Advertisement

ರಾಜರಾಜೇಶ್ವರಿ ಆಸ್ಪತ್ರೆ ವಿರುದ್ಧ ಆಕ್ರೋಶ

01:30 PM Nov 07, 2020 | Suhan S |

ರಾಮನಗರ: ಜಿಲ್ಲೆಯ ಕೋವಿಡ್‌ ಸೋಂಕಿತರನ್ನು ರಾಜರಾಜೇಶ್ವರಿ ಆಸ್ಪತ್ರೆಗೆ ದಾಖಲು ಮಾಡಲಾಗುತ್ತಿದೆ. ಆದರೆ, ಅಲ್ಲಿ ಚಿಕಿತ್ಸೆ ಸರಿಯಾಗಿ ದೊರೆಯುತ್ತಿಲ್ಲ. ಈ ಕುರಿತು ಸರ್ಕಾರಕ್ಕೆ ಪತ್ರ ಬರೆದು ಆ ಆಸ್ಪತ್ರೆ ನಮಗೆ ಬೇಡವೇ ಬೇಡ ಎಂದು ಸಷ್ಟವಾಗಿ ತಿಳಿಸಿಬಿಡಿ ಎಂದು ಜಿಲ್ಲಾ ಪಂಚಾಯ್ತಿ ಸದಸ್ಯರು ಒಕ್ಕೊರಲ ಅಭಿಪ್ರಾಯ ವ್ಯಕ್ತಪಡಿಸಿದರು.

Advertisement

ನಗರದ ಜಿಲ್ಲಾ ಪಂಚಾಯ್ತಿ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿಕೋವಿಡ್‌ ಸೋಂಕಿನ ಬಗ್ಗೆ ನಡೆದ ಚರ್ಚೆ ವೇಳೆ ಸದಸ್ಯರು ಈ ತಮ್ಮ ಅಭಿಪ್ರಾಯವ್ಯಕ್ತಪಡಿಸಿದರು.

ಜಿಪಂ ಸದಸ್ಯೆ ವೀಣಾ ಕುಮಾರಿ ಮಾತನಾಡಿ, ಆರ್‌.ಆರ್‌.ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಸೋಂಕಿತರು ಒಳ್ಳೆಯಅಭಿಪ್ರಾಯವ್ಯಕ್ತಪಡಿಸುತ್ತಿಲ್ಲ.ವ್ಯಕ್ತಿಯೊಬ್ಬರು ಮೃತ ಪಟ್ಟರೆ ಶವವನ್ನು ತಕ್ಷಣವೇ ‌ವಾರ್ಡಿನಿಂದ ತೆಗೆಯುವುದಿಲ್ಲ. ಉಳಿದವರಿಗೆ ಶವದ ಪಕ್ಕದಲ್ಲೇ ಚಿಕಿತ್ಸೆ ಕೊಡಲಾಗುತ್ತಿದೆ ಎಂಬ ದೂರು ಕೇಳಿ ಬರುತ್ತಿವೆ ಎಂದು ಸಭೆಯ ಗಮನ ಸೆಳೆದರು.

ಸಭೆಯಲ್ಲಿ ಹಾಜರಿದ್ದ ಮಾಗಡಿ ಕ್ಷೇತ್ರದ ಶಾಸಕ ಎ.ಮಂಜುನಾಥ್‌ ಮಾತನಾಡಿ, ಆರ್‌.ಆರ್‌.ಆಸ್ಪತ್ರೆ ಅವ್ಯವಸ್ಥೆ ಬಗ್ಗೆ ಅನೇಕ ದೂರುಕೇಳಿ ಬರುತ್ತಿದೆ. ಖಾಸಗಿ ಆಸ್ಪತ್ರೆಗಳು ಕೋವಿಡ್‌ ಹೆಸರಿನಲ್ಲಿ ಲೂಟಿ ಮಾಡುತ್ತಿವೆ ಎಂಬ ಆರೋಪಗಳು ಇವೆ. ಇವೆಲ್ಲವನ್ನು ನಿಭಾಯಿಸಲು ಸಾಧ್ಯವಾಗದ ಮೇಲೆ ಶಾಸಕರಾಗಿದ್ದೀರಿ ಏಕೆ ಎಂದು ಜನ ಪ್ರಶ್ನಿಸುತ್ತಿದ್ದಾರೆ ಎಂದು ತಮ್ಮ ಅಸಮಾಧಾನವನ್ನು ಹೊರಹಾಕಿದರು. ಮಾಗಡಿತಾಲೂಕಿನ ಒಂದೇ ಕುಟುಂಬದ ಮೂವರು ಮಂದಿ ಕೋವಿಡ್‌ನಿಂದಾಗಿ ಅದೇ ಆಸ್ಪತ್ರೆಯಲ್ಲಿ ಮೃತ ಪಟ್ಟಿದ್ದಾರೆ ಎಂದರು.

ಸದಸ್ಯ ಗಂಗಾಧರ್‌ ಮತ್ತು ಇತರೆ ಸದಸ್ಯರು ದನಿ ಗೂಡಿಸಿ ಸರ್ಕಾರಕ್ಕೆ ಪತ್ರ ಬರೆದು ಆರ್‌.ಆರ್‌.ಆಸ್ಪತ್ರೆ ಬೇಡ ಎಂದು ಸ್ಪಷ್ಟವಾಗಿ ‌ ತಿಳಿಸಿ,ಈವಿಚಾರದಲ್ಲಿ ನಿರ್ಣಯ ಮಾಡಿ ಎಂದು ಅಧ್ಯಕರನ್ನು ಒತ್ತಾಯಿಸಿದರು.

Advertisement

ಅನುದಾನ, ಖರ್ಚು, ವೆಚ್ಚ ವರದಿ ತರಿಸಲು ಒತ್ತಾಯ:ಕೋವಿಡ್‌-19 ಸೋಂಕಿಗೆ ಸಂಬಂಧಿಸಿದಂತೆ ಜಿಲ್ಲೆಗೆ ಬಿಡುಗಡೆಯಾಗಿರುವ ಅನುದಾನ, ಖರ್ಚು ವೆಚ್ಚ, ರಾಜರಾಜೇಶ್ವರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದ ಜಿಲ್ಲೆಯ ಸೋಂಕಿತರು, ಈ ಪೈಕಿ ಮರಣ ಹೊಂದಿದವರ ಸಂಖ್ಯೆ. ರಾಜರಾಜೇಶ್ವರಿ ಆಸ್ಪತ್ರೆಗೆ ಪಾವತಿಯಾಗಿರುವ ಹಣದ ಮಾಹಿತಿ ಕೊಡುವಂತೆ ಸದಸ್ಯರು ಆಗ್ರಹಿಸಿದರು.

ವರದಿಗೆ ಸೂಚನೆ: ಇದಕ್ಕೆ ಪ್ರತಿಕ್ರಿಯಿಸಿದ ಅಧ್ಯಕ್ಷ ಎಚ್‌.ಎನ್‌.ಅಶೋಕ್‌, ವರದಿ ತಯಾರಿಸಿ ಕೊಡಿ ಎಂದು ಡಿಎಚ್‌ಒ ಅವರಿಗೆ ಸೂಚನೆ ಕೊಟ್ಟರು. ಕೋವಿಡ್‌ ಸೋಂಕು ಅನುದಾನ, ವೆಚ್ಚ ಇತ್ಯಾದಿ ಬಗ್ಗೆ ಚರ್ಚಿಸಲು ಪ್ರತ್ಯೇಕ ಸಭೆ ಆಯೋಜಿಸುವಂತೆ ಜಿಪಂ ಅಧಿಕಾರಿಗಳಿಗೆ ಆದೇಶಿಸಿದರು.

ಸೂಪರ್‌ ಸ್ಪೆಷಾಲಿಟಿಆಸ್ಪತ್ರೆ ನಮ್ಮಲ್ಲಿಲ್ಲ: ಜಿಲ್ಲೆಯ ಕೋವಿಡ್‌ ಸೋಂಕಿತರ ಚಿಕಿತ್ಸೆಗೆ ಬೇರೆಆಸ್ಪತ್ರೆಯನ್ನು ಆಯ್ಕೆ ಮಾಡುವ ಬಗ್ಗೆ ಸದಸ್ಯರುಕೇಳಿದ ಪ್ರಶ್ನೆಗೆ ಉತ್ತರಿಸಿದ ಡಿ.ಎಚ್‌.ಒ ಡಾ.ನಿ ರಂಜನ್‌, ಜಿಲ್ಲೆಯಲ್ಲಿ ಮೆಡಿಕಲ್ ಕಾಲೇಜು ಹಾಗೂ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ‌ ಇಲ್ಲದ ಹಿನ್ನೆಲೆಯಲ್ಲಿ ಹತ್ತಿರದಲ್ಲಿರುವ ರಾಜರಾಜೇಶ್ವರಿ ಆಸ್ಪತ್ರೆಯನ್ನು ಕೋವಿಡ್‌ ಚಿಕಿತ್ಸೆಗಾಗಿ ಆಯ್ಕೆ

ಮಾಡಿಕೊಳ್ಳಲಾಗಿದೆ. ಅಲ್ಲಿ ದಾಖಲಾಗುವ ಸೋಂಕಿತರ ಬಗ್ಗೆ ತಮ್ಮ ಇಲಾಖೆ ನಿಗಾವಹಿಸಿದೆ. ವಾರದಲ್ಲಿ ಒಂದು ದಿನ ಆಸ್ಪತ್ರೆಗೆ ಭೇಟಿ ಕೊಟ್ಟು ಆಹಾರ, ಚಿಕಿತ್ಸಾ ಗುಣಮಟ್ಟ ಪರೀಕ್ಷಿಸಲಾಗುತ್ತಿದೆ ಎಂದು ಸಭೆಗೆ ಮಾಹಿತಿ ನೀಡಿದರು. ಸಭೆಯಲ್ಲಿ ಜಿಪಂ ಸಿಇಒ ಇಕ್ರಂ ಮತ್ತು ಹಿರಿಯ ಅಧಿಕಾರಿ ಗಳು ಭಾಗವಹಿಸಿದ್ದರು.

ರಸ್ತೆ ಕಾಮಗಾರಿ ಇನ್ನೂ ಪ್ರಗತಿಯಲ್ಲೇ ಇದೆ ಏಕೆ? :  ಜಿಲ್ಲೆಯ ಚನ್ನಪಟ್ಟಣ ತಾಲೂಕಿನ ಕೃಷ್ಣಾಪುರದಿಂದ ಅಂಕುಶನಹಳ್ಳಿàಗೆ ತೆರಳುವರಸ್ತೆ ಅಭಿವೃದ್ದಿಗೆ 30 ಲಕ್ಷ ರೂ.ಅನುದಾನ ಬಿಡುಗಡೆಯಾಗಿದೆ. ಆದರೆ, ಕಾಮಗಾರಿ ಇನ್ನುಪೂರ್ಣವಾಗಿಲ್ಲ. ಕಳೆದೆರೆಡು ಸಭೆಗಳಲ್ಲೂ ಕಾಮಗಾರಿ ಪ್ರಗತಿಯಲ್ಲಿದೆ ಎಂಬ ಉತ್ತರವೇ ಸಿಗುತ್ತಿದೆ, ಏಕೆ ಎಂದು ಸದಸ್ಯ ಗಂಗಾಧರ್‌ ಜಿಲ್ಲಾ ಪಂಚಾಯ್ತಿ ಭವನದಲ್ಲಿ ನಡೆದ ಸಾಮಾನ್ಯ ಸಭೆಯಲ್ಲಿ ಅಧಿಕಾರಿಗಳನ್ನು ಪ್ರಶ್ನಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಸಿಇಒ ಇಕ್ರಂ, ಸಂಬಂಧಿಸಿದ ಇಲಾ ಖಾಧಿಕಾರಿಗಳಿಗೆ ಸೂಚನೆ ಕೊಟ್ಟು ಕಾಮಗಾರಿಯನ್ನು ಶೀಘ್ರ ಪೂರ್ಣಗೊಳಿಸಿ ವರದಿ ಕೊಡಿ ಎಂದು ಸೂಚಿಸಿದರು.

ಜಿ.ಪಂ.ಭವನದಪಕ್ಕದಲ್ಲೇ 250 ಹಾಸಿಗೆಗಳ ಸುಸಜ್ಜಿತಜಿಲ್ಲಾಸ್ಪತ್ರೆ ಕಟ್ಟಡಕಾಮಗಾರಿಪೂರ್ಣಗೊಳ್ಳುವ ಹಂತದಲ್ಲಿದೆ.ಬಹುಶಃಇನ್ನೆರೆಡುತಿಂಗಳಲ್ಲಿಜನಸೇವೆಗೆಲಭ್ಯವಾಗಲಿದೆ.  ಕೋವಿಡ್‌ ಸೋಂಕಿಗೆಚಿಕಿತ್ಸೆ ನೀಡಲು ಜಿಲ್ಲಾಡಳಿತಕ್ಕೆ ಮತ್ತಷ್ಟುಬಲಸಿಗುತ್ತದೆ.ಇಕ್ರಂ, ಸಿಇಒ, ಜಿಲ್ಲಾ ಪಂಚಾಯ್ತಿ

Advertisement

Udayavani is now on Telegram. Click here to join our channel and stay updated with the latest news.

Next