Advertisement

ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಆಕ್ರೋಶ

10:23 AM Jun 15, 2019 | Team Udayavani |

ಶಿರಹಟ್ಟಿ: ತಾಲೂಕಿನಲ್ಲಿ ಚುರುಕಿಲ್ಲದ ಆಡಳಿತಕ್ಕೆ ತಾಪಂನಲ್ಲಿ ಆಡಳಿತ ನಡೆಸುವ ಜನಪ್ರತಿನಿಧಿಗಳೇ ಕಾರಣ. ಯಾವೊಬ್ಬ ಅಧಿಕಾರಿಯೂ ಸರಿಯಾಗಿ ಮಾಹಿತಿ ನೀಡುವುದಿಲ್ಲ. ಯೋಜನೆ ಅನುಷ್ಠಾನ ಮಾಹಿತಿ ಕೂಡಾ ಕೊಡುವುದಿಲ್ಲ ಎಂದು ತಾಪಂ ಸದಸ್ಯ ಅಶೋಕಯ್ಯ ಮುಳಗುಂದಮಠ ಆರೋಪಿಸಿದರು.

Advertisement

ಪಟ್ಟಣದ ತಾಪಂ ಸಾಮರ್ಥ್ಯ ಸೌಧದಲ್ಲಿ ಜರುಗಿದ ಸಾಮಾನ್ಯ ಸಭೆಯಲ್ಲಿ ಅವರು ಅಧಿಕಾರ ರೂಢ ಪಕ್ಷವನ್ನು ತರಾಟೆಗೆ ತೆಗೆದು ಕೊಂಡರು. ತಾಲೂಕಿನಲ್ಲಿ ಆರೋಗ್ಯ ಇಲಾಖೆ ಸಮಪರ್ಕವಾಗಿ ಕಾರ್ಯ ನಿರ್ವಹಿಸುತ್ತಿಲ್ಲ. ನಾವು ಅಧಿಕಾರಕ್ಕೆ ಬಂದು ನಾಲ್ಕು ವರ್ಷ ಗತಿಸಿದ್ದರೂ ಪ್ರತಿ ಬಾರಿ ಸಭೆಯಲ್ಲಿ ಹೇಳಿದ್ದನ್ನೇ ಹೇಳಿ ಸಾಕಾಗಿದೆ. ಇನ್ನು ಒಂದು ವರ್ಷ ಬಾಕಿಯಿದೆ. ಈಗಲಾದರೂ ಸಾರ್ವಜನಿಕರಿಗೆ ತೊಂದರೆಯಾಗದ ರೀತಿಯಲ್ಲಿ ಕರ್ತವ್ಯ ನಿರ್ವಹಿಸಿರಿ ಎಂದು ಹೇಳಿದರು.

ಇದಕ್ಕೆ ಸ್ಥಾಯಿ ಸಮಿತಿ ಅಧ್ಯಕ್ಷ ತಿಪ್ಪಣ್ಣ ಕೊಂಚಿಗೇರಿ ಮಾತನಾಡಿ, ಅಧಿಕಾರಿಗಳಿಗೆ ಸಮರ್ಥವಾಗಿ ಬಳಕೆ ಮಾಡಿಕೊಳ್ಳಲು ಮುಂದಾಗಬೇಕು. ನಾವು ಮನೆಗೆ ಹೋಗುವ ಸಮಯ ಬಂದಿದೆ ಎಂದು ಹೇಳಬಾರದು ಎಂದರು. ಇದಕ್ಕೆ ಅಶೋಕಯ್ಯ ಪ್ರತಿಕ್ರಿಯಿಸಿ, ಅಧಿಕಾರದಲ್ಲಿರುವವರ ಆಡಳಿತವೇ ಮುಖ್ಯ ಕಾರಣ ಎಂದು ಆರೋಪಿಸಿದರು. ಸ್ವಲ್ಪ ಸಮಯ ಜಟಾಪಟಿ ನಡೆಯಿತು.

ತಾಲೂಕಿನಲ್ಲಿರುವ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಶುದ್ಧ ನೀರಿನ ಯಂತ್ರ ಸ್ಥಾಪನೆಯಾಗಿದ್ದರೂ ಈವರೆಗೆ ದುರಸ್ತಿ ಯಾಗಿಲ್ಲ. ನೀರು ಸರಬರಾಜು ಆಗದೇ ಕುಡಿಯುವ ನೀರಿಗಾಗಿ ಪರದಾಡುವ ಸ್ಥಿತಿ ನಿರ್ಮಾಣವಾಗಿದೆ. ಇದು ಯಾವಾಗ ಪರಿಹಾರವಾಗುತ್ತೆ ಎಂದು ಸದಸ್ಯ ನಿಂಗಪ್ಪ ಜಾಲವಾಡಗಿ ಪ್ರಶ್ನಿಸಿದರು. ಇದಕ್ಕೆ ಉತ್ತರಿಸಿದ ಸಿಡಿಪಿಒ, ತಾಲೂಕಿನ ಎಲ್ಲ ಅಂಗನವಾಡಿ ಕೇಂದ್ರಗಳಲ್ಲಿ ಶುದ್ಧ ಕುಡಿಯುವ ನೀರಿನ ಯಂತ್ರ ಸ್ಥಗಿತಗೊಂಡು ಬಹಳಷ್ಟೇ ದಿನಗಳಾಗಿವೆ. ಆದ್ದರಿಂದ ಈ ವರ್ಷದ ಅವಧಿಯಲ್ಲಿ ನೀರೊದಗಿಸುವ ಹಾಗೂ ಶುದ್ಧ ಕುಡಿಯುವ ನೀರಿಗೆ ಶಾಶ್ವತ ಪರಿಹಾರ ಕಂಡುಕೊಳ್ಳಲಾಗುವುದು ಎಂದು ಹೇಳಿದರು. ನಂತರ ಇಒ ಆರ್‌.ವೈ. ಗುರಿಕಾರ ಮಾತನಾಡಿ, ಎಲ್ಲ ವೈದ್ಯಾಧಿಕಾರಿಗಳ ಹಾಗೂ ಸಿಬ್ಬಂದಿ ಸಭೆ ಕರೆಯುವಂತೆ ಆರೋಗ್ಯ ಇಲಾಖೆ ಅಧಿಕಾರಿಗೆ ಸೂಚಿಸಿದರು.

ತಾಪಂ ಸಮಾನ್ಯ ಸಭೆಯಲ್ಲಿ ಎಲ್ಲ ಇಲಾಖೆಗಳ ಖರ್ಚುವೆಚ್ಚಗಳ ಅನುಮೋದನೆ ಪಡೆಯಲಾಯಿತು.

Advertisement

ತಮ್ಮ ಸಂಬಂಧಿಯನ್ನು ಲಕ್ಶ್ಮೀಶ್ವರ ದ ಸರಕಾರಿ ಆರೋಗ್ಯ ಕೇಂದ್ರಕ್ಕೆ ಹೆರಿಗಾಗಿ ಕರೆದುಕೊಂಡು ಹೋದಾಗ ಹಣ ಕೊಟ್ಟರೆ ಮಾತ್ರ ಮಗುವಿನ ಮುಖ ತೋರಿಸಲಾಗುವುದು ಎಂದು ಪಟ್ಟು ಹಿಡಿದರು. ಹೀಗಾಗಿ ಹಣ ನೀಡಿದ್ದೇವು ಎಂದು ತಾಪಂ ಅಧ್ಯಕ್ಷೆ ಸುಶೀಲವ್ವ ಲಮಾಣಿ ಹೇಳಿದರು. ಇದು ಸಭೆಯ ಆಕ್ರೋಶಕ್ಕೆ ಕಾರಣವಾಯಿತು. ತಾಪಂ ಅಧ್ಯಕ್ಷರಿಗೆ ಹೀಗಾದರೆ ಸಾಮಾನ್ಯ ಜನರ ಪಾಡೇನು ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ತಾಪಂ ಅಧ್ಯಕ್ಷರಿಂದಲೇ ಹಣ ವಸೂಲಿ:

ತಮ್ಮ ಸಂಬಂಧಿಯನ್ನು ಲಕ್ಶ್ಮೀಶ್ವರ ಸರಕಾರಿ ಆರೋಗ್ಯ ಕೇಂದ್ರಕ್ಕೆ ಹೆರಿಗಾಗಿ ಕರೆದುಕೊಂಡು ಹೋದಾಗ ಹಣ ಕೊಟ್ಟರೆ ಮಾತ್ರ ಮಗುವಿನ ಮುಖ ತೋರಿಸಲಾಗುವುದು ಎಂದು ಪಟ್ಟು ಹಿಡಿದರು. ಹೀಗಾಗಿ ಹಣ ನೀಡಿದ್ದೇವು ಎಂದು ತಾಪಂ ಅಧ್ಯಕ್ಷೆ ಸುಶೀಲವ್ವ ಲಮಾಣಿ ಹೇಳಿದರು. ಇದು ಸಭೆಯ ಆಕ್ರೋಶಕ್ಕೆ ಕಾರಣವಾಯಿತು. ತಾಪಂ ಅಧ್ಯಕ್ಷರಿಗೆ ಹೀಗಾದರೆ ಸಾಮಾನ್ಯ ಜನರ ಪಾಡೇನು ಎಂದು ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.
Advertisement

Udayavani is now on Telegram. Click here to join our channel and stay updated with the latest news.

Next