ಬೆಂಗಳೂರು: ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷವಾಗಿದೆ. ಮಾತಿಗೆ ಬದ್ಧವಾಗಿರುವ ಪಕ್ಷ ನಮ್ಮದಾಗಿದ್ದರಿಂದ ಚುನಾವಣಾ ಸಂದರ್ಭದಲ್ಲಿ ರಾಜ್ಯದ ಜನತೆಗೆ ಪಂಚ ಗ್ಯಾರಂಟಿಗಳನ್ನು ನೀಡಿದ್ದೆವು. ಅದರಂತೆಯೇ ನಡೆದುಕೊಳ್ಳಲಾಗಿದೆ ಎಂದು ಶಾಸಕ ದಿನೇಶ ಗೂಳಿಗೌಡ ಹೇಳಿದರು.
ಎಷ್ಟೇ ಆರ್ಥಿಕ ಹೊರೆ ಬಂದರೂ ಕೂಡಾ ನಿವಾರಣೆ ಮಾಡಿಕೊಂಡು, ರಾಜ್ಯದ ಜನರ ಅಭ್ಯುದಯಕ್ಕಾಗಿ ಈ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತರುತ್ತಿದ್ದೇವೆ ಎಂದು ಹೇಳಿದ್ದಾರೆ. ಈ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನುಡಿದಂತೆ ನಡೆದಿದ್ದಾರೆ. ಹೀಗೆ ನುಡಿದಂತೆ ನಡೆದ ನಮ್ಮ ನಾಯಕರಿಗೆ ನನ್ನ ಅಭಿನಂದನೆಗಳು ಎಂದಿದ್ದಾರೆ.
ನುಡಿದಂತೆ ನಡೆದ ಪಕ್ಷ ಕಾಂಗ್ರೆಸ್ ಹಾಗೂ ಭರವಸೆಯ ಗ್ಯಾರಂಟಿಯ ಸರ್ಕಾರ ನಮ್ಮದು ಎಂದು ಕೆಪಿಸಿಸಿ ಮಾಧ್ಯಮ ವಿಭಾಗದ ಉಪಾಧ್ಯಕ್ಷರೂ ಆದ ಶಾಸಕ ದಿನೇಶ ಗೂಳಿಗೌಡ ಹೇಳಿದರು.