Advertisement
ರಂಗಂಪೇಟೆಯ ಮರಗಮ್ಮ ದೇವಸ್ಥಾನದಿಂದ ಸುರಪುರದವರೆಗೆ ಮೆರವಣಿಗೆ ನಡೆಸಿದರು.
Related Articles
Advertisement
ನೇತೃತ್ವ ವಹಸಿದ್ದ ಮುಂಖಡ ಡಾ| ಸುರೇಶ ಸಜ್ಜನ್ ಮಾತನಾಡಿ, ಇದು ಯಾವುದೇ ರಾಜಕಾರಣಿ ಅಥವಾ ರಾಜಕೀಯ ಪಕ್ಷದ ವಿರುದ್ಧದ ಹೋರಾಟ ಅಲ್ಲ. ಕುಡಿಯುವ ನೀರು ಸೇರಿದಂತೆ ಮೂಲಭೂತ ಸೌಕರ್ಯಗಳಿಗಾಗಿ ನಡೆಯುವ ಪಕ್ಷಾತೀತ ಹೋರಾಟವಾಗಿದೆ. ನಗರಸಭೆ ವಾರ್ಡ್ 28 ವಡ್ಡರ ಕಾಲೋನಿ ಸೇರಿದಂತೆ ರಂಗಂಪೇಟೆ- ತಿಮ್ಮಾಪುರದ ಬಹುತೇಕ ಬಡವಾಣೆಗಳಲ್ಲಿ ನೀರಿನ ಸಮಸ್ಯೆ ಗಂಭೀರವಾಗಿದೆ. ಸಾರ್ವನಿಕರಿಗೆ ನೀರು ಒದಗಿಸಲು ಸ್ಕೇರ್ ಸಿಟಿ ಯೋಜನೆ ಅಡಿ ಸಾಕಷ್ಟು ಅನುದಾನ ಬಂದಿದೆ. ನೀರಿನಂತೆ ಹಣ ಖರ್ಚಾದರು ಜನರಿಗೆ ಮಾತ್ರ ಹನಿ ನೀರು ಕೊಡುತ್ತಿಲ್ಲ. ಟ್ಯಾಂಕರ್ ನೀರು ಸರಬರಾಜಲ್ಲಿ ಲೂಟಿ ಹೊಡೆದಿದ್ದು, ಸರಿಯಾಗಿ ನೀರು ಕೊಡದೆ ಸಾರ್ವಜನಿಕರೊಂದಿಗೆ ಚಲ್ಲಾಟ ನಡೆಸಿದ್ದಾರೆ ಎಂದು ಆರೋಪಿಸಿದರು.
ಈ ಕುರಿತು ಸಾಕಷ್ಟು ಮನವಿ ಮಾಡಿದರು ಪೌರಾಯುಕ್ತರು ಸ್ಪಂದಿಸುತ್ತಿಲ್ಲ. ಹಾಲಿ ಮತ್ತು ಮಾಜಿ ಶಾಸಕರ ಹೆಸರು ಹೇಳಿ ನೀರು ಸರಬರಾಜನಲ್ಲಿ ತಾರತಮ್ಯ ಮಾಡುತ್ತಿದ್ದಾರೆ. ಒಟ್ಟಾರೆ ಮೂಲ ಸೌಕರ್ಯ ಒದಗಿಸುವಲ್ಲಿ ನಗರಸಭೆ ಸಂಪೂರ್ಣ ವಿಫಲವಾಗಿದ್ದು, ಲಗಾಮು ಇಲ್ಲದ ಕುದುರೆಯಂತ್ತಾಗಿದೆ ಎಂದು ದೂರಿದರು.
15 ದಿನಗಳ ಒಳಗಾಗಿ ಬೇಡಿಕೆಗಳನ್ನು ಈಡೇರಿಸಿ ನೀರಿನ ಸಮಸ್ಯೆ ಹೋಗಲಾಡಿಸಬೇಕು. ನಿರ್ಲಕ್ಷ್ಯ ವಹಿಸಿದಲ್ಲಿ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು. ಆ ಸಂದರ್ಭದಲ್ಲಿ ನಡೆಯುವ ಅನಾಹುತಗಳಿಗೆ ಇಲಾಖೆಯ ನೇರ ಹೊಣೆ ಎಂದು ಎಚ್ಚರಿಸಿ ಜಿಲ್ಲಾಧಿಕಾರಿ, ವಿಭಾಗೀಯ ಮತ್ತು ಸಹಾಯಕ ಆಯುಕ್ತರಿಗೆ ಬರೆದ ಮನವಿಯನ್ನು ತಹಶೀಲ್ದಾತರ್ ಸುರೇಶ ಅಂಕಲಗಿ ಮೂಲಕ ಸಲ್ಲಿಸಿದರು. ಮಲ್ಲಿಕಾರ್ಜುನ ಕಡೇಚೂರ, ಬಸವರಾಜ ಸಜ್ಜನ್, ಶರಣಪ್ಪ ಹೆಡಗಿನಾಳ, ಬಸವರಾಜ ರುಮಾಲ. ಮಲ್ಲೇಶಿ ಪೂಜಾರಿ, ಅಪ್ಸರ್ ಹುಸೇನ್ ದಲಾಲ. ನಾಗೇಶ ಕಾಟಗಿ, ಶೇಖ ಮಹಿಬೂಬ ಒಂಟಿ, ನಾಸೀರ ಹುಸೇನ್ ಕುಂಡಾಲೆ, ರಾಜು ಪುಲ್ಸೆ, ಶ್ರೀಶೈಲ, ಚನ್ನಪ್ಪ ಸೇರಿದಂತೆ ರಂಗಂಪೇಟ-ತಿಮ್ಮಾಪುರದ ವಿವಿಧ ಪಕ್ಷಗಳ ನಗರಸಭೆ ಸದಸ್ಯರು, ಸಾರ್ವಜನಿಕರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.