Advertisement

ನಮ್ಮ ದೇಶವೇ ಜಗತ್ತಿನಲ್ಲಿ ಅತಿ ಸುಂದರ

04:10 PM Jun 17, 2019 | Suhan S |

ಪಾಂಡವಪುರ: ಪೋಲ್ಯಾಂಡ್‌, ಖಜಕಿಸ್ತಾನ, ಚೀನಾ, ರಷ್ಯಾ, ಇಂಗ್ಲೆಂಡ್‌ ಸೇರಿದಂತೆ ಸುಮಾರು 21 ರಾಷ್ಟ್ರಗಳನ್ನು ಸುತ್ತಾಡಿದೆವು. ಆದರೆ ಈ ಎಲ್ಲ ದೇಶಗಳಿಂಗಿಂತ ನಮ್ಮ ದೇಶ ಬಾರತವೇ ಸುಂದರ ವಾಗಿತ್ತು ಎಂದು ದ್ವಿಚಕ್ರ ವಾಹನದಲ್ಲಿ ವಿಶ್ವ ಪರ್ಯಟನೆ ನಡೆಸಿದ ಎಂ. ಮಂಜುನಾಥ ತಿಳಿಸಿದರು.

Advertisement

ಪಟ್ಟಣದ ಕನ್ನಡ ಸಾಹಿತ್ಯ ಪರಿಷತ್‌ ಭವನದಲ್ಲಿ ತ್ರಿಸೃಜನ ವೇದಿಕೆ ಕ್ಯಾತನಹಳ್ಳಿ ಹಾಗೂ ತಾಲೂಕು ಕನ್ನಡ ಸಾಹಿತ್ಯ ಪರಿಷತ್‌ವತಿಯಿಂದ ಆಯೋಜಿಸಿದ್ದ 76 ದಿನಗಳಲ್ಲಿ 21 ದೇಶಗಳ 23 ಸಾವಿರ ಕಿ.ಮೀ. ದ್ವಿಚಕ್ರ ವಾಹನದಲ್ಲಿ ವಿಶ್ವ ಪರ್ಯಟನೆ ನಡೆಸಿದ ಇಬ್ಬರು ಮಹಾನ್‌ ಸಾಧಕರರೊಂದಿಗೆ ಒಂದು ಸಂಜೆ ಕಾರ್ಯಕ್ರಮದಲ್ಲಿ ಬೆಂಗಳೂರಿನ ಕಿಂಗ್‌ ರಿಚರ್ಡ್‌ ಹಾಗೂ ಮಂಜುನಾಥ್‌ ಅವರು ತಮ್ಮ ಪರ್ಯಾಟನೆ ಸಂದರ್ಭದ ಅನುಭವಗಳನ್ನು ಹಂಚಿಕೊಂಡರು.

ಮಾನಸಿಕ ಸಿದ್ಧತೆ: ಈ ವೇಳೆ ಎಂ.ಮಂಜುನಾಥ್‌, ತಾವು ಏಕಾಏಕಿ ಮೋಟಾರ್‌ ಬೈಕ್‌ನಲ್ಲಿ ವಿಶ್ವ ಪರ್ಯಾಟನೆ ಮಾಡಲು ನಿರ್ಧರಿಸಲಿಲ್ಲ. ಅದಕ್ಕೆ ಪೂರ್ವಭಾವಿಯಾಗಿ ಸುಮಾರು ಎರಡು ವರ್ಷಗಳು ತಯಾರಿ ನಡೆಸಿ ಕುಟುಂಬದ ಒಪ್ಪಿಗೆ ಜತೆಗೆ ಪರ್ಯಾಟನೆ ಮಾಡಲು ಬೇಕಾದ ಮೋಟಾರ್‌ ಬೈಕ್‌ಗಳು, ಮಾರ್ಗಸೂಚಿಗಳು, ಹಣಕಾಸು ಸಿದ್ಧತೆ, ನಿತ್ಯ ಸಾಗುವ ದಾರಿ ಮತ್ತು ಅದರ ದೂರ, ಉಳಿದುಕೊಳ್ಳುವ ವ್ಯವಸ್ಥೆ, ಹಾಗೂ ನಾವು ಮಾನಸಿಕವಾಗಿ ಸಿದ್ಧತೆಯಾಗಿದ್ದೇವೆಯೇ ಎಂಬುದರ ಬಗ್ಗೆ ಆಲೋಚಿಸಿದ್ದೆವು ಎಂದರು.

ಪರಿಸರದ ರಮ್ಯತೆ: ಬೆಂಗಳೂರಿನಿಂದ ಹೊರಟ ನಾವು ದಾರಿಯುದ್ದಕ್ಕೂ ಅನೇಕ ಅನುಭವಗಳನ್ನು ಅನುಭವಿಸಿದೆವು. ಜತೆಗೆ ವಿದೇಶಗಳಲ್ಲೂ ಅನೇಕ ಸಮಸ್ಯೆಯ ಜತೆಗೆ ಸ್ವಲ್ಪ ಕಹಿ ಅನುಭವವು ಆಯಿತು. ಮೊದಲಿಗೆ ಬೆಂಗಳೂರಿನಿಂದ ಆರಂಭಿಸಿದ ಪರ್ಯಾಟನೆ ನಂತರದಲ್ಲಿ ಕಲ್ಕತ್ತಾ ಮಾರ್ಗವಾಗಿ ಭೂತಾನ್‌ ತಲುಪಿದೆವು. ಆದರೆ ಭೂತಾನ್‌ನಲ್ಲಿನ ಸುಂದರ ಪರಿಸರ ಪ್ರತಿಯೊಬ್ಬ ಪ್ರವಾಸಿಗನನ್ನು ಸೆಳೆಯುವ ತಾಣವಾಗಿದೆ. ಅಲ್ಲಿನ ಸುಂದರ ವಾತಾವರಣ ಜತೆಗೆ ಉತ್ತಮವಾದ ಗಾಳಿ ಎಲ್ಲರನ್ನು ಆಕರ್ಷಿಸುತ್ತದೆ ಎಂದರು.

ಹವಾಗುಣ ವ್ಯತ್ಯಾಸ: ಮತ್ತೂಬ್ಬ ವಿಶ್ವ ಪರ್ಯಾಟನೆಯ ಸಾಧಕ ಬೆಂಗಳೂರಿನ ಕಿಂಗ್‌ ರಿಚರ್ಡ್‌ ಮಾತನಾಡಿ, ಈ ಮೊದಲು ನಾವು ನಮ್ಮಲ್ಲಿಯೇ ಇರುವ ಕೆಲವು ರಾಜ್ಯಗಳ ಜತೆಗೆ ಗುಜರಾತ್‌, ದೆಹಲಿಯಂತಹ ರಾಜ್ಯಗಳನ್ನು ಸುತ್ತಿದೆವು. ನಂತರ ಕಾರಿನಲ್ಲಿ ಸಿಂಗಾಪೂರ್‌ಗೆ ಹೋಗಿಬಂದೆವು. ಇವೆಲ್ಲ ನಾವು ಬೈಕ್‌ನಲ್ಲಿ ದೇಶಗಳನ್ನು ಸುತ್ತಾಡಲು ಪ್ರೇರಣೆ ನೀಡದವು. ವಿಶ್ವದ ಪರ್ಯಾಟನೆಯಲ್ಲಿ ನಾವು ಒಂದೊಂದು ದೇಶಗಳ ವೈಪರೀತ್ಯ ಹವಮಾನಗಳಿಗೆ ಹೊಂದುಕೊಳ್ಳಬೇಕಾಯಿತು.

Advertisement

ಊಟ-ತಿಂಡಿ: ಇದಲ್ಲದೆ ಅಲ್ಲಿನ ಊಟ, ತಿಂಡಿ ತಿನಿಸುಗಳನ್ನು ಸೇವಿಸಬೇಕಾಯಿತು. ಆದರೆ ನನಗೆ ಅಲ್ಲಿನ ಆಹಾರದ ಬಗ್ಗೆ ಅರಿವಿತ್ತು. ನನ್ನ ಜತೆಗಾರ ಮಂಜುನಾಥ್‌ ಅವರಿಗೆ ಆಯಾಯ ದೇಶಗಳು ಆಹಾರ ಇಷ್ಟವಾಗುತ್ತಿರಲಿಲ್ಲ ಅವರು ತಮ್ಮ ಮನೆಯಿಂದ ತಯಾರಿಸಿಕೊಂಡು ಬಂದಿದ್ದ ಚಟ್ನಿಪುಡಿಯನ್ನು ಉಪಯೋಗಿಸಿಕೊಂಡು ತಮ್ಮ ಉಪಾಹಾರ ಮಾಡಿಕೊಳ್ಳುತ್ತಿದ್ದರು. ಇವೆಲ್ಲವುಗಳಿಗೆ ನಾವು ಮೊದಲೆ ನಮ್ಮ ಮೈಂಡ್‌ ಸೆಟ್ ಮಾಡಿಕೊಂಡಿದ್ದೆವು ಎಂದರು.

ಕಾರ್ಯಕ್ರಮಕ್ಕೂ ಮುನ್ನಾ ಕಿಂಗ್‌ ರಿಚರ್ಡ್‌ ಮತ್ತು ಎಂ.ಮಂಜುನಾಥ್‌ ಅವರ ವಿಶ್ವ ಪರ್ಯಾಟನೆಯ ಸಾಕ್ಷ್ಯಚಿತ್ರವನ್ನು ಪ್ರದರ್ಶಿಸಲಾಯಿತು. ಲೇಖಕಿ ಟಿ.ಸಿ.ಪೂರ್ಣಿಮ, ತ್ರಿಸೃಜನ ವೇದಿಕೆಯ ಡಾ.ಅಭಿನಯ್‌, ಅಮಿತ್‌, ನವೀನ್‌ ಸಂಗಾಪುರ, ವಕೀಲ ಮೋಹನ್‌ಕುಮಾರ್‌, ತಾಕಸಾಪ ಅಧ್ಯಕ್ಷ ಹಿರೇಮರಳಿ ಚನ್ನೇಗೌಡ, ಮಕ್ಕಳ ಸಾಹಿತ್ಯ ಪರಿಷತ್‌ ಅಧ್ಯಕ್ಷ ಹಾರೋಹಳ್ಳಿ ಧನ್ಯಕುಮಾರ್‌, ಚುಟುಕು ಕವಿ ಚಂದ್ರಶೇಖರಯ್ಯ ಹಲವರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next