Advertisement

ಶಾಸಕರ ವಿರುದ್ಧ ಆಕ್ರೋಶ: ಬದಲಿ ವ್ಯವಸ್ಥೆಗೆ ಮನವಿ

01:07 PM Nov 30, 2017 | |

ನಂಜನಗೂಡು: ಇಲ್ಲಿನ ಶ್ರೀಕಂಠೇಶ್ವರ ದೇವಸ್ಥಾನ ರಸ್ತೆ ಬದಿ ವ್ಯಾಪಾರಸ್ಥರು ಬುಧವಾರ ಜಿಲ್ಲಾ ಉಸ್ತುವಾರಿ ಸಚಿವರಾದ ಡಾ.ಎಚ್‌.ಸಿ.ಮಹದೇವಪ್ಪ ಅವರ ನಿವಾಸಕ್ಕೆ ಭೇಟಿ ನೀಡಿ ಬದಲಿ ವ್ಯವಸ್ಥೆ ಮಾಡಿಕೊಂಡುವಂತೆ ಆಗ್ರಹಿಸಿ ಮನವಿ ಸಲ್ಲಿಸಿದರು. 

Advertisement

ದೇವಸ್ಥಾನದ ಆವರಣದಲ್ಲಿ ಅಕ್ರಮವಾಗಿ ನಿರ್ಮಾಣ ಮಾಡಿಕೊಂಡಿದ್ದ ಅಂಗಡಿ ಮುಗ್ಗಟ್ಟುಗಳನ್ನು ದೇವಸ್ಥಾನ ಆಡಳಿತ ಮಂಡಳಿ ಹಾಗೂ ತಹಶೀಲ್ದಾರ್‌ ಎಂ.ದಯಾನಂದರ ನೇತೃತ್ವದಲ್ಲಿ ತೆರವುಗೊಳಿಸಲಾಗಿತ್ತು. ಆದರೆ, ಶಾಸಕ ಕಳಲೆ ಎನ್‌.ಕೇಶವಮೂರ್ತಿ ಅವರು ತಹಶೀಲ್ದಾರ್‌ರೊಂದಿಗೆ ಶ್ರೀಕಂಠೇಶ್ವರ ದೇವಸ್ಥಾನಕ್ಕೆ ಭೇಟಿ ನೀಡಿ ಕಾರ್ಯನಿರ್ವಾಹಕ ಅಧಿಕಾರಿ ಕುಮಾರಸ್ವಾಮಿಗಳೊಂದಿಗೆ ತುರ್ತು ಸಭೆ ನಡೆಸಿದ್ದಾರೆ.

ಅಲ್ಲದೆ, ರಸ್ತೆ ಬದಿ ವ್ಯಾಪಾರಸ್ಥರಿಗೆ ಬದಲಿ ವ್ಯವಸ್ಥೆ ಮಾಡದೇ ಅಂಗಡಿಗಳನ್ನು ಕಾನೂನುಬಾಹಿರವಾಗಿ ದಿನಕ್ಕೆ 1 ರೂ., ಬಾಡಿಗೆಗೆ ಮಳಿಗೆ ವಿತರಿಸಿದ್ದಾರೆ. ಅಲ್ಲದೆ  ನಮ್ಮನ್ನು ಎತ್ತಂಗಡಿ ಮಾಡಿಸುವಂತೆ ಆದೇಶ ನೀಡಿದ್ದಾರೆ ಎಂದು ಆರೋಪಿಸಿದರು.

ಹೀಗಾಗಿ ತಮಗೆ ಬದಲಿ ವ್ಯಸ್ಥೆ ಮಾಡಿಕೊಂಡುವ ತನಕ  ಜಾಗ ಬಿಡುವುದಿಲ್ಲ ಎಂದರು. ನಿಯೋಗದಲ್ಲಿ ದೇವಸ್ಥಾನದ ಆವರಣದಲ್ಲಿ ತಳ್ಳುವ ಗಾಡಿ ಹಾಗೂ ಸೈಕಲ್‌ಗ‌ಳಲ್ಲಿ ಮಾರಾಟ ಮಾಡಿ ಹೊಟ್ಟೆ ಹೊರೆದುಕೊಳ್ಳುವ ಸುಮಾರು 300 ಕ್ಕೂ ಹೆಚ್ಚು ವ್ಯಾಪಾರಸ್ಥರು ಭಾಗವಹಿಸಿದ್ದರು.

ಸಚಿವರ ಅನುಪಸ್ಥಿತಿಯಲ್ಲಿ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್‌.ಸಿ. ಮಹದೇವಪ್ಪ ಅವರ ಹತ್ತಿರದ ಸಂಬಂಧಿಕರಾದ ಕಾಂಗ್ರೆಸ್‌ ಮುಖಂಡ ಇಂಧನಬಾಬು ದೂರವಾಣಿ ಕರೆ ಮಾಡಿ ಸೂಚನೆ ಮೇರೆಗೆ ವ್ಯಾಪಾರಿಗಳಿಂದ ಮನವಿ ಸ್ವೀಕರಿಸಿದರು. 

Advertisement

ಈ ವೇಳೆ ಮಾಜಿ ಪುರಸಭಾ ಉಪಾಧ್ಯಕ್ಷ ಎನ್‌.ಇಂದ್ರ, ಕುರಿಹುಂಡಿ ಮಹೇಶ್‌, ದೇವನೂರು ಮಹದೇವಪ್ಪ, ಮಾಜಿ ಪುರಸಭಾ ಸದಸ್ಯ ನಾಸಿರ್‌, ಸವಿತಾ ಸಮಾಜದ ಮುಖಂಡ ಕೆಂಪರಾಜು, ಮಾದಪ್ಪ ಮತ್ತಿತರರಿದ್ದರು.  

ಇದರಿಂದಾಗಿ ಹಲವಾರು ಮುಖಂಡರು ನಿಯೋಗದಲ್ಲಿ ಕಾಣಿಸಿಕೊಳ್ಳುವುದರೊಂದಿಗೆ ಸಂಸದರು, ಶಾಸಕರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರ ಬೆಂಬಲಿಗರ ಮುಸುಕಿನ ಗುದ್ದಾಟ ಬೀದಿಗೆ ಬಂದಂತಾಗಿದೆ. 

Advertisement

Udayavani is now on Telegram. Click here to join our channel and stay updated with the latest news.

Next