Advertisement
ವಿಶ್ವ ಕಾರ್ಮಿಕ ಸಂಘಟನೆಗಳ ಒಕ್ಕೂಟಕ್ಕೆ ಸಂಯೋಜಿತವಾಗಿರುವ ಪಿಂಚಣಿದಾರರ, ನಿವೃತ್ತರ ಅಂತಾರಾಷ್ಟ್ರೀಯ ಕಾರ್ಮಿಕ ಸಂಘಟನೆ ಶೋಷಣೆ ವಿರುದ್ಧ ಹೋರಾಡುತ್ತಿರುವ ಜನತೆಗೆ ಸೌಹಾರ್ದ ಸೂಚಿಸಲು ಮತ್ತು ಹಿರಿಯ ನಾಗರಿಕರಿಗೆ ಘನತೆ ಬದುಕಿನಜವಾಬ್ದಾರಿಯನ್ನುಸಮಾಜನಿರ್ವಹಿಸಲು ಒತ್ತಾಯಿಸಿದರು.
Related Articles
Advertisement
ಸಮನ್ವಯ ಸಮಿತಿ ಸಂಚಾಲಕ ಲ.ಜಗನ್ನಾಥ್, ಸಮಿತಿ ಸದಸ್ಯರಾದ ಜಿ.ಜಯರಾಂ, ವಿಜಯ ಕುಮಾರ್ ಎನ್, ಜಿ.ರಾಜೇಂದ್ರ ಮತ್ತಿತರರಿದ್ದರು.
ಅಂಬೇಡ್ಕರ್ ಭವನ ಪೂರ್ಣಗೊಳಿಸಿ :
ಮೈಸೂರು: ನಗರದ ಡಾ.ಬಿ.ಆರ್.ಅಂಬೇಡ್ಕರ್ ಭವನದ ಕಾಮಗಾರಿ ಪೂರ್ಣಗೊಳಿಸುವಂತೆ ಒತ್ತಾಯಿಸಿ ಜೈ ಭೀಮ್ ದಲಿತ ಆದಿ ದ್ರಾವಿಡ ಯುವಕರ ಅಭಿವೃದ್ಧಿ ಸಂಘದಿಂದ ಅಂಬೇಡ್ಕರ್ ಭವನದ ಬಳಿ ಪ್ರತಿಭಟನೆ ನಡೆಯಿತು.
ನಗರದ ರೋಟರಿ ಶಾಲೆ ರಸ್ತೆಯಲ್ಲಿರುವ ನಲ್ಲಪ್ಪ ಸಂಚಾರ ಠಾಣೆ ಪಕ್ಕದಲ್ಲಿ ನಿರ್ಮಾಣ ಹಂತದ ಡಾ.ಬಿ.ಆರ್.ಅಂಬೇಡ್ಕರ್ ಭವನ ಸುಮಾರು 10 ವರ್ಷಗಳಮೊದಲೇಪೂರ್ಣಗೊಳ್ಳಬೇಕಾಗಿತ್ತು. ಸರ್ಕಾರಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ಇನ್ನೂ ಪೂರ್ಣಗೊಳ್ಳದೇ
ನಿಂತಿದೆ. ಇದು ಸಂವಿಧಾನಶಿಲ್ಪಿ ಡಾ.ಬಿ.ಆರ್. ಅಂಬೇಡ್ಕರ್‌ಗೆ ಮಾಡುತ್ತಿ ರುವ ಅವಮಾನ ಎಂದು ಆರೋಪಿಸಿದರು. ತಕ್ಷಣ ಈ ಭವನವನ್ನು ಪೂರ್ಣಗೊಳಿಸಿ ಅಗತ್ಯ ಕ್ರಮಗಳಿಗೆ ಉಪಯೋಗಿಸಲು ಯೋಗ್ಯವಾಗುವಂತೆ ಸೂಕ್ತ ನಿರ್ವಹಣೆಯೊಂದಿಗೆ ಅಂಬೇಡ್ಕರ್ ಅವರ 130ನೇ ಜನ್ಮದಿನದ ಒಳಗಾಗಿ ಲೋಕಾರ್ಪಣೆ ಮಾಡಬೇಕೆಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು. ಸಂಘಟನೆ ಸಲಹೆ ಗಾರ ಹರೀಶ್, ಅಧ್ಯಕ್ಷ ಪ್ರವೀಣ್ ಕುಮಾರ್ ಎಸ್. ಆರ್, ಉಪಾಧ್ಯಕ್ಷ ಕುಮಾರ್ ಎಸ್, ವರದರಾಜು ಕೆ, ರವಿ ಶಂಕರ್, ಗಜೇಂದ್ರ, ಮಣಿ ಎಂ, ಅರುಣ್ ಜಿ.ಎಂ ಇದ್ದರು.