Advertisement

ನಮ್ಮ ಸರ್ಕಾರ ರೈತರನ್ನು ಕೈಬಿಡುವುದಿಲ್ಲ: ಸಚಿವ ಮುನಿರತ್ನ

07:47 PM May 27, 2022 | Team Udayavani |

ಬೆಂಗಳೂರು:‌ ಮಾವು ಬೆಳೆಗಾರರಿಗೆ ಪರಿಹಾರ ನೀಡಲು ಮುಖ್ಯಮಂತ್ರಿಯವರಲ್ಲಿ ಈಗಾಗಲೇ ಚರ್ಚಿಸಲಾಗಿದೆ. ನಮ್ಮ ಸರ್ಕಾರ ರೈತರನ್ನು ಸರ್ಕಾರ ಯಾವತ್ತೂ ಕೈಬಿಡುವುದಿಲ್ಲ. ಎಂದು ತೋಟಗಾರಿಕೆ ಸಚಿವ ಮುನಿರತ್ನ ತಿಳಿಸಿದರು.

Advertisement

ತೋಟಗಾರಿಕಾ ಇಲಾಖೆ ಹಾಗೂ ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದಿಂದ ನಗರದ ಲಾಲ್‌ಬಾಗ್‌ನಲ್ಲಿಆಯೋಜಿಸಿರುವ ಮಾವು ಮತ್ತು ಹಲಸು ಹಣ್ಣಿನ ಪ್ರದರ್ಶನ ಹಾಗೂ ಮಾರಾಟ ಮೇಳ-2022ಕ್ಕೆ ಶುಕ್ರವಾರ ಚಾಲನೆ ನೀಡಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳಲ್ಲಿ ಕೊರೊನಾದಿಂದ ಮೇಳ ಮಾಡಲು ಸಾಧ್ಯವಾಗಿರಲಿಲ್ಲ. ಆದರೆ, ಈ ವರ್ಷ ಕೊರೊನಾ ತಗ್ಗಿದ ಕಾರಣ, ರೈತರನ್ನು ಹಾಗೂ ಗ್ರಾಹಕರನ್ನು ಒಂದೆಡೆ ನೋಡಲು ಸಂತೋಷವಾಗುತ್ತಿದೆ ಎಂದು ಹೇಳಿದರು.

ಯಾವುದೇ ಮಧ್ಯವರ್ತಿಗಳು ಇಲ್ಲದೇ ರೈತರಿಂದ ನೇರವಾಗಿ ಗ್ರಾಹಕರು ಖರೀದಿಸಬಹುದು. ಶ್ರೀನಿವಾಸಪುರ, ಚಿಕ್ಕಬಳ್ಳಾಪುರ ಸೇರಿದಂತೆ ನಾನಾ ಎಂಟು ಜಿಲ್ಲೆಗಳಿಂದ ಸುಮಾರು 25 ವಿಧದ ಮಾವು ಮತ್ತು ಹಲಸು ಹಣ್ಣುಗಳನ್ನು ತಂದಿದ್ದಾರೆ. ಈ ಹಣ್ಣುಗಳನ್ನು ಯಾವುದೇ ರಸಾಯನಿಕಗಳನ್ನು ಬಳಸದೇ ಬೆಳೆದಿದ್ದಾರೆ ಹಾಗೂ ತರತರಹದ ಹಣ್ಣುಗಳಿಗೆ ಒಂದೊಂದು ಬೆಲೆ ನಿಗದಿ ಮಾಡಲಾಗಿದ್ದು, ಯಾರಾದರೂ ಅದಕ್ಕಿನ ಹೆಚ್ಚಿನ ಬೆಲೆಗೆ ಮಾರಾಟ ಮಾಡುವುದು ಕಂಡುಬಂದಲ್ಲಿ ಕ್ರಮಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.

ಮಾವು ಮತ್ತು ಹಲಸು ಮೇಳನ್ನು ಎಲ್ಲಾ ಭಾಗಗಳಲ್ಲಿ ಮಾಡುವ ಯೋಚನೆಯಿದೆ. ಅಂಚೆ ಮೂಲಕ ಗ್ರಾಹಕರ ಮನೆ ತಲುಪುವ ಯೋಜನೆ ಈಗಾಗಲೇ ಚಾಲ್ತಿಯಲ್ಲಿದ್ದು, ಉತ್ತಮ ಪ್ರತಿಕ್ರಿಯೆ ದೊರೆತಿದೆ.

ಈ ಸಂದರ್ಭದಲ್ಲಿ ಚಿಕ್ಕಪೇಟೆ ಶಾಸಕ ಉದಯ್‌ ಬಿ ಗರುಡಾಚಾರ, ರಾಜ್ಯ ಮಾವು ಅಭಿವೃದ್ಧಿ ಮತ್ತು ಮಾರುಕಟ್ಟೆ ನಿಗಮದ ಅಧ್ಯಕ್ಷ ಕೆ.ವಿ. ನಾಗರಾಜು,ತೋಟಗಾರಿಕೆ ಹಾಗೂ ರೇಷ್ಮೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ರಾಜೇಂದರ್‌ ಕುಮಾರ್‌ ಕಟಾರಿಯಾ ಸೇರಿದಂತೆ ಹಲವರು ಉಪಸ್ಥಿತರಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next