Advertisement
ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರ ತಾತ ಕಿಮ್-2- ಸಂಗ್‌ರ 105ನೇ ಜನ್ಮದಿನಾಚರಣೆಯ ಹಿನ್ನೆಲೆಯಲ್ಲಿ ಶನಿವಾರ ಉ.ಕೊರಿಯಾವು ತನ್ನ 6ನೇ ಅಣ್ವಸ್ತ್ರ ಪರೀಕ್ಷೆಯನ್ನು ಅಥವಾ ಪ್ರಮುಖ ಕ್ಷಿಪಣಿ ಪರೀಕ್ಷೆಯನ್ನು ನಡೆಸಲಿದೆ ಎಂದೇ ಅಂತಾರಾಷ್ಟ್ರೀಯ ಸಮುದಾಯ ನಂಬಿತ್ತು. ಅಂದುಕೊಂಡಂತೆ ನಡೆದಿದ್ದೇ ಆದಲ್ಲಿ, ಉ.ಕೊರಿಯಾ ವಿರುದ್ಧ ಯುದ್ಧ ಸಾರಲು ಅಮೆರಿಕ ಕೂಡ ಸಿದ್ಧವಾಗಿ ನಿಂತಿತ್ತು. ಅದಕ್ಕೆಂದೇ, ದಕ್ಷಿಣ ಕೊರಿಯಾದಲ್ಲಿ ಸಮರಾಭ್ಯಾಸ ನಡೆಸಿ, ಕೊರಿಯಾ ಪರ್ಯಾಯ ದ್ವೀಪದಲ್ಲಿ ತನ್ನ ವಿಮಾನವನ್ನೂ ನಿಯೋಜಿಸಿತ್ತು. ಆದರೆ, ಹಾಗಾಗಲಿಲ್ಲ. ಉ.ಕೊರಿಯಾವು ಯಾವುದೇ ಅಣ್ವಸ್ತ್ರ ಪರೀಕ್ಷೆ ನಡೆಸಲಿಲ್ಲ. ಬದಲಿಗೆ, ಸೇನಾ ಪರೇಡ್ ನಡೆಸುವ ಮೂಲಕ ವಿಶಿಷ್ಟ ಖಂಡಾಂತರ ಕ್ಷಿಪಣಿ ಸೇರಿದಂತೆ ತನ್ನ ಸೇನಾಶಕ್ತಿಯನ್ನು ವಿಶ್ವಸಮುದಾಯಕ್ಕೆ ತೋರಿಸಿಕೊಟ್ಟಿದೆ.
ತಮ್ಮಲ್ಲಿ ಎಂತೆಂತಹ ಶಸ್ತ್ರಾಸ್ತ್ರಗಳಿವೆ ಎಂಬುದನ್ನು ಜಗತ್ತಿಗೆ ತೋರಿಸಲೆಂದೇ ಉ.ಕೊರಿಯಾವು ಈ ಸೇನಾ ಪರೇಡ್ ಆಯೋಜಿಸಿದಂತಿತ್ತು. ಟ್ರಕ್‌ಗಳಲ್ಲಿ ಕೆಎನ್-08 ಸರಣಿಯ ಕ್ಷಿಪಣಿಗಳನ್ನು ಪ್ರದರ್ಶಿಸಲಾಯಿತು. ಇದು ಅತ್ಯಂತ ದೂರದ ಗುರಿಯನ್ನು ತಲುಪುವ ಸಾಮರ್ಥ್ಯವುಳ್ಳ ಕ್ಷಿಪಣಿ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಜತೆಗೆ, ಎರಡು ರೀತಿಯ ಟಿಇಎಲ್ (ಕ್ಷಿಪಣಿ ಉಡಾವಣ ವಾಹನ), ಟ್ಯಾಂಕ್‌ಗಳು, ಬಹು ರಾಕೆಟ್ ಉಡಾವಣಾ ವಾಹನಗಳು, ಜಲಾಂತರ್ಗಾಮಿಗಳಿಂದ ಹಾರಿಸುವ ಸಾಲಿಡ್-ಫ್ಯೂಯೆಲ್ ಕ್ಷಿಪಣಿಗಳು, ಮುಸುಡಾನ್ ಕ್ಷಿಪಣಿ, ಉಡಾವಣೆಗೆ ಮೊದಲು ಪತ್ತೆಯೇ ಮಾಡಲಾಗದಂಥ ಹೊಸ ಮಾದರಿಯ ಕ್ಷಿಪಣಿ ಮತ್ತಿತರ ಶಸ್ತ್ರಾಸ್ತ್ರಗಳನ್ನು ಪರೇಡ್‌ನಲ್ಲಿ ಪ್ರದರ್ಶಿಸಲಾಯಿತು.
Related Articles
ಅಮೆರಿಕ ಸೇನೆಯು ಗುರುವಾರ ರಾತ್ರಿ ಅಫ^ನ್ ಮೇಲೆ ನಡೆಸಿದ ಅಣುವೇತರ ಬಾಂಬ್ ದಾಳಿಗೆ ಮೃತಪಟ್ಟ ಐಸಿಸ್ ಉಗ್ರರ ಸಂಖ್ಯೆ 94ಕ್ಕೇರಿಕೆಯಾಗಿದೆ. ದಾಳಿ ನಡೆದ ಅಚಿನ್ ಜಿಲ್ಲೆಯ ನಂಗರ್‌ಹಾರ್ ಪ್ರಾಂತ್ಯದಲ್ಲಿ ಶನಿವಾರ ಶೋಧ ಕಾರ್ಯ ನಡೆದಿದ್ದು, 94 ಮಂದಿಯ ಮೃತದೇಹ ಪತ್ತೆಯಾಗಿದೆ. ಈ ಪೈಕಿ ನಾಲ್ವರು ಐಸಿಸ್‌ನ ನಾಯಕ ಸ್ಥಾನದಲ್ಲಿದ್ದವರು ಎಂದು ಅಫ^ನ್ ಅಧಿಕಾರಿಗಳು ತಿಳಿಸಿದ್ದಾರೆ. ಜತೆಗೆ, ದಾಳಿಯಲ್ಲಿ ನಾಗರಿಕರಾರೂ ಬಲಿಯಾಗಿಲ್ಲ ಎಂದೂ ಅವರು ಸ್ಪಷ್ಟಪಡಿಸಿದ್ದಾರೆ. ದಾಳಿಯಲ್ಲಿ 36 ಮಂದಿ ಸಾವಿಗೀಡಾಗಿದ್ದಾರೆ ಎಂದು ಶುಕ್ರವಾರ ಸರಕಾರ ಅಂದಾಜಿಸಿತ್ತು. ಜತೆಗೆ, ಈ ಸಂಖ್ಯೆ ಹೆಚ್ಚಳವಾಗುವ ಸಾಧ್ಯತೆಯನ್ನೂ ಹೇಳಿತ್ತು.
Advertisement
ಜಗತ್ತಿನಾದ್ಯಂತ ಧಾರ್ಮಿಕ ಸ್ವಾತಂತ್ರ್ಯಕ್ಕೆ ಭಯೋತ್ಪಾದನೆಯೇ ಅತಿದೊಡ್ಡ ಅಪಾಯ. ಹಿಂದೂಗಳು ಸೇರಿದಂತೆ ಎಲ್ಲ ಧರ್ಮಗಳ ಜನರೂ ತಮ್ಮ ಪ್ರಜ್ಞೆಗೆ ತಕ್ಕಂತೆ ಪೂಜಿಸುವಂಥ ಒಳ್ಳೆಯ ನಾಳೆಗಳು ಬರಲಿ ಎನ್ನುವ ಆಶಯ ನಮ್ಮದು.– ಡೊನಾಲ್ಡ್ ಟ್ರಂಪ್, ಅಮೆರಿಕ ಅಧ್ಯಕ್ಷ