Advertisement

ಹಾಲು ಖರೀದಿ ದರ ಇಳಿಕೆಗೆ ಆಕ್ರೋಶ

02:34 PM Jan 12, 2022 | Team Udayavani |

ಕೋಲಾರ: ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ರಾಜ್ಯ ಅಧ್ಯಕ್ಷ ಕೋಡಿಹಳ್ಳಿ ಚಂದ್ರಶೇಖರ್‌ ನೇತೃತ್ವದಲ್ಲಿ ನೂರಾರು ರೈತರು, ಹಾಲು ಉತ್ಪಾದಕರು ಮಂಗಳವಾರ ಕೋಚಿಮುಲ್‌ಒಕ್ಕೂಟಕ್ಕೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿ ರೈತರ ಬೇಡಿಕೆ ಈಡೇರಿಸುವಂತೆ ಒಕ್ಕೂಟದ ವ್ಯವಸ್ಥಾಪಕ ನಿರ್ದೇಶಕರಿಗೆ ಮನವಿ ಸಲ್ಲಿಸಿದರು.

Advertisement

ಈ ಸಂದರ್ಭದಲ್ಲಿ ಮಾತನಾಡಿದ ಕೋಡಿಹಳ್ಳಿ ಚಂದ್ರಶೇಖರ್‌, ಹಿಂದೆ ರೈತರಿಗೆ ಹಾಲಿನ ದರ 29 ರೂ. ಅನ್ನು ನೀಡುತ್ತಿದ್ದು, ಪ್ರಸ್ತುತ 24 ರೂ.ಗೆ ಇಳಿಸಿ ರೈತರ ಹೊಟ್ಟೆ ಮೇಲೆ ಬರೆ ಎಳೆದಿರುವುದಕ್ಕೆ ಆಡಳಿತ ಮಂಡಳಿ ನೇರ ಕಾರಣವಾಗಿದೆ. ಬೆಲೆ ಇಳಿಕೆ ಮಾಡಿರುವುದರಿಂದನಷ್ಟದಿಂದ ಕಷ್ಟದಲ್ಲಿರುವ ರೈತರ ನೆರವಿಗೆಸರ್ಕಾರವಾಗಲಿ, ಸಂಬಂಧಪಟ್ಟ ಅಧಿಕಾರಿಗಳಾಗಲಿ, ರೈತರಿಗೆ ಕನಿಷ್ಠ ಹಾಲಿನ ಬೆಲೆ ಲೀಟರ್‌ಗೆ 40 ರೂ. ನಿಗದಿ ಮಾಡಬೇಕೆಂದು ಆಗ್ರಹಿಸಿದರು.

ಪಶು ಆಹಾರ ದರ ಕಡಿತಗೊಳಿಸಿ: ಉತ್ಪಾದಕರಿಗೆ ಕನಿಷ್ಠ 35 ರೂ. ಅನ್ನು ಒಂದು ಲೀಟರಿಗೆ ದರ ನಿಗದಿ ಪಡಿಸಬೇಕು, ಒಕ್ಕೂಟದ ದುಂದು ವೆಚ್ಚಗಳಿಗೆ ಕಡಿವಾಣ ಹಾಕಬೇಕು, ಒಕ್ಕೂಟದ ಮೂಸೌಕರ್ಯಗಳಿಗಾಗಿ ಲೀಟರ್‌ಗೆ 1.55 ರೂ. ಕಡಿತಗೊಳಿಸುವುದನ್ನು ನಿಲ್ಲಿಸಬೇಕು, ರಾಜ್ಯಾದ್ಯಂತ ರೈತರಿಗೆ ಏಕರೂಪದಲ್ಲಿ ಹಾಲಿನ ದರ ನಿಗದಿಪಡಿಸಬೇಕು, ಪಶು ಆಹಾರ ದರ ಕಡಿತಗೊಳಿಸಬೇಕು ಮತ್ತು ಗುಣಮಟ್ಟ ಕಾಪಾಡಬೇಕು ಎಂದು ವಿವರಿಸಿದರು.

ಉತ್ತಮ ತಳಿಯ ಕೃತಕ ಗರ್ಭಧಾರಣೆ ಗುಣಮಟ್ಟಕಾಪಾಡಬೇಕು, ಬಿಎಂಸಿ ಕೇಂದ್ರಗಳಿಂದ ಹಾಲುಸರಬರಾಜು ಮಾಡುವ ಲಾರಿ ಮಾಲಿಕರು ಮತ್ತುಗುತ್ತಿಗೆದಾರರು ಮಾಡುವ ಕಲಬೆರಿಕೆ ಅವ್ಯವಹಾರಮತ್ತು ಗುಣಮಟ್ಟದ ತಾರತಮ್ಯ ಸರಿಪಡಿಸಬೇಕು ಎಂದು ಹೇಳಿದರು.

ದಂಡ ವಿಧಿಸುವುದು ನಿಲ್ಲಿಸಿ: ಹಾಲು ಉತ್ಪಾದಕ ಸಹಕಾರ ಸಂಘಗಳಲ್ಲಿ ಕಾರ್ಯನಿರ್ವಹಿಸುವ ನೌಕರರಿಗೆ ಒಕ್ಕೂಟದಿಂದ ವೇತನ ನೀಡಬೇಕು, ಕಡಿಮೆ ಗುಣಮಟ್ಟ ಎಂದು ಪರಿಗಣಿಸಿ ದಂಡ ವಿಧಿಸುವುದು ನಿಲ್ಲಿಸಬೇಕು, ಭ್ರಷ್ಟಾಚಾರದಲ್ಲಿ ತೊಡಗಿರುವ ಬಂಗಾರಪೇಟೆ ಶಿಬಿರ ಕಚೇರಿಯಲ್ಲಿ ಹೊರಗುತ್ತಿಗೆ ಆಧಾರದ ಮೇಲೆ ಕೆಲಸ ನಿರ್ವಹಿಸುತ್ತಿರುವ ವಿಸ್ತೀರ್ಣ ಅಧಿಕಾರಿಯನ್ನು ಕೂಡಲೇ ಕೆಲಸದಿಂದ ವಜಾಗೊಳಿಸಬೇಕು ಎಂದು ವಿವರಿಸಿದರು.

Advertisement

ಚರ್ಚೆ ಮಾಡಿ ನಂತರ ತೀರ್ಮಾನಕೈಗೊಳ್ಳಿ:

ಸರ್ಕಾರದ ಆದೇಶ ಉಲ್ಲಂಘಿಸಿ ಕೋಚಿಮಲ್‌ ಕಾರ್ಯದರ್ಶಿ ಹಾಗೂ ಸಿಬ್ಬಂದಿ ವರ್ಗದವರು 60 ವರ್ಷಮೇಲ್ಪಟ್ಟ ಸಿಬ್ಬಂದಿಗೆ ವಯೋ ನಿವೃತ್ತಿ ಗೊಳಿಸದೆ ಕೆಲಸ ಮುಂದುವರಿಸುತ್ತಿರುವವರ ಮೇಲೆ ಸೂಕ್ತ ಕಾನೂನು ಕ್ರಮ ಜರುಗಿಸಬೇಕು, ಹಾಲಿನ ದರ ಏರಿಕೆ ಮಾಡುವಮುಂಚೆ ರೈತ ಮುಖಂಡರನ್ನು ಕರೆಯಿಸಿ ಚರ್ಚೆಮಾಡಿದ ನಂತರ ತೀರ್ಮಾನ ತೆಗೆದುಕೊಳ್ಳಬೇಕು ಎಂದು ಒತ್ತಾಯಿಸಿದರು.

ರೈತರಿಗೆ ಬೆಂಬಲಿಸಿ ಕರ್ನಾಟಕ ರಕ್ಷಣಾ ವೇದಿಕೆ,ಪ್ರಜಾ ಸಂಘರ್ಷ ಸಮಿತಿ, ಇತರೆ ಸಂಘಟನೆಗಳ ಮುಖಂಡರು ಹಾಗೂ ಜಿಪಂ ಮಾಜಿ ಅಧ್ಯಕ್ಷ ಸಿ.ಎಸ್‌. ವೆಂಕಟೇಶ್‌ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.ಸಂಘದ ರಾಜ್ಯ ಕಾರ್ಯದರ್ಶಿ ವೀರಭದ್ರ ಸ್ವಾಮಿ,ಕೋಲಾರ ಜಿಲ್ಲಾಧ್ಯಕ್ಷ ರಾಮೇಗೌಡ, ಚಿಕ್ಕಬಳ್ಳಾಪುರ ಜಿಲ್ಲಾಧ್ಯಕ್ಷ ಎಚ್‌.ಪಿ.ರಾಮನಾಥ್‌, ರಾಜ್ಯ ಸಂಘದಮಹಿಳಾ ಅಧ್ಯಕ್ಷೆ ಸಿ.ಉಮಾ, ಕೋ.ಚಿ.ಉಪಾಧ್ಯಕ್ಷಬೈರರೆಡ್ಡಿ, ಜಿಲ್ಲಾ ಕಾರ್ಯಾಧ್ಯಕ್ಷ ಅಬ್ಬಣಿ ಶ್ರೀನಿವಾಸ್‌,ಮುಖಂಡರಾದ ರವಿ, ಶ್ರೀನಾಥ್‌, ನಾರಾಯಣಸ್ವಾಮಿ, ಗೋವಿಂದಪ್ಪ, ಮಂಜುನಾಥ್‌, ರಾಮಾಂಜಿನಪ್ಪ, ಪಿ.ಗಂಗಾಧರ, ದಿನ್ನೆಹೊಸಹಳ್ಳಿ ರಮೇಶ್‌, ವಿಶ್ವನಾಥ್‌, ರಾಮರೆಡ್ಡಿ ಬಾಗೇಪಲ್ಲಿ ಲಕ್ಷ್ಮಣ್‌ ರೆಡ್ಡಿ ಮುಂತಾದವರು ಉಪಸ್ಥಿತರಿದ್ದರು.

 

ಹಾಲು ಒಕ್ಕೂಟದಲ್ಲಿ ನಡೆಯುತ್ತಿರುವ ಭ್ರಷ್ಟಾಚಾರಕ್ಕೆ, ದುಂದು ವೆಚ್ಚಕ್ಕೆ ಕಡಿವಾಣ ಹಾಕಿದಲ್ಲಿ ನಷ್ಟವನ್ನು ತಪ್ಪಿಸಿ ರೈತರಿಗೆ ಹಾಗೂ ಗ್ರಾಹಕರಿಗೆನ್ಯಾಯ ಒದಗಿಸಲು ಆಡಳಿತ ಮಂಡಳಿಪ್ರಾಮಾಣಿಕ ಪ್ರಯತ್ನ ಮಾಡಬೇಕು. ಭಕ್ತರಹಳ್ಳಿ ಬೈರೇಗೌಡ, ರೈತ ಸಂಘದ ರಾಜ್ಯ ಪ್ರಧಾನ ಕಾರ್ಯದರ್ಶಿ

Advertisement

Udayavani is now on Telegram. Click here to join our channel and stay updated with the latest news.

Next