ತಿಲ್ಲ. ಅರೆ ಹೊಟ್ಟೆ ಜೀವನ ನಡೆಸಬೇಕಾಗಿದೆ. ಕೂಡಲೇ 8-10 ತಿಂಗಳ ಬಾಕಿ ವೇತನವನ್ನು ಒಂದೇ ಕಂತಿನಲ್ಲಿ ಬಿಡುಗಡೆ ಮಾಡಬೇಕು. ಕನಿಷ್ಠ ವೇತನವನ್ನು ತಕ್ಷಣದಿಂದಲೇ ಜಾರಗೆ ಮಾಡಬೇಕು. ಪಿಫ್‌, ಇಎಸ್ಐ ಸೌಲಭ್ಯ ವದಗಿಸಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.

ಕರ್ನಾಟಕ ರಾಜ್ಯ ಸರಕಾರಿ ಹಾಸ್ಟೆಲ್‌ ಮತ್ತು ವಸತಿ ಶಾಲಾ ಹೊರಗುತ್ತಿಗೆ ನೌಕರರ ಸಂಘದ ಜಿಲ್ಲಾ ಉಪಾಧ್ಯಕ್ಷ ಕಾಶೀಮ ಆಲ್ದಾಳ್‌, ಕಾರ್ಯದರ್ಶಿ ಪವಾಡೆಪ್ಪ ಚಲವಾದಿ, ಸಹ ಕಾರ್ಯದರ್ಶಿ ಲಕ್ಷ್ಮಣ ಮಸಳಿ, ತಾಲೂಕಾಧ್ಯಕ್ಷ ನೂರಜಾನ ಯಲಗಾರ, ಉಪಾಧ್ಯಕ್ಷ ಚಂದ್ರಕಾಂತಚಟ್ನಳ್ಳಿ, ಕಾರ್ಯದರ್ಶಿ ಶ್ರೀಶೈಲ್‌ ನಡುವಿನಕೇರಿ, ಸಿದ್ದಮ್ಮ ಗೋಲಗೇರಿ, ಶಿವಾನಂದ ದೊಡಮನಿ, ಸರಸ್ವತಿ ಕಾಮಣಕೇರಿ, ವೈಶಾಲಿ ಸಮಗೊಂಡ, ಕಲಾವತಿ ಬಿಸನಾಳ, ಶಿವಮ್ಮ ನಿಗಡಿ, ಗುಣಸಾಗರ ತಳವಾರ, ಕಾಶಿಂಬಿ ಗುಬ್ಬೇವಾಡ, ಕಾಳು ಪತ್ತಾರ, ಅಂಬವ್ವ ಇಂಚಗೇರಿ, ಸೀತಾ ಬಗಲೂರ, ನೀಲಮ್ಮ ಹಿರೇಕುರಬರ, ಸಂಗಮ್ಮ ಮನಗೂಳಿ, ಅಂಬವ್ವ ಶೆಂಬೇವಾಡ, ಸಿದ್ದಮ್ಮ ಯಂಕಂಚಿ, ಅಲಿಬಾಯಿ ಗೊರಗುಂಡಗಿ ಸೇರಿದಂತೆ ಇತರರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು

Advertisement
Advertisement

Udayavani is now on Telegram. Click here to join our channel and stay updated with the latest news.

Next