ದೇವನಹಳ್ಳಿ: ಮುಂದಿನ ಚುನಾವಣೆಗಳಲ್ಲಿ ಬಿಜೆಪಿ ಪಕ್ಷವನ್ನು ಬೂತ್‌ಮಟ್ಟದಿಂದ ಗಟ್ಟಿಗೊಳಿಸಿ ಇಲ್ಲಿ ಶಾಸಕರನ್ನು ಗೆಲ್ಲಿಸುವುದರ ಮೂಲಕ ಬೇರೆ ಪಕ್ಷದವರಿಗೆ ಪಾಠ ಕಲಿಸುವ ಕೆಲಸ ಕಾರ್ಯಕರ್ತ ರಾದ ನೀವುಗಳೇ ಮಾಡಬೇಕು ಎಂದು ಮಾಜಿ ಶಾಸಕ ಪಿಳ್ಳಮುನಿಶಾಮಪ್ಪ ತಿಳಿಸಿದರು.
ತಾಲೂಕಿನ ವಿಶ್ವನಾಥಪುರ ಗ್ರಾಮದಲ್ಲಿ ವಿಶ್ವನಾಥಪುರ ಗ್ರಾಪಂ ವ್ಯಾಪ್ತಿಯ ಬೂತ್‌ಮಟ್ಟದ ಕಮಿಟಿ ಸಭೆ ಹಾಗೂ ಬಿಜೆಪಿ ಸೇರ್ಪಡೆ ಕಾರ್ಯಕ್ರಮದಲ್ಲಿ ಮಾತನಾಡಿ, ಕ್ಷೇತ್ರದಲ್ಲಿ ಬಿಜೆಪಿ ಶಾಸಕರಿಲ್ಲ ಎಂಬ ಭಾವನೆಯನ್ನು ಸುಳ್ಳಾಗಿಸಬೇಕು. ಮುಂದಿನ ಜಿಪಂ, ತಾಪಂ ಚುನಾವಣೆಗಳಲ್ಲಿ ಬೂತ್‌ಮಟ್ಟದಲ್ಲಿ ಸದೃಢ ಗೊಳಿಸಲು ಕಾರ್ಯಕರ್ತರು ಮುಂದಾಗಬೇಕು. ಬಿಜೆಪಿ ಸರ್ಕಾರ ನೀಡಿರುವ ಯೋಜನೆ ಜನರಿಗೆ ಮನದಟ್ಟು ಮಾಡಬೇಕು ಎಂದರು.
ಶಾಸಕರಾಗಿದ್ದಾಗ 2017 ಮತ್ತು 18ರಲ್ಲಿ ವಿಶ್ವನಾಥಪುರ ಗ್ರಾಮದ ಅಭಿವೃದ್ಧಿಗೆ 1 ಕೋಟಿ ಅನುದಾನ ನೀಡಿದ್ದೆ. ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ 150ಕ್ಕೂ ಹೆಚ್ಚು ಸ್ಥಾನ ಹೊಂದುವುದರ ಮೂಲಕ ಮತ್ತೆ ರಾಜ್ಯದಲ್ಲಿ ಬಿಜೆಪಿ ಸರ್ಕಾರ ಬರಲಿದೆ. ದೇವನಹಳ್ಳಿಯಿಂದ ಬಿಜೆಪಿ ಶಾಸಕರನ್ನು ಕಳುಹಿಸಿ ಕೊಡಬೇಕು ಎಂದರು.
ಕಾರ್ಯಕರ್ತರಿಗೆ ಉತ್ಸಾಹ ತುಂಬಿ: ಮಾಜಿ ಶಾಸಕ ಜಿ.ಚಂದ್ರಣ್ಣ ಮಾತನಾಡಿ, ಪಕ್ಷವನ್ನು ಸದೃಢಗೊಳಿಸಬೇಕು. ಪ್ರತಿ ಬೂತ್‌ಮಟ್ಟದಲ್ಲಿ ಪಕ್ಷವನ್ನು ಸಂಘಟಿಸಿ ಕಾರ್ಯಕರ್ತರಿಗೆ ಉತ್ಸಾಹ ತುಂಬಬೇಕು. ತಾವು ಶಾಸಕರಾಗಿದ್ದ ವೇಳೆಯಲ್ಲಿ ಫಾರಂ 50, 53, 57ನಲ್ಲಿ 4 ಸಾವಿರಕ್ಕೂ ಹೆಚ್ಚು ಭೂಮಿಯನ್ನು ಭೂ ಮಂಜೂರಾತಿಯಲ್ಲಿ ನೀಡಲಾಗಿತ್ತು. ಮೋದಿ ಸರ್ಕಾರ ರೈತರಿಗಾಗಿ ಪ್ರಧಾನಮಂತ್ರಿ ಕೃಷಿ ಸಮ್ಮಾನ್ ಯೋಜನೆಯಲ್ಲಿ 6 ಸಾವಿರ, ರಾಜ್ಯ ಸರ್ಕಾರ 4 ಸಾವಿರ ಒಟ್ಟು 10 ಸಾವಿರ ರೂ.ಗಳನ್ನು ರೈತರಿಗೆ ನೀಡುತ್ತಿದ್ದಾರೆ ಎಂದರು.
ಬಿಜೆಪಿ ಅಧ್ಯಕ್ಷ ಎ.ವಿ.ನಾರಾಯಣಸ್ವಾಮಿ ,ಗ್ರಾಪಂ ಉಪಾಧ್ಯಕ್ಷ ವಿನಯಕುಮಾರ್ ಮಾತನಾಡಿದರು. ತಾಲೂಕು ಬಿಜೆಪಿ ಅಧ್ಯಕ್ಷ ಸುನಿಲ್, ಜಿಲ್ಲಾ ರೈತಮೋರ್ಚಾ ಅಧ್ಯಕ್ಷ ಎಚ್.ಎಂ. ರವಿಕುಮಾರ್, ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ ಸಿ. ಅಶ್ವಥನಾರಾಯಣ್, ರಾಜ್ಯ ಬಿಜೆಪಿ ಎಸ್‌ಸಿ ಮೋರ್ಚಾ ಖಜಾಂಚಿ ನಾಗೇಶ್, ನೀಲೇರಿ ಅಂಬರೀಶ್ ಗೌಡ, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಶಿವಪ್ರಸಾದ್, ಸಂಘಟನಾ ಕಾರ್ಯದರ್ಶಿ ಕಾಂತರಾಜು, ಮುನಿ ಕೃಷ್ಣಪ್ಪ(ತಮ್ಮಯ್ಯ), ಗಣೇಶ್ ಬಾಬು, ರಾಮಕೃಷ್ಣ ಹೆಗಡೆ, ಸಾವಕನಹಳ್ಳಿ ನಾಗೇಶ್, ಪ್ರಧಾನ ಕಾರ್ಯದರ್ಶಿ ನೀಲೇರಿ ಮಂಜುನಾಥ್, ರವಿಕುಮಾರ್, ಖಜಾಂಚಿ ಚನ್ನಕೇಶವ, ನಾಗವೇಣಿ, ಕಾರ್ಯದರ್ಶಿ ಗಾಯಿತ್ರಿ ರವಿಚಂದ್ರ, ಮುಖಂಡ ರವಿಚಂದ್ರ, ಗುರು ಪ್ರಸಾದ್, ನಾರಾಯಣಪ್ಪ, ವೈ.ಕೆ.ಚಂದ್ರಶೇಖರ್, ದೇಸು ನಾಗರಾಜ್, ಸುರೇಶ್ ಆಚಾರ್, ಅನಿಲ್ ಯಾದವ್, ಸುರೇಶ್, ಮಂಜುನಾಥ್, ಬೈರದೇನಹಳ್ಳಿ ರವಿ, ಶಾನಪ್ಪನಹಳ್ಳಿ ರವಿಕುಮಾರ್ ಇದ್ದರು.