ಆರಾಧಿಸಿಕೊಂಡು ಬಂದವರು. ಈ ಆರಾಧನ ಪದ್ಧತಿಯನ್ನು ನಮ್ಮ ಯುವ ಪೀಳಿಗೆಗೆ ತಿಳಿಸಬೇಕೆಂಬ ಉದ್ದೇಶದಿಂದ ತುಳುನಾಡಿನ ಸಾಂಪ್ರದಾಯಿಕ ಪದ್ಧತಿಯಂತೆ ಬಿಸು ಪರ್ಬವನ್ನು ಪ್ರತೀವರ್ಷ ಆಚರಿಸುತ್ತಿದ್ದೇವೆ. ಸಮಾಜ ಬಾಂಧವರ ಅನುಕೂಲಕ್ಕಾಗಿ ಸಂಘವು ಹೊಸ ಹೊಸ ಯೋಜನೆಗಳನ್ನು ಕೈಗೆತ್ತಿಕೊಂಡು ಕಾರ್ಯಪ್ರವೃತ್ತಗೊಂಡಿದೆ.
Advertisement
ಸಂಘಕ್ಕೆ ಹೊಸ ಸದಸ್ಯರು ಸೇರಿಕೊಂಡಾಗ ಮಾತ್ರ ಹೊಸ ವಿಚಾರಗಳು, ಹೊಸತನ ಬರಲು ಸಾಧ್ಯವಾಗುವುದು. ಸಂಘವು ಯುವ ಪೀಳಿ ಗೆಗೆ ನಾಡಿನ ಆಚಾರ – ವಿಚಾರ, ಸಾಂಸ್ಕೃತಿಕ – ಧಾರ್ಮಿಕ ಪರಂಪರೆಗಳನ್ನು ಪರಿಚಯಿಸುವ ಉದ್ದೇಶದಿಂದ ವಿವಿಧ ಕಾರ್ಯಕ್ರಮಗಳನ್ನು ನಿರಂತರವಾಗಿ ಹಮ್ಮಿಕೊಳ್ಳುತ್ತಿದೆ. ಇಲ್ಲಿನ ಕಾರ್ಯಕ್ರಮದಲ್ಲಿ ಯುವ ಸಮೂಹವು ಹೆಚ್ಚಿನ ಸಂಖ್ಯೆಯಲ್ಲಿ ಉತ್ಸಾಹದಿಂದ ಭಾಗ ವಹಿಸುವಂತೆ ಮಾಡುವಲ್ಲಿ ಸಂಘವು ಹೆಚ್ಚಿನ ಮುತುವರ್ಜಿ ವಹಿಸುತ್ತಿದೆ ಎಂದು ಪಿಂಪ್ರಿ – ಚಿಂಚ್ವಾಡ್ ಬಂಟರ ಸಂಘದ ಅಧ್ಯಕ್ಷ ರಾಕೇಶ್ ಶೆಟ್ಟಿ ಬೆಳ್ಳಾರೆ ಹೇಳಿದರು.
ರತ್ನಲೋಕ್ ಹಿಂದುಗಡೆಯಿರುವ ಶ್ರಮಶಕ್ತಿ ಭವನದಲ್ಲಿ ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ಆಯೋಜಿಸಿದ ಬಿಸು ಪರ್ಬ ಹಾಗೂ ಜಾಗತಿಕ ಬಂಟರ ದಿನಾಚರಣೆಯಲ್ಲಿ ಅವರು ಅಧ್ಯಕ್ಷತೆ ವಹಿಸಿ ಮಾತನಾಡಿ, ಮನುಷ್ಯನಾಗಿ ಹುಟ್ಟಿದ ಮೇಲೆ ಸಂಸ್ಕಾರ ಬಹಳ ಮುಖ್ಯವಾಗಿದೆ. ನಮ್ಮ ಸಂಸ್ಕೃತಿ-ಸಂಸ್ಕಾರವನ್ನು ಯುವ ಪೀಳಿಗೆಗೆ ಕಲಿಸಿ, ನಮ್ಮತನವನ್ನು ಮೆರೆಯಲು ಇಂತಹ ಕಾರ್ಯಕ್ರಮಗಳು ಪ್ರೇರಣೆಯಾಗಿವೆ. ನಾವೆಲ್ಲರೂ ಒಂದೇ ಎಂಬ ಮನೋಭಾವದಿಂದ ಒಗ್ಗಟ್ಟಿನಿಂದ ಬಾಳುವ ಅಗತ್ಯವಿದೆ. ನಮ್ಮಲ್ಲಿನ ಒಗ್ಗಟ್ಟು, ಒಮ್ಮತದ ನಿರ್ಧಾರ ಗಳು ಎಲ್ಲರಿಗೂ ಶಕ್ತಿಯಾಗಲಿವೆ. ಇದರಿಂದ ಸಮಾಜವನ್ನು ಸಶಕ್ತವಾಗಿ ಮುನ್ನಡೆಸಲು
ಸಾಧ್ಯವಾಗುತ್ತದೆ. ಇದು ಸಹೋದರತ್ವದ ಬಾಳ್ವೆಗೆ ಪೂರಕವೂ ಪ್ರೇರಣೆಯೂ ಆಗಲಿದೆ. ಆದ್ದರಿಂದ ನಾವೆಲ್ಲರೂ ಒಂದಾಗಿ ಸಂಘ
ಟನೆಯನ್ನು ಬಲಿಷ್ಠಗೊಳಿಸೋಣ ಎಂದು ತಿಳಿಸಿ ಎಲ್ಲರಿಗೂ ಶುಭ ಹಾರೈಸಿದರು. ಮುಖ್ಯ ಅತಿಥಿಯಾಗಿ ಪಾಲ್ಗೊಂಡ ಅಂತಾರಾಷ್ಟ್ರೀಯ ಯೋಗ ಶಿಕ್ಷಕಿ ಹೀರಾ ರಾಜ ಶೇಖರ್ ಶೆಟ್ಟಿ ಮಾತನಾಡಿ, ಬಂಟರಿಲ್ಲದ
ಕ್ಷೇತ್ರವಿಲ್ಲ. ಬಂಟರಿಂದು ಎಲ್ಲ ಕ್ಷೇತ್ರಗಳಲ್ಲಿ ಮುನ್ನಡೆ ಸಾಧಿಸುತ್ತಿದ್ದಾರೆ. ಬಂಟ ಸಮಾಜದ ಸಂಘ – ಸಂಸ್ಥೆಗಳು ಸಮಾಜದ ಆಶೋತ್ತರಗಳಿ ಗಾಗಿ ಸ್ಪಂದಿಸುತ್ತಿರುವುದು ಶ್ಲಾಘನೀಯ ವಿಚಾರವಾಗಿದೆ. ಸಂಘದ ಇಂದಿನ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಆನಂದವಾಗುತ್ತಿದೆ. ನಮ್ಮ ದೈನಂದಿನ ಯೋಗ, ವ್ಯಾಯಾಮ, ಧ್ಯಾನ ಇವುಗಳನ್ನು ಅಳವಡಿಸಿಕೊಳ್ಳುವುದ ರಿಂದ ರೋಗವನ್ನು ದೂರವಿಡಬಹುದಾಗಿದೆ. ನಾವು ಭವಿಷ್ಯದ ಬಗ್ಗೆ ಹೆಚ್ಚು ಚಿಂತೆ ವಹಿಸದೆ ದೈನಂದಿನ ಜೀವನವನ್ನು ಹೇಗೆ ಆರೋಗ್ಯಕರವಾಗಿ ಧನಾತ್ಮಕವಾಗಿ ಜೀವಿಸಬಹುದು ಎಂಬುದರ ಬಗ್ಗೆ ಕಾಳಜಿ ವಹಿಸಬೇಕಾದುದು ಅಗತ್ಯವಾಗಿದೆ ಎಂದರು.
Related Articles
ಜಗದೀಶ್ ಶೆಟ್ಟಿ, ಕ್ರೀಡಾ ಸಮಿತಿ ಕಾರ್ಯಾಧ್ಯಕ್ಷ ಜಯಾನಂದ್ ಶೆಟ್ಟಿ, ಶಿಕ್ಷಣ ಮತ್ತು ಸಮಾಜ ಕಲ್ಯಾಣ ಸಮಿತಿ ಕಾರ್ಯಾಧ್ಯಕ್ಷ ವಿಶ್ವನಾಥ ಕೆ. ಶೆಟ್ಟಿ ಮುಂಡ್ಕೂರು, ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ವಿ. ಶೆಟ್ಟಿ, ಸುನಿತಾ ರಾಕೇಶ್ ಶೆಟ್ಟಿ, ಯುವ ವಿಭಾಗದ ಕಾರ್ಯಾಧ್ಯಕ್ಷ ಆಕಾಶ್ ಜೆ. ಶೆಟ್ಟಿ ಹಾಗೂ ಇತರ ಉಪಸಮಿತಿಗಳ ಪದಾಧಿಕಾರಿಗಳು ಉಪಸ್ಥಿತರಿದ್ದರು.
Advertisement
ಸಂಘದ ಮಹಿಳಾ ವಿಭಾಗದ ಕಾರ್ಯಾಧ್ಯಕ್ಷೆ ಜ್ಯೋತಿ ವಿಜಯ್ ಶೆಟ್ಟಿ ನೇತೃತ್ವದಲ್ಲಿ ಗಣ್ಯರು, ಮಹಿಳಾ ವಿಭಾಗದ ಪದಾಧಿಕಾರಿಗಳು ಮತ್ತು ಸದಸ್ಯೆಯರು ಬಿಸು ಕಣಿಗೆ ಆರತಿಗೈದರು. ಅತಿಥಿಗಳನ್ನು ಸಂಸ್ಥೆಯ ಅಧ್ಯಕ್ಷರು ಮತ್ತು ಪದಾಧಿಕಾರಿಗಳು ಗೌರವಿ
ಸಿದರು. ಬಂಟ ಗೀತೆಯನ್ನು ಮೊಳಗಿಸಿ ಗೌರವ ಸಲ್ಲಿಸಲಾಯಿತು. ಸದಸ್ಯತ್ವ ನೋಂದಣಿಸಮಿತಿಯ ಕಾರ್ಯಾಧ್ಯಕ್ಷ ಅವಿನಾಶ್ ಶೆಟ್ಟಿ ಸ್ವಾಗತಿಸಿ, ಕಾರ್ಯಕ್ರಮ ನಿರ್ವಹಿಸಿದರು. ಸಂಘದ ಮಾಜಿ ಅಧ್ಯಕ್ಷರಾದ ವಿಶ್ವನಾಥ ಡಿ. ಶೆಟ್ಟಿ, ಎರ್ಮಾಳ್ ನಾರಾಯಣ ಶೆಟ್ಟಿ, ಎರ್ಮಾಳ್ ವಿಶ್ವನಾಥ ಶೆಟ್ಟಿ, ಕೆ. ಪದ್ಮನಾಭ ಶೆಟ್ಟಿ, ಮಹಿಳಾ ವಿಭಾಗದ ಮಾಜಿ ಅಧ್ಯಕ್ಷೆಯರಾದ ಪ್ರೇಮಾ ವಿ. ಶೆಟ್ಟಿ, ತನುಜಾ ಎ. ಶೆಟ್ಟಿ, ಸುಪ್ರಿಯಾ ಜೆ. ಶೆಟ್ಟಿ ಹಾಗೂ ಸಂಘದ ಪದಾಧಿಕಾರಿಗಳು, ವಿವಿಧ ಉಪಸಮಿತಿಗಳ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಮಹಿಳಾ ವಿಭಾಗ, ಯುವ ವಿಭಾಗದ ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ಪಾಲ್ಗೊಂಡು ಸಹಕರಿಸಿದರು. ಸಮಾಜ ಬಾಂಧವರಿಂದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆದವು. ಸುಮಾರು 300ಕ್ಕೂ ಹೆಚ್ಚು ಸಮಾಜ ಬಾಂಧವರು ಪಾಲ್ಗೊಂಡಿದ್ದರು. ಕಾರ್ಯಕ್ರಮದಲ್ಲಿ ಭೋಜ
ನದ ವ್ಯವಸ್ಥೆ ಮಾಡಲಾಗಿತ್ತು.