Advertisement

ಪುಸ್ತಕಗಳಲ್ಲಿ ನಮ್ಮ ಸಂಸ್ಕೃತಿ-ಇತಿಹಾಸ ಇಲ್ಲ; ನಂದಕುಮಾರ

02:29 PM Mar 01, 2023 | Team Udayavani |

ಅಥಣಿ: ರಾಷ್ಟ್ರೀಯತೆ, ಸಂಸ್ಕೃತಿ ಬಿಂಬಿಸುವ ಇತಿಹಾಸ ಪರಿಚಯಿಸದೇ ದಾಸ್ಯದ ಹಾಗೂ ಆಕ್ರಮಣಕಾರರ ಇತಿಹಾಸವನ್ನೇ ನಮ್ಮ ವಿದ್ಯಾರ್ಥಿಗಳಿಗೆ ಪರಿಚಯಿಸಿದ್ದು ದುರದೃಷ್ಟಕರ ಸಂಗತಿ ಎಂದು ಪ್ರಜ್ಞಾ ಪ್ರವಾಹದ ಅಖಿಲ ಭಾರತ ಸಂಯೋಜಕ ನಂದಕುಮಾರ ಹೇಳಿದರು.

Advertisement

ಅವರು ಅಥಣಿ ಉತ್ತಿಷ್ಠ ಭಾರತ ಸಂಘಟನೆ ಸ್ಥಳೀಯ ಶ್ರೀ ಶಿವಣಗಿ ಸಾಂಸ್ಕೃತಿಕ ಭವನದಲ್ಲಿ ಸ್ವಾಧೀನತೆಯಿಂದ ಸ್ವಾತಂತ್ರ್ಯದ ಕಡೆಗೆ ವಿಷಯವಾಗಿ ಆಯೋಜಿಸಿದ್ದ ಒಂದು ದಿನದ ವಿಚಾರ ಸಂಕಿರಣಕ್ಕೆ ಚಾಲನೆ ನೀಡಿ ಮಾತನಾಡಿದರು. ಚೋಳರು ಭಾರತವನ್ನು ಸುಮಾರು 2000 ವರ್ಷಗಳ ಕಾಲ ಆಳ್ವಿಕೆ ಮಾಡಿರುವುದಾಗಲಿ ಅಥವಾ ಅನೇಕ ಶತಮಾನಗಳ ಕಾಲ ಆಡಳಿತ ನಡೆಸಿದ್ದ ಹೊಯ್ಸಳ, ವಿಜಯ ನಗರ, ಪಾಂಡ್ಯರು ಸೇರಿದಂತೆ ಅನೇಕರ ಕುರಿತು ಹಾಗೂ ನಮ್ಮ ಶಿಲ್ಪ ಕಲೆ, ವಾಸ್ತು ಸೇರಿದಂತೆ ನಮ್ಮ ಸಂಸ್ಕೃತಿ ಬಿಂಬಿಸುವ ವಿಷಯಗಳ ಉಲ್ಲೇಖ ನಮ್ಮ ಇತಿಹಾಸದ ಪುಸ್ತಕಗಳಲ್ಲಿ ಎಲ್ಲಿಯೂ ಇಲ್ಲ. ಆದರೆ ನಮ್ಮ ಮೇಲೆ ಆಕ್ರಮಣ ಮಾಡಿ ಆಡಳಿತ ನಡೆಸಿದ ಮೊಘಲರ, ಬ್ರಿಟಿಷರ ಆಡಳಿತವನ್ನು ಇತಿಹಾಸದಲ್ಲಿ ಪರಿಣಾಮಕಾರಿಯಾಗಿ ಬಿಂಬಿಸಲಾಗಿದೆ ಎಂದು ಹೇಳಿದರು.

ಆರ್‌.ಎಸ್‌.ಎಸ್‌ನ ಅಖಂಡ ಕರ್ನಾಟಕದ ಪ್ರಚಾರ ಪ್ರಮುಖ ಅರುಣಕುಮಾರ ರಾಜನೀತಿ ಮತ್ತು ರಾಷ್ಟ್ರೀಯತೆ ವಿಷಯದ ಮೇಲೆ ಮಾತನಾಡಿ, ಸ್ವಾತಂತ್ರ್ಯ ನಂತರ ಭಾರತದಲ್ಲಿ ರಾಜನೀತಿ ಬದಲಾಗಿ ರಾಜಕಾರಣವಾಗಿದೆ.

ರಾಜಕೀಯ ಅಧಿ ಕಾರಕ್ಕಾಗಿ ರಾಜಕಾರಣವನ್ನು ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ ಇದರಿಂದ ರಾಷ್ಟ್ರೀಯತೆಗೆ ಧಕ್ಕೆ ಉಂಟಾಗುತ್ತಿದೆ ಎಂದ ಅವರು, ದೇಶದಲ್ಲಿ ಮತ್ತೂಮ್ಮೆ ರಾಜಕಾರಣ ಬದಲಾಗಿ ರಾಜನೀತಿಯಾಗಲು ದೇಶದ ಜನ ಕ್ಯಾಶ್‌ ಲೆಸ್‌ ಚುನಾವಣೆ ವ್ಯವಸ್ಥೆಗೆ ಮುಂದಾಗಬೇಕು ಆಗ ಮಾತ್ರ ರಾಷ್ಟ್ರೀಯತೆ ಜಾಗೃತವಾಗುವುದು ಎಂದು ಹೇಳಿದರು.

ಪ್ರಜ್ಞಾ ಪ್ರವಾಹದ ಅಖೀಲ ಭಾರತ ಸಹ ಸಂಯೋಜಕ ರಘುನಂದನ ರಾಷ್ಟ್ರೀಯತೆ-ಭಾವ-ಭಕ್ತಿ ಮತ್ತು ಕ್ರಿಯಾರೂಪ ವಿಷಯದ ಮೇಲೆ ಮಾತನಾಡಿ, ನಮ್ಮ ದಿನ ನಿತ್ಯದ ಚಟುವಟಿಕಗಳಲ್ಲಿ ನಮ್ಮ ಪ್ರತಿಭೆಯಿಂದ ದೂರ ಉಳಿಯುತ್ತಿರುವುದು ನಮ್ಮ ಕ್ರಿಯಾ ರೂಪದಿಂದ ಹಿಂದೆ ಸರಿಯುತ್ತಿದ್ದೇವೆ. ಇದಕ್ಕಾಗಿ ನಾವು ಸೃಜನಶೀಲದೊಂದಿಗೆ ಕ್ರಿಯಾಶೀಲರಾಗಬೇಕು ಎಂದು ಕರೆ ನೀಡಿದರು.

Advertisement

ಗದಗ ಕೆ.ಎಲ್‌.ಇ ಪ್ರಾಧ್ಯಾಪಕಿ ವೀಣಾ ಶಿಕ್ಷಣ ಮತ್ತು ರಾಷ್ಟ್ರೀಯತೆ ವಿಷಯದ ಕುರಿತು ಮಾತನಾಡಿದರು. ಪ್ರತಿ ಭಾಷಣದ ನಂತರ ಸಂವಾದ ನಡೆಯಿತು. ಉತ್ತಿಷ್ಠ ಭಾರತ ಅಥಣಿ ಸಂಯೋಜಕ ಚಂದ್ರಕಾಂತ ಉಂಡೊಡಿ ನಿರೂಪಿಸಿದರು. ವಿಚಾರ ಸಂಕಿರಣವನ್ನು ಉತ್ತಿಷ್ಠ ಭಾರತ ಸಂಘಟನೆಯ ಭಾರತ ಕರ್ಪೂರಮಠ, ವಿನಾಯಕ ಆಸಂಗಿ, ಮಂಜೂಶಾ ನಾಯಿಕ, ಡಾ.ವಿನಾಯಕ ಚಿಂಚೋಳಿಮಠ, ವೈಶಾಲಿ ಕುಲಕರ್ಣಿ, ಕುಮಾರ ಗಾಣಿಗೇರ, ಸಂಜಯ ನಾಯಿಕ, ಪ್ರಮೀಳಾ ನಾಯಿಕ, ಡಾ.ಅಮೃತ ಕುಲಕರ್ಣಿ, ಡಾ.ಪ್ರತೀಕಾ ಕುಲಕರ್ಣಿ, ಮೃಣಾಲಿನಿ ದೇಶಪಾಂಡೆ, ಕುಮಾರ ಪತ್ತಾರ ಸಂಘಟಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next