Advertisement

ಆಸ್ಕರ್‌ ಫೆರ್ನಾಂಡಿಸ್‌ ಅವರ ವ್ಯಕ್ತಿತ್ವ ಮಾದರಿ: ಲೋಬೋ

06:02 PM Sep 26, 2021 | Team Udayavani |

ಮಲ್ಲಿಕಟ್ಟೆ: ಧೀಮಂತ ನಾಯಕ ಆಸ್ಕರ್‌ ಫೆರ್ನಾಂಡಿಸ್‌ ಅವರ ಕಾರ್ಯತತ್ಪರತೆ, ಸಾಮಾಜಿಕ ಕಳಕಳಿ, ರಾಜಕೀಯ ಜೀವನ, ಸಾಮಾಜಿಕ ಬದ್ಧತೆ ಕಾಂಗ್ರೆಸಿಗೆಲ್ಲರಿಗೂ ಮಾದರಿಯಾಗಿದೆ ಎಂದು ಮಾಜಿ ಶಾಸಕ ಜೆ.ಆರ್‌. ಲೋಬೋ ಹೇಳಿದ್ದಾರೆ.

Advertisement

ಇತ್ತೀಚೆಗೆ ನಿಧನ ಹೊಂದಿದ ಹಿರಿಯ ಕಾಂಗ್ರೆಸ್‌ ನಾಯಕ, ಕೇಂದ್ರದ ಮಾಜಿ ಸಚಿವ ಆಸ್ಕರ್‌ ಫೆರ್ನಾಂಡಿಸ್‌ ಅವರಿಗೆ ಮಂಗಳೂರು ನಗರ ಬ್ಲಾಕ್‌ ಹಾಗೂ ಮಂಗಳೂರು ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ವತಿಯಿಂದ ಮಲ್ಲಿಕಟ್ಟೆಯಲ್ಲಿರುವ ಜಿಲ್ಲಾ ಕಾಂಗ್ರೆಸ್‌ ಕಚೇರಿಯಲ್ಲಿ ರವಿವಾರ ಆಯೋಜಿಸಿದ್ದ ನುಡಿ ನಮನ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ರಾಜಕೀಯವಾಗಿ ಉನ್ನತ ಸ್ಥಾನಕ್ಕೇರಿದ್ದರೂ ಸರಳ, ಸಜ್ಜನಿಕೆ, ಸ್ನೇಹಮಯಿ ವ್ಯಕ್ತಿತ್ವವನ್ನು ಅವರು ಎಂದೂ ಬಿಟ್ಟುಕೊಟ್ಟಿರಲಿಲ್ಲ. ಭೂಸಾರಿಗೆ ಸಚಿವರಾಗಿ ರಾಜ್ಯದಲ್ಲಿ ರಾಷ್ಟ್ರೀಯ ಹೆದ್ದಾರಿಗಳ ಅಭಿವೃದ್ಧಿ, ಶಿರಾಡಿ ಘಾಟ್‌ನಲ್ಲಿ ಸುರಂಗ ಮಾರ್ಗ ಯೋಜನೆ ರೂಪುಗೊಳ್ಳಲು ಕಾರಣಕರ್ತರಾಗಿದ್ದಾರೆ. ಕುಳಾಯಿ ಮೀನುಗಾರಿಕೆ ಜೆಟ್ಟಿ ಮಂಜೂರಾತಿಯಲ್ಲೂ ಅವರ ವಿಶೇಷ ಶ್ರಮವಿದೆ ಎಂದರು. ಆಸ್ಕರ್‌ ಫೆರ್ನಾಂಡಿಸ್‌ ಅವರ ನಿಧನದಿಂದ ಜಿಲ್ಲೆ , ಕರ್ನಾಟಕ ಮಾತ್ರವಲ್ಲದೆ ದೇಶ ಓರ್ವ ಧೀಮಂತ ನಾಯಕನನ್ನು ಕಳೆದುಕೊಂಡಿದೆ ಎಂದರು.

ಇದನ್ನೂ ಓದಿ:ನಾವು ರಾಜೀನಾಮೆ ನೀಡಿ ಬಿಜೆಪಿಗೆ ಬರದಿದ್ದರೆ ಸಚಿವರಾಗುತ್ತಿರಲಿಲ್ಲ : ಬಿ.ಸಿ ಪಾಟೀಲ್

ಮಂಗಳೂರು ನಗರ ಬ್ಲಾಕ್‌ ಅಧ್ಯಕ್ಷ ಪ್ರಕಾಶ್‌ ಸಾಲ್ಯಾನ್‌, ಮಂಗಳೂರು ದಕ್ಷಿಣ ಬ್ಲಾಕ್‌ ಕಾಂಗ್ರೆಸ್‌ ಸಮಿತಿ ಅಧ್ಯಕ್ಷ ಸಲೀಂ, ಹಿಂದುಳಿದ ಘಟಕಗಳ ಜಿಲ್ಲಾಧ್ಯಕ್ಷ ವಿಶ್ವಾಸ್‌ದಾಸ್‌, ಹಿರಿಯ ಮುಖಂಡ ಪ್ರಭಾಕರ ಶ್ರೀಯಾನ್‌, ಮಾಜಿ ಮೇಯರ್‌ ಮಹಾಬಲ ಮಾರ್ಲ, ನವೀನ್‌ ಡಿ’ಸೋಜಾ, ಎ.ಸಿ.ವಿನಯರಾಜ್‌, ಹೊನ್ನಯ್ಯ ನುಡಿನಮನ ಸಲ್ಲಿಸಿದರು.

ಟಿ.ಕೆ. ಸುಧೀರ್‌, ಅಬ್ದುಲ್‌ ಲತೀಫ್‌, ಅಶ್ರಫ್‌ ಬಜಾಲ್‌, ಪ್ರವೀಣ್‌ಚಂದ್ರ ಆಳ್ವ , ಕೇಶವ ಮರೋಳಿ, ರಮಾನಂದ ಪೂಜಾರಿ, ಅಪ್ಪಿ ಉಪಸ್ಥಿತರಿದ್ದರು.

Advertisement

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next