Advertisement

ಸ್ವಚ್ಛತೆಯೆಡೆಗೆ ನಮ್ಮ ಹೆಜ್ಜೆ ಕಾರ್ಯಕ್ರಮ

02:40 PM May 28, 2022 | Team Udayavani |

ಕನಕಗಿರಿ: ಸಮೀಪದ ಕರಡೋಣ ಗ್ರಾಪಂ ವ್ಯಾಪ್ತಿಯ ಉಮಳಿ ಕಾಟಾಪುರ ಗ್ರಾಮಕ್ಕೆ ಸಹಾಯಕ ನಿರ್ದೇಶಕ ಚಂದ್ರಶೇಖರ್‌ ಕೆ. ಭೇಟಿ ನೀಡಿ ಗ್ರಾಮದಲ್ಲಿ ಮನೆಗಳಿಗೆ ತೆರಳಿ ಹಸಿ ಮತ್ತು ಒಣಕಸ ವಿಂಗಡಿಸಬಹುದಾದ ಬಕೆಟ್‌ಗಳನ್ನು ನೀಡಿ ಸ್ವಚ್ಛತಾ ಕ್ರಮಗಳ ಬಗ್ಗೆ ಸಾರ್ವಜನಿಕರಿಗೆ ಮಾಹಿತಿ ನೀಡಿದರು.

Advertisement

ಬಳಿಕ ಮಾತನಾಡಿದ ಅವರು, ನೂತನವಾಗಿ ಸ್ವತ್ಛತೆಯೆಡೆಗೆ ನಮ್ಮ ಹೆಜ್ಜೆ ಎಂಬ ನೂತನ ಕಾರ್ಯಕ್ರಮ ಹಮ್ಮಿಕೊಳ್ಳುತ್ತಿದ್ದು, ವಿವಿಧ ಗ್ರಾಮ ಪಂಚಾಯತ್‌ಗೆ ತೆರಳಿ ಸಾರ್ವಜನಿಕರಲ್ಲಿ ಸ್ವತ್ಛತೆಯ ಬಗ್ಗೆ ಮಾಹಿತಿ ನೀಡಲಾಗುತ್ತಿದೆ. ಹಾಗಾಗಿ ಜನರು ತಮ್ಮ ಮನೆಯ ಸುತ್ತಮುತ್ತ ಸ್ವಚ್ಛತೆಯ ಬಗ್ಗೆ ಗಮನ ನೀಡಬೇಕು. ಪ್ರತಿಯೊಂದು ಮನೆಗೆ ಸರ್ಕಾರದ ಸೌಲಭ್ಯ ಪಡೆದುಕೊಂಡು ಶೌಚಾಲಯ ನಿರ್ಮಿಸಿಕೊಂಡಿ ಬಳಸಬೇಕು ಎಂದು ಹೇಳಿದರು.

ಪಿಡಿಒ ಅಮರೇಶ ರಾಥೋಡ್‌, ಗ್ರಾಪಂ ಅಧ್ಯಕ್ಷೆ ಲಕ್ಷ್ಮೀ, ಉಪಾಧ್ಯಕ್ಷ ಮಾರುತೆಪ್ಪ, ಗ್ರಾಪಂ ಸದಸ್ಯರಾದ ಫಕೀರಮ್ಮ, ಭೈರಪ್ಪ, ಗ್ರಾಮಸ್ಥರಾದ ನಿರುಪಾದಿ, ಭೈರಪ್ಪ, ಹನುಮಂತ, ಯಮನೂರಪ್ಪ ದೊಡ್ಡಮನಿ, ಸೇರಿದಂತೆ ಸಿಬ್ಬಂದಿಯವರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next