Advertisement
ಬಹಳ ವಿಶೇಷವಾಗಿ ಈ ವರ್ಷದ ಈವೆಂಟ್ ನ ಹೋಸ್ಟ್ ಗಳಾದ ಗ್ಲೋಬಲ್ ಐಕಾನ್ ಪ್ರಿಯಾಂಕ ಚೋಪ್ರಾ ಹಾಗೂ ಅವರ ಪತಿ, ಸಿಂಗರ್ ನಿಕ್ ಜೋನಸ್ ದಂಪತಿಗಳು 23 ವಿಭಾಗಳಲ್ಲಿ ಅಂತಿಮ ಸುತ್ತಿಗೆ ನಾಮ ನಿರ್ದೇಶನಗೊಂಡಿರುವ ಪಟ್ಟಿಯನ್ನು ಲೈವ್ ಸ್ಟ್ರೀಮ್ ನ ಮೂಲಕ ಬಹಿರಂಗ ಪಡಿಸಿದ್ದಾರೆ.
Related Articles
Advertisement
ಅತ್ಯುತ್ತಮ ನಟ : ರಿಜ್ ಅಹ್ಮದ್- ಸೌಂಡ್ ಆಫ್ ಮೆಟಲ್ ದಿವಂಗತ ಚಾವ್ಡಿಕ್ ಬೋಸ್‌ಮನ್ – ಮಾ ರೈನೀಸ್ ಬ್ಲ್ಯಾಕ್ ಬಾಟಮ್ ಆಂಥೋನಿ ಹಾಪ್ಕಿನ್ಸ್ – ದಿ ಫಾದರ್ಗ್ಯಾರಿ ಓಲ್ಡ್ ಮನ್ – ಮಂಕ್ಸ್ಟಿವನ್ ಯೋನ್ – ಮಿನಾರಿ
ಅತ್ಯುತ್ತಮ ನಟಿ : ವಿಯೋಲಾ ಡೇವಿಸ್ – ಮಾ ರೈನೀಸ್ ಬ್ಲ್ಯಾಕ್ ಬಾಟಮ್ಆಂಡ್ಯಾ ರೇ – ಯುನೈಟೆಡ್ ಸ್ಟೇಟ್ಸ್ v/s ಬಿಲ್ಲಿ ಹಾಲಿಡೇವನ್ನೇಸ್ಸಾ ಕಿರ್ಬಿ – ಪೀಸಸ್ ಆಫ್ ವುಮನ್ಫ್ರಾನ್ಸಸ್ ಮೆಕ್ ಡೋರ್ಮಾಂಡ್ – ನೋಮಡ್‌ಲ್ಯಾಂಡ್ಕ್ಯಾರಿ ಮುಲ್ಲಿಗನ್ – ಪ್ರಾಮಿಸಿಂಗ್ ಯಂಗ್ ವುಮನ್
ಅತ್ಯುತ್ತಮ ನಿರ್ದೇಶಕ : ಥಾಮಸ್ ವಿಂಟರ್ಬರ್ಗ್ – ಅನದರ್ ರೌಂಡ್ಡೇವಿಡ್ ಫೀಂಚರ್ – ಮಂಕ್ಲೀ ಇಸಾಂಗ್ ಶಂಗ್ – ಮಿನಾರಿಶ್ಲೋ ಜಾಹೋ – ನೋಮಡ್ ಲ್ಯಾಂಡ್ ಎಮರಾಲ್ಡ್ ಫೆನ್ನೆಲ್ – ಪ್ರಾಮಿಸಿಂಗ್ ಯಂಗ್ ವುಮನ್
ಯಾವಾಗ, ಎಲ್ಲಿ ನಡೆಯಲಿದೆ ಆಸ್ಕರ್ 2021 ಸಮಾರಂಭ..?
ಮೂರು ಗಂಟೆಗಳ ಕಾಲ ನಡೆಯಲಿರುವ ಆಸ್ಕರ್ 2021 ಸಮಾರಂಭವು ಈ ಬರುವ ಏಪ್ರಿಲ್ 25 2021 ನೇ ಆದಿತ್ಯವಾರದಂದು ಕ್ಯಾಲಿಫೋರ್ನಿಯಾದ ಲಾಸ್ ಏಂಜಲೀಸ್ ನ ಡಾಲ್ಬಿ ಥೀಯೆಟರ್ ಹಾಗೂ ಯೂನಿಯನ್ ಸ್ಟೇಷನ್ ನಲ್ಲಿ ನಡೆಯಲಿದೆ. ಭಾರತೀಯ ಕಾಲಮಾನದ ಪ್ರಕಾರ ಬೆಳಗ್ಗೆ 5:30 ರಿಂದ 8:30 ರ ತನಕ ನಡಯಲಿದೆ.
ಇನ್ನು, ಈ ಬಾರಿ ಆಸ್ಕರ್ 2021 ಸಮಾರಂಭ ಕೋವಿಡ್ 19 ಸಾಂಕ್ರಾಮಿಕ ಸೊಂಕಿನ ಕಾರಣದಿಂದಾಗಿ ಕೆಲವೊಂದು ನಿರ್ಬಂಧಗಳಿಂದ ನಡೆಯಲಿದೆ. ಸಿಮಿತ ಪ್ರೇಕ್ಷಕರಿಗೆ ಮಾತ್ರ ಸಮಾರಂಭದಲ್ಲಿ ಪಾಲ್ಗೊಳ್ಳಲು ಅವಕಾಶವನ್ನು ನೀಡಲಾಗಿದೆ. ಇನ್ನು, ಈ ಸಮಾರಂಭವನ್ನು Oscar.com ಅಥವಾ ಆಸ್ಕರ್ ಮಂಡಳಿಯ ಅಧಿಕೃತ ಯೂಟ್ಯೂಬ್ ಚಾನೆಲ್ ಮೂಲಕವೂ ಕೂಡ ಪ್ರಸಾರ ಮಾಡುತ್ತಿದ್ದು, ಆ ಮೂಲಕವೂ ಕೂಡ ವೀಕ್ಷಿಸಬಹುದಾಗಿದೆ.
ಓದಿ : ಮತ್ತೆ ಸುದೀಪ್ ಜೊತೆ ಸಿನಿಮಾ ಮಾಡ್ತೀನಿ: ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್