ಚಿಕ್ಕಬಳ್ಳಾಪುರ: ರಾಜ್ಯ ರೈತ ಸಂಘ ಅಧ್ಯಕ್ಷ ಕೋಡ ಹಳ್ಳಿ ಚಂದ್ರಶೇಖರ್ ಅವರ ಮೇಲೆ ಗಂಭೀರಆರೋಪ ಕೇಳಿಬಂದ ಹಿನ್ನೆಲೆಯಲ್ಲಿ ಆರೋಪ ಮುಕ್ತ ಆಗುವವರೆಗೆ ಹಸಿರುಶಾಲು ಧರಿಸಬಾರ ದೆಂದು ರೈತ ಸಂಘ ಜಿಲ್ಲಾ ಪ್ರಧಾನಕಾರ್ಯದರ್ಶಿ ಮಂಚೇನಹಳ್ಳಿ ಎಂ. ಆರ್.ಲಕ್ಷ್ಮೀ ನಾರಾಯಣ್ ಆಗ್ರಹಿಸಿದರು.
ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರ ಜತೆ ಮಾತನಾಡಿ, ದಿ.ಪ್ರೋ.ನಂಜುಂಡಸ್ವಾಮಿ ಹಾಗೂ ಪುಟಣಯ್ಯ ಅವರು ರೈತರ ಹೆಸರಿನಲ್ಲಿಸಂಘಟನೆ ಮಾಡಿ ರೈತರ ಕಲ್ಯಾಣಕ್ಕಾಗಿ ದುಡಿದರು.
ಆದರೇ ಕೋಡಿಹಳ್ಳಿ ಚಂದ್ರಶೇಖರ್ ಅವರ ವಿರುದ್ಧ ಗಂಭೀರ ಆರೋಪವಿದೆ. ಅವರು ಹಸಿರು ಶಾಲು ಹೊದೆಯದಿರಲು ಸೂಚಿಸಲಾಗಿದೆ ಎಂದರು.
ರೈತ ಸಂಘದ ಜಿಲ್ಲಾ ಕಾರ್ಯದರ್ಶಿ ಭಕ್ತರಹಳ್ಳಿ ಪ್ರತೀಶ್ ಮಾತನಾಡಿ, ಕೋಡಿಹಳ್ಳಿ ಚಂದ್ರಶೇಖರ್‌ಒಡೆತನದ ಸಿಎಂಎನ್ ಸಂಸ್ಥೆಯನ್ನು ಕೇಂದ್ರದಸಿಬಿಐ ಮತ್ತು ರಾಜ್ಯದ ಸಿಐಡಿ ಸಂಸ್ಥೆಗಳಿಂದತನಿಖೆಗೆ ಒಳಡಿಸಬೇಕೆಂದು ಆಗ್ರಹಿಸಿದರು. ತಾಲೂಕು ಅಧ್ಯಕ್ಷ ದೊಡ್ಡಮರಳಿ ಸಂಪತ್ ಕುಮಾರ್, ಕಾರ್ಯದರ್ಶಿ ಶಿವರಾಜು, ಗುಡಿಬಂಡೆ
ವರದರಾಜು, ಚಿಂತಾಮಣಿ ಕದಿರೇಗೌಡ, ಯೋಧ ಶಿವನಂದರೆಡ್ಡಿ, ಗೌರಿಬಿದುನೂರಿನ ಅದ್ಯಕ್ಷಲೋಕೇಶ ಗೌಡ, ಶಿಡ್ಲಘಟ್ಟ ತಾಲೂಕಿನ ದೊಡ್ಡತೇಕಹಳ್ಳಿ ಆಂಜಿನಪ್ಪ, ಡಿವಿ,ನಾರಾಯಣಸ್ವಾಮಿ, ಅತ್ತಿಗಾನಹಳ್ಳಿ ಮುನೇಗೌಡ ಇತರರಿದ್ದರು.