Advertisement
80ರ ದಶಕದಲ್ಲಿದ್ದ ರೌಡಿಸಂ ಅಂತ ಓದಿರ್ತೀರಲ್ಲ, ಆ ಜಮಾನಾ ನಮು. ಒಂದೇ ವ್ಯತ್ಯಾಸ ಅಂದ್ರೆ, ಆ ಕಾಲದ ರೌಡಿ ಗಳು ದೊಡ್ಡ ಹೆಸರು ಮಾಡಿದ್ರು. ಕೆಲವ್ರು ಚೆನ್ನಾಗಿ ಆಸ್ತಿ ಮಾಡಿ ದ್ರು. ಐದತ್ತು ವರ್ಷ ಡಾನ್‌ಗಳಾಗಿ ಮೆರೆದ್ರು. ನಾನು, ನನ್ನಂಥ ಅದೆಷ್ಟೋ ಜನ, ಅಂಥಾ ಡಾನ್‌ಗಳ ಸಪೋರ್ಟರ್‌ಗಳಾಗಿ ಉಳಿದ್ವಿ. ಒಂದು ರೀತಿಯಲ್ಲಿ ಅದರಿಂದ ಒಳ್ಳೆಯದೇ ಆಯ್ತು. ಯಾಕಂದ್ರೆ, ಬರೀ ಬೆಂಗಳೂರಲ್ಲ, ಇಡೀ ಕರ್ನಾಟಕವನ್ನೇ ನಡುಗಿಸಿದ್ದ ಡಾನ್‌ಗಳು ಹಲವು ಸಂದರ್ಭಗಳಲ್ಲಿ ತಿಂಗಳುಗಟ್ಟಲೆ ಜೈಲಿನಲ್ಲಿದ್ದರು. ಅಲ್ಲೂ ಜಗಳ- ಕುಸ್ತಿ ಮಾಡಿ ಸುದ್ದಿಯಾದರು. ವರ್ಷಗಳು ಕಳೆದಂತೆ ಕೆಲವರಿಗೆ ಕಾಯಿಲೆ ಅಮರಿ ಕೊಂಡಿತು. ಹಲವರು ಕೆಟ್ಟ ಸಾವು ಕಂಡರು. ಆ ಮೂಲಕ- ಮನುಷ್ಯನ ಕುಕೃತ್ಯಕ್ಕೆ ಸತ್ತ ಮೇಲಲ್ಲ, ಬದುಕಿದ್ದಾಗಲೇ ಶಿಕ್ಷೆ ಆಗಿಬಿಡುತ್ತೆ ಅನ್ನುವುದಕ್ಕೆ ಸಾಕ್ಷಿಯಾದರು. ಅಂಥ ಪ್ರಸಂಗಗಳನ್ನು ಮತ್ತೆ ಮತ್ತೆ ನೋಡಿದ ಮೇಲೆ-ಲೈಫು ಇಷ್ಟೇನೇ ಎಂಬ ಸತ್ಯ ನನಗೆ ಅರ್ಥ ಆಯ್ತು.
ಅನಂತರ ನನ್ನ ಬದುಕು ವೇಗ ಪಡೆದುಕೊಂಡಿತು. ನಮ್ಮ ಡಾನ್ 15 ದಿನಕ್ಕೋ, ತಿಂಗಳಿಗೋ ಏನಾದರೂ ಕೆಲಸ ಹೇಳು ತ್ತಿದ್ದ. ಅವನು ಹೇಳಿದವರ ಮೇಲೆ ಅಟ್ಯಾಕ್ ಮಾಡಬೇಕಿತ್ತು. ಅನಂತರ ದುಷ್ಮನ್‌ಗಳು ಮತ್ತು ಪೊಲೀಸರಿಗೆ ಸಿಗದಂತೆ ತಪ್ಪಿಸಿ ಕೊಳ್ಳಬೇಕಿತ್ತು. ರಟ್ಟೆ ಗಟ್ಟಿಯಿದ್ದವ ಜಟ್ಟಿ ಅನ್ನುತ್ತಿದ್ದ ದಿನಗಳು ಅವು. ಅಂದುಕೊಂಡ ಕೆಲಸ ಆಯ್ತು ಅಂತ ಗೊತ್ತಾದ ತತ್‌ಕ್ಷಣ, ಡಾನ್ ಎಲ್ಲರಿಗೂ ಒಂದಷ್ಟು ಕಾಸು ಕೊಟ್ಟು-“ತಿರುಪತಿ, ಧರ್ಮಸ್ಥಳ, ಮೈಸೂರು, ನಂಜನ ಗೂಡು… ಹೀಗೆ ಎಲ್ಲಿಗಾದ್ರೂ ಹೋಗಿ ಬನ್ನಿ’ ಅನ್ನುತ್ತಿದ್ದ. “ಈ ಕೇಸ್ ನಲ್ಲಿ ಪೊಲೀಸರಿಗೆ ನಮ್ಮ ಗುರುತು ಸಿಗದಂತೆ ಮಾಡಪ್ಪಾ ಅಂತ ದೇವರಲ್ಲಿ ಬೇಡಿಕೊಂಡು ವಾಪಸ್ ಬರ್ತಿದ್ವಿ. ಅಷ್ಟರಲ್ಲಿ ನಮ್ಮ ಡಾನ್ ಪರಿಸ್ಥಿತಿಯನ್ನು ಬ್ಯಾಲೆನ್ಸ್ ಮಾಡಿರುತ್ತಿದ್ದ. ಕೇಸ್ ಆಗುತ್ತಿರಲಿಲ್ಲ! ಫ್ಯಾಕ್ಟರಿ ಕಡೆಯಿಂದ ಪ್ರತೀ ತಿಂಗಳೂ ಸಂಬಳ, ಹೊರಗಡೆ ರಾಜ ಮರ್ಯಾದೆ-ಲೈಫ್ ಈಸ್ ಬ್ಯೂಟಿಫುಲ್ ಎಂದು ನಾನು ಸಂಭ್ರಮಿಸುವ ಕಾಲಕ್ಕೇ ಆ ಘಟನೆ ನಡೆಯಿತು. ಅದೊಂದು ದಿನ ಮೆಜೆಸ್ಟಿಕ್‌ನಲ್ಲಿ ಬಸ್ ಇಳಿಯುತ್ತಿದ್ದಾಗಲೇ ಪೊಲೀಸರು ಎದುರಿಗೆ ನಿಂತರು. ಎಲ್ಲಿ, ಏನು ತಪ್ಪಾಯಿತು ಎಂದುಕೊಂಡೇ ಸ್ಟೇಶನ್‌ಗೆ ಹೋದರೆ, ಅಲ್ಲಿ ನಮ್ಮ ಡಾನ್ ಇದ್ದ! ಅವನಿಗೆ ನಿಲ್ಲಲೂ ಆಗುತ್ತಿರಲಿಲ್ಲ. ಅಷ್ಟರಮಟ್ಟಿಗೆ ವರ್ಕ್ ಆಗಿತ್ತು. “ನನ್ನ ಏರಿಯಾದಲ್ಲಿ ಬಾಲ ಬಿಚಿ¤àಯಾ ಬದ್ಮಾಶ್ ಅನ್ನುತ್ತಾ ಇನ್‌ಸ್ಪೆಕ್ಟರ್ ಕಪಾಳಕ್ಕೆ ಬಾರಿಸಿದರು. ಅಷ್ಟೆ: ತಲೆ ಗಿರ್ರೆಂದಿತು. ಏನೋ ಹೇಳಲು ಹೋದೆ, ಅಷ್ಟರಲ್ಲಿಯೇ-“ಸ್ವಾಮೀ, ನಿಮ್ಮ ಕಾಲು ಹಿಡಿತೀನಿ, ಅವನಿಗೆ ಹೊಡೆಯಬೇಡಿ’ ಎಂಬ ಧ್ವನಿ ಕೇಳಿಸಿತು. ಅದು ನನ್ನ ತಂದೆಯ ಸ್ವರ. ಮಗನನ್ನು ಠಾಣೆಗೆ ಒಯ್ದಿದ್ದಾರೆ ಎಂದು ಗೊತ್ತಾದ ತತ್‌ಕ್ಷಣ ಅಪ್ಪ ಧಾವಿಸಿ ಬಂದಿದ್ದರು. ಅವರ ಕಣ್ಣೀರು, ಪ್ರಾರ್ಥನೆಗೆ ಇನ್ಸ್ ಪೆಕ್ಟರ್ ಕರಗಿದರು. “ಸೆಂಟ್ರಲ್ ಗವರ್ನಮೆಂಟ್ ಕೆಲಸ ಇದೆ. ಹಾಗಿದ್ರೂ ಯಾಕಿಂಥ ಹೀನ ಬುದ್ಧಿ? ನಿನಗಿಂತ ಬಲಶಾಲಿ ಒಬ್ಬ ಇದ್ದೇ ಇರ್ತಾನೆ. ನಾಳೆ ನಿನ್ನನ್ನೂ ಅಟ್ಟಾಡಿ ಸಿಕೊಂಡು ಹೊಡೀತಾರೆ. ಅರ್ಥ ಮಾಡ್ಕೊ’- ಎಂದು ಬುದ್ದಿ ಹೇಳಿದರು. ಇಷ್ಟು ದಿನ ಕೇಸ್ ಆಗದಿರಲಿ ಅಂತ ಪ್ರಾರ್ಥಿ ಸಲು ದೇವಸ್ಥಾನಕ್ಕೆ ಹೋಗ್ತಿದ್ದೆ ತಾನೇ? ಈಗ ಕ್ರೈಂ ಬಿಟ್ಟುಬಿಡ್ತೇನೆ ಅಂತ ಕೇಳಿಕೊಳ್ಳೋಕೆ ಹೋಗು, ಅಂದರು. ಅವರೇ ಸ್ವಲ್ಪ ದುಡ್ಡನ್ನೂ ಕೊಟ್ಟರು. ಹಾಗೇ ಮಾಡಿದೆ.
Related Articles
Advertisement
ಆರಂಭದಲ್ಲಿ ಎಲ್ಲ ಚೆನ್ನಾಗಿತ್ತು. ಮೂರು ವರ್ಷ ಕಳೆದ ಅನಂತರ ನನ್ನ ಮಗನ ಹೆಸರಲ್ಲಿ ಭರ್ತಿ 25 ಲಕ್ಷ ರೂ. ಸಾಲ ಪಡೆದಿರುವ ಸಂಗತಿ ಗೊತ್ತಾಯಿತು. ರಮೇಶ್, ಯಾಕೆ ಹೀಗೆ ಮಾಡಿದ್ರಿ ಎಂದು ಕೇಳಿದ್ದಕ್ಕೆ-“ಅಣ್ಣಾ, ನನಗಾದ್ರೂ ಬೇರೆ ಯಾರಿದ್ದಾರೆ? ಸಾಲ ತೀರಿಸುವ ಜವಾಬ್ದಾರಿ ನನ್ನದು. ಬ್ಯಾಂಕ್‌ನಲ್ಲಿ ಸ್ವಲ್ಪ ಸಮಸ್ಯೆ ಆಗಿದ್ದರಿಂದ ನಿಮ್ಮ ಮಗನ ಹೆಸರಲ್ಲಿ ಸಾಲ ತಗೊಂಡೆ’ ಅಂದ. ಮುಂದೆ ನಾವು ಎಚ್ಚರದಿಂದ ಇರಬೇ ಕು ಅಂದುಕೊಳ್ಳುವ ವೇಳೆಗೆ, ಇದ್ದಕ್ಕಿದ್ದಂತೆ ಆಂಧ್ರಕ್ಕೆ ಹೋದ ರೆಡ್ಡಿ ಅನಂತರ ವಾಪಸ್ ಬರಲಿಲ್ಲ! ಬ್ಯಾಂಕ್‌ನಿಂದ ನಮ್ಮ ಮನೆಗೆ ನೋಟಿಸ್‌ಗಳು ಬರತೊಡಗಿದವು. ನಾಲ್ಕಾರು ಜನರಿಂದ ಮಾಹಿತಿ ಸಂಗ್ರಹಿಸಿ ಆಂಧ್ರಕ್ಕೆ ಹೋದರೆ-“ನೀವು ಯಾರೆಂದೇ ಗೊತ್ತಿಲ್ಲ. ನನಗೆ ಮರೆವಿನ ಕಾಯಿಲೆ ಇದೆ’ ಅಂದ ರಮೇಶ್ ರೆಡ್ಡಿ! ಸಿಟ್ಟಿಗೆದ್ದು ಎರಡೇಟು ಹಾಕಿದೆ ನೋಡಿ; ಬೆಂಗಳೂರಿನ ರೌಡಿಯೊಬ್ಬ ನನ್ನನ್ನು ಕೊಲೆ ಮಾಡಲು ಬಂದಿದ್ದಾನೆ ಎಂದೆಲ್ಲ ಆರೋಪಿಸಿ ನನ್ನ ಮೇಲೆ ದೂರು ದಾಖಲಿಸಿಬಿಟ್ಟ!
ಅಷ್ಟೆ: ಇನ್ನೆಂದೂ ರೌಡಿಸಂ ಮಾಡಬಾರದು ಅಂದು ಕೊಂಡಿದ್ದ ನಾನು, ಮತ್ತೆ ಫೀಲ್ಡ್‌ಗೆ ಇಳಿಯಲು ನಿರ್ಧರಿಸಿಬಿಟ್ಟೆ. ಪ್ಲಾನ್ ಮಾಡಿಕೊಂಡು ಹೋಗಿ ರೆಡ್ಡಿಯನ್ನು ಮುಗಿಸಬೇಕು ಅಂದುಕೊಂಡೆ. ಸೀದಾ ಬೆಂಗಳೂರಿಗೆ ಬಂದು, ನನಗೆ ಬುದ್ಧಿ ಹೇಳಿದ್ದ ಇನ್‌ಸ್ಪೆಕ್ಟರ್ ಅನ್ನು ಕಂಡು, ನಡೆದುದನ್ನೆಲ್ಲ ತಿಳಿಸಿದೆ. ಮುಂದಿನ ವಾರ ಅವನನ್ನು ಎತ್ತಿಬಿಡ್ತೇನೆ ಸರ್, ಅಂದೂ ಬಿಟ್ಟೆ. “ನೋಡೂ, ಒಂದು ಹಾವಿಗೆ ಒಂದು ಹದ್ದು ಇದ್ದೇ ಇರ್ತದೆ. ಆ ಖದೀಮನಿಗೆ ದೇವರೇ ಶಿಕ್ಷೆ ಕೊಡ್ತಾನೆ. ನೀನು ತೆಪ್ಪಗಿರು. ಸಾಧ್ಯವಾದಷ್ಟು ಸಾಲ ತೀರಿಸು. ಕೋರ್ಟ್‌ನಲ್ಲಿ ಮನವಿ ಮಾಡ್ಕೊ. ಯಾವ ಕಾರಣಕ್ಕೂ ರೌಡಿಸಂಗೆ ಹೋಗಬೇಡ. ಯಾರಿಗೆ ಗೊತ್ತು? ಗ್ರಹಚಾರ ಕೆಟ್ಟು ರೆಡ್ಡಿ ಬದಲು ನೀನೇ ಹೋಗಿಬಿಟ್ರೆ. ನೀನು ಹೊಡೆಯುವಾಗ ಅವನು ತೂಕಡಿಸ್ತಾ ಇರ್ತಾನಾ? ನಿನ್ನ ಕಣ್ಣೆದುರೇ ಮೆರೆದಾಡಿದ ಡಾನ್‌ಗಳು ಹೇಗೆ ಖಲಾಸ್ ಆದರು ಅನ್ನುವುದನ್ನು ನೋಡಿದ್ದೀಯಲ್ಲ…’ ಅಂದರು!
ಇನ್‌ಸ್ಪೆಕ್ಟರ್ ಮಾತಿನಲ್ಲಿ ಸತ್ಯವಿದೆ ಅನ್ನಿಸಿತು. ಕ್ರೈಂ ಮಾಡಿ ಬದುಕಿಡೀ ಜೈಲಿನಲ್ಲಿ ಕೊಳೆಯುವ ಬದಲು ಶ್ರದ್ಧೆಯಿಂದ ಕೆಲಸ ಮಾಡಿ ಏನಾದರೂ ಸಾಧಿಸಬೇಕು ಅನ್ನಿಸಿತು. ಹೆಂಡತಿ, ಮಕ್ಕ ಳಿಗೂ ಇದನ್ನೇ ಹೇಳಿದೆ. ಜಾಮೀನು ಪಡೆದೆ. ಆ ಇನ್‌ಸ್ಪೆಕ್ಟರ್‌ಸಹಾಯದಿಂದಲೇ ಗ್ಯಾಸ್ ಏಜನ್ಸಿ ತಗೊಂಡೆ. ಜಟ್ಟಿಯಂತೆ ಇದ್ದವನಿಗೆ ಗ್ಯಾಸ್ ಸಿಲಿಂಡರ್ ತೂಕ ಅನ್ನಿಸಲಿಲ್ಲ. ಎಕ್ಸ್ಟ್ರಾ ಭಕ್ಷೀಸು ಪಡೆಯದೇ ಗ್ರಾಹಕರಿಗೆ ಸಿಲಿಂಡರ್ ಪೂರೈಸಿದೆ. ಬಾಯಿಮಾತಿನ ಮೂಲಕವೇ ನಮ್ಮ ಏಜೆನ್ಸಿಗೆ ಪ್ರಚಾರ ದೊರಕಿತು. ಈ ಮಧ್ಯೆ ಕೆಟ್ಟ ಕುತೂಹಲದಿಂದ ರಮೇಶ್ ರೆಡ್ಡಿಯ ಕುರಿತೂ ವಿಚಾರಿಸಿದೆ. ಆತ ಆಂಧ್ರದಲ್ಲೂ ಹಣಕಾಸಿನ ವ್ಯವಹಾರದಲ್ಲಿ ಅಪರಾತಪರ ಮಾಡಿಕೊಂಡು ಜೈಲುಪಾಲಾಗಿರುವ ಸುದ್ದಿ ಸಿಕ್ಕಿತು.
ಸಿಟ್ಟಿನ ಕೈಗೆ ಬುದ್ಧಿ ಕೊಟ್ಟಿದ್ದರೆ ಏನಾಗ್ತಿತ್ತೋ ಗೊತ್ತಿಲ್ಲ. ಆ ಇನ್‌ಸ್ಪೆಕ್ಟರ್ ಮಾತು ಕೇಳಿ ನಾನೂ ಮನುಷ್ಯನಾದೆ. ನಾಲ್ಕು ಜನಕ್ಕೆ ನೌಕರಿ ಕೊಟ್ಟೆ. ಎಲ್ಲ ಸಾಲ ತೀರಿಸಿ ನೆಮ್ಮದಿಯಿಂದ ಬದುಕ್ತಾ ಇದ್ದೀನಿ, ಗೊತ್ತಾಯ್ತಲ್ಲ, ಕಥೆ ಹೀಗೂ ಇರುತ್ತೆ ಅನ್ನುತ್ತಾ ಆ ಹಿರಿಯರು ನಕ್ಕರು.
-ಎ.ಆರ್.ಮಣಿಕಾಂತ್