Advertisement

ತಿರುಚಿದ ನಾಡಗೀತೆ ಸಾಲು: ರೋಹಿತ್ ಚಕ್ರತೀರ್ಥ ಕ್ಷಮೆಗೆ ಒಕ್ಕಲಿಗರ ಸಂಘ ಆಗ್ರಹ

09:02 PM May 23, 2022 | Team Udayavani |

ಬೆಂಗಳೂರು: ಪಠ್ಯಪುಸ್ತಕ ಪರಿಶೀಲನಾ ಸಮಿತಿ ಅಧ್ಯಕ್ಷರಾಗಿರುವ ರೋಹಿತ್ ಚಕ್ರತೀರ್ಥರವರು ಈ ಹಿಂದೆ ತಿರುಚಿದ ನಾಡಗೀತೆಯ ಸಾಲುಗಳನ್ನು ಮೆಚ್ಚಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿರುವುದು ನಾಡಗೀತೆಗೆ ಮಾಡಿರುವ ಅವಮಾನ ಎಂದು ರಾಜ್ಯ ಒಕ್ಕಲಿಗರ ಸಂಘ ಖಂಡನೆ ವ್ಯಕ್ತ ಪಡಿಸಿದೆ.

Advertisement

ಇದು ನಾಡಗೀತೆಗಷ್ಟೇ ಅಲ್ಲದೆ ಇಡೀ ಕನ್ನಡನಾಡಿಗೆ ಮತ್ತು ವಿಶ್ವಮಾನವತೆ ಸಾರಿದ ಕುವೆಂಪುರವರಿಗೆ ಮಾಡಿದ ಅವಮಾನವಾಗಿದ್ದು ಇದನ್ನು ತೀವ್ರವಾಗಿ ಖಂಡಿಸುತ್ತೇವೆ ಎಂದು ಸಂಘ ಪತ್ರಿಕಾ ಪ್ರಕಟಣೆ ನೀಡಿದೆ.

ರೋಹಿತ್ ಚಕ್ರತೀರ್ಥರವರು ತಮ್ಮ ಈ ಬೇಜವಾಬ್ದಾರಿ ಮತ್ತು ಅಗೌರವಯುತ ನಡವಳಿಕೆಗೆ ಸಾರ್ವಜನಿಕವಾಗಿ ಕ್ಷಮೆ ಕೇಳಬೇಕೆಂದು ರಾಜ್ಯ ಒಕ್ಕಲಿಗರ ಸಂಘ ಆಗ್ರಹಿಸಿದೆ.

ಕಿತ್ತು ಹಾಕಿ : ಸಿದ್ದರಾಮಯ್ಯ ಕಿಡಿ

ನಾಡಗೀತೆಯನ್ನು ಅವಹೇಳನ‌ ಮಾಡಿದ, ರಾಷ್ಟ್ರಕವಿಯನ್ನುಗೇಲಿ ಮಾಡಿದ ಇಂತಹ ಒಬ್ಬ ಕಿಡಿಗೇಡಿಯನ್ನು ಪಠ್ಯಪುಸ್ತಕ ಪರಿಷ್ಕರಣಾ ಸಮಿತಿಗೆ ಅಧ್ಯಕ್ಷರನ್ನಾಗಿ ಮಾಡಿದ ಬಿಜೆಪಿ ಸರಕಾರಕ್ಕೆ ಮಾನ-ಮರ್ಯಾದೆ ಏನಾದರೂ ಇದ್ದರೆ ಮೊದಲು ಈತನನ್ನು ಕಿತ್ತುಹಾಕಬೇಕು. ಎಂದು ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

Advertisement

2017 ರಲ್ಲಿ ಜೈ ಕಾಂಗ್ರೆಸ್ ಜನನಿಯ ತನುಜಾತೆ ಜಯ ಹೇ ಅರೇಬಿಕ್ ಮಾತೆ..ಎಂದು ವಿಡಂಬನಾತ್ಮಕವಾಗಿ ಬರೆದ ಸಾಲನ್ನು ರೋಹಿತ್ ಚಕ್ರತೀರ್ಥ ಅವರು ಸಾಮಾಜಿಕ ತಾಣದಲ್ಲಿ ಹಂಚಿಕೊಂಡಿದ್ದರು.

ಇದನ್ನೂ ಓದಿ : ನಾಗೇಶ್ ಇತಿಹಾಸದ ಕನಿಷ್ಠ ತಿಳುವಳಿಕೆ ಇಲ್ಲದ ಶಿಕ್ಷಣ ಸಚಿವ: ಬಿ.ಕೆ. ಹರಿಪ್ರಸಾದ್ ಕಿಡಿ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next