Advertisement
ಮ್ಯೂಸಿಯಂನಲ್ಲಿ ನಡೆದಿದ್ದೇನು?22 ವರ್ಷದ ಜೀನ್ ಹುಯೆಟ್ ಯೂನಿರ್ವಸಿಟಿ ವಿದ್ಯಾರ್ಥಿನಿ, ಈಕೆ ಪ್ಯಾರಿಸ್ ನಲ್ಲಿ ವಾಸವಾಗಿದ್ದು, ಮ್ಯೂಸಿ ಡಿ ಓರ್ಸೆ ಗೆ ನಿರಂತರವಾಗಿ ಭೇಟಿ ನೀಡುವುದು ಹವ್ಯಾಸವಾಗಿತ್ತು. ಇದು ಯುರೋಪ್ ನಲ್ಲಿರುವ ಅತೀ ಜನಪ್ರಿಯ ಹಾಗೂ ಬೃಹತ್ ಮ್ಯೂಸಿಯಂ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. ಕಳೆದ ವಾರ ಖ್ಯಾತ ಫ್ರೆಂಚ್ ಕಲಾವಿದ ಜೇಮ್ಸ್ ಟಿಸ್ಸೋಟ್ ಕಲಾಕೃತಿ ಪ್ರದರ್ಶನ ಇದ್ದಿದ್ದರಿಂದ ಮ್ಯೂಸಿಯಂಗೆ ಭೇಟಿ ನೀಡಲು ಹುಯೆಟ್ ನಿರ್ಧರಿಸಿದ್ದಳು.
Related Articles
Advertisement
ನಾನೇನಾದರೂ ಮ್ಯೂಸಿಯಂನ ಕಾನೂನನ್ನು ಉಲ್ಲಂಘಿಸಿದ್ದೇನೆಯೇ ಎಂದು ಹುಯೆಟ್ ಮ್ಯೂಸಿಯಂ ಸೆಕ್ಯುರಿಟಿ ಮತ್ತು ಮ್ಯಾನೇಜರ್ ಬಳಿ ಪ್ರಶ್ನಿಸಿದ್ದಳು. ಆಗ ಮ್ಯಾನೇಜರ್ ನಕ್ಕುಬಿಟ್ಟಿದ್ದ…ಸೆಕ್ಯುರಿಟಿ ಗಾರ್ಡ್…ಶಾಂತರಾಗಿ, ಗಾಬರಿಯಾಗಬೇಡಿ ಎಂದು ಹೇಳಿದ್ದನಂತೆ. ಇಷ್ಟಾದರೂ ಹುಯೆಟ್ ಗೆ ನಿಜವಾದ ವಿಷಯ ಏನೆಂದು ಗೊತ್ತಾಗದೆ ಗೊಂದಲಕ್ಕೆ ಬಿದ್ದಿರುವುದಾಗಿ ತಿಳಿಸಿದ್ದಾಳೆ.
ಇದನ್ನೂ ಓದಿ: ಸ್ಯಾಂಡಲ್ ವುಡ್ ಡ್ರಗ್ ಪ್ರಕರಣ: ಮಾಜಿ ಸಚಿವರ ಪುತ್ರ ಆದಿತ್ಯ ಆಳ್ವ ಮನೆ ಮೇಲೆ ಸಿಸಿಬಿ ದಾಳಿ
ಯಾರೊಬ್ಬರು ಆಕೆಗೆ ನೇರವಾಗಿ ಉತ್ತರವನ್ನೇ ಕೊಟ್ಟಿಲ್ಲವಂತೆ..ನಂತರ ಮ್ಯೂಸಿಯಂ ಮ್ಯಾನೇಜರ್, ನೀನು ಮೊದಲು ನಿನ್ನ ಮೈಮೇಲೆ ಜಾಕೆಟ್ ಹಾಕಿಕೊಂಡು ನಂತರ ಒಳಗೆ ಹೋಗು ಎಂದು ಸೂಚನೆ ನೀಡಿರುವುದಾಗಿ ಆಕೆ ತಿಳಿಸಿದ್ದಾಳೆ. ಮ್ಯೂಸಿಯಂ ವೀಕ್ಷಣೆಗೆ ಬಂದವರು ತನ್ನನ್ನು ಕೆಟ್ಟ ದೃಷ್ಟಿಯಿಂದ ನೋಡುತ್ತಿರುವುದು ನನ್ನ ಗಮನಕ್ಕೆ ಬಂದಿತ್ತು. ಅಲ್ಲದೇ ಬಹಿರಂಗವಾಗಿ ಅವರು ಹಾಗೆ ಹೇಳಿದಾಗ ನನಗೆ ಮುಜುಗರವಾಗಿರುವುದಾಗಿ ವಿದ್ಯಾರ್ಥಿನಿ ತಿಳಿಸಿದ್ದಾಳೆ ಎಂದು ವರದಿ ಹೇಳಿದೆ.