Advertisement

ನಮ್ಮದು ಆಲ್‌ರೌಂಡ್‌ ಪ್ರದರ್ಶನ: ವಿರಾಟ್‌ ಕೊಹ್ಲಿ

10:40 PM Dec 31, 2021 | Team Udayavani |

ಸೆಂಚುರಿಯನ್‌: ದಕ್ಷಿಣ ಆಫ್ರಿಕಾ ವಿರುದ್ಧದ ಟೆಸ್ಟ್‌ ಸರಣಿಯ ಮೊದಲ ಪಂದ್ಯದಲ್ಲಿ ಭಾರತ 113ರನ್‌ ಅಂತರದ ಗೆಲುವು ಸಾಧಿಸಿರುವ ಬಗ್ಗೆ ನಾಯಕ ವಿರಾಟ್‌ ಕೊಹ್ಲಿ ಹರ್ಷ ವ್ಯಕ್ತಪಡಿಸಿದ್ದಾರೆ.

Advertisement

ತಂಡ ಎಲ್ಲ ವಿಭಾಗದಲ್ಲಿಯೂ ಆಲ್‌ರೌಂಡ್‌ ಪ್ರದರ್ಶನ ತೋರಿದೆ. ಇದೇ ಸಾಮರ್ಥ್ಯ ಮುಂದಿನ ಪಂದ್ಯಗಳಲ್ಲೂ ಪುನರಾವರ್ತನೆಗೊಳ್ಳಲಿದೆ ಎಂದು ಕೊಹ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

“ಬಿಸಿಸಿಐ ಟಿವಿ’ ಜತೆಗೆ ಮಾತನಾಡಿದ ವಿರಾಟ್‌ ಕೊಹ್ಲಿ, “ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿ ಯಾವತ್ತೂ ಅತ್ಯಂತ ಕಠಿನವಾಗಿರುತ್ತದೆ. ಎಲ್ಲೇ ಆಡಿದರೂ ಇದು ಸುಲಭ ಸವಾಲಲ್ಲ. ಅದರಲ್ಲೂ ಸೆಂಚುರಿಯನ್‌ನಲ್ಲಿ ಆಡುವುದು ಮತಷ್ಟು ಕಠಿನ. ಆದರೂ ನಾಲ್ಕು ದಿನಗಳಲ್ಲಿಯೇ ಸ್ಪಷ್ಟ ಫ‌ಲಿತಾಂಶ ಕಂಡುಕೊಳ್ಳುವುದರೊಂದಿಗೆ ನಮ್ಮ ತಂಡದ ಸಾಮರ್ಥ್ಯವನ್ನು ಪ್ರದರ್ಶಿಸಿದ್ದೇವೆ. ನಾವೀಗ ಅವಕಾಶಗಳಿಗಾಗಿ ಎದುರು ನೋಡುತ್ತಿದ್ದೇವೆ ಮತ್ತು ನಮ್ಮ ಆಟವನ್ನು ಹೀಗೆಯೇ ಮುಂದುವರಿಸುತ್ತೇವೆ’ ಎಂದರು.

ಇದನ್ನೂ ಓದಿ:ಪ್ರೊ ಕಬಡ್ಡಿ: ಪುನೇರಿ ಮೇಲೆ ತಮಿಳ್‌ ತಲೈವಾಸ್‌ ಸವಾರಿ

 

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next