Advertisement

ಸುವರ್ಣಸೌಧಕ್ಕೆ ಶೀಘ್ರ ಕಚೇರಿ: ಮಹೇಶ

04:12 PM Jul 04, 2022 | Team Udayavani |

ಬೆಳಗಾವಿ: ಉತ್ತರ ಕರ್ನಾಟಕದ ಸಮಗ್ರ ಅಭಿವೃದ್ಧಿಗೆ ಬಿಜೆಪಿ ಸರ್ಕಾರ ಬದ್ಧವಾಗಿದ್ದು ಯಾವುದೆ ಅಹಿತಕರ ಘಟನೆಗಳಿಗೆ ರಾಜ್ಯದಲ್ಲಿ ಅವಕಾಶವಿಲ್ಲ. ಬರುವ ದಿನಗಳಲ್ಲಿ ಸರಕಾರದ ಹಲವಾರು ಮುಖ್ಯ ಕಚೇರಿಗಳು ಸುವರ್ಣವಿಧಾನಸೌಧಕ್ಕೆ ಬರಲಿದ್ದು ಈ ಭಾಗದ ಅಭಿವೃದ್ಧಿಗೆ ಒತ್ತು ನೀಡಲಾಗುವುದು ಎಂದು ರಾಜ್ಯ ಬಿಜೆಪಿ ಮುಖ್ಯ ವಕ್ತಾರ ಎಮ್‌.ಜಿ. ಮಹೇಶ ಹೇಳಿದರು.

Advertisement

ನಗರದ ಗ್ರಾಮಾಂತರ ಜಿಲ್ಲಾ ಬಿಜೆಪಿ ಕಚೇರಿಯಲ್ಲಿ ನಡೆದ ಜಿಲ್ಲೆಯ ಬಿಜೆಪಿ ಮಾಧ್ಯಮ ಸದಸ್ಯರ ಸಂಘಟನಾ ಸಭೆಯಲ್ಲಿ ಮಾತನಾಡಿದ ಅವರು, ಈ ಬಗ್ಗೆ ಯಾವುದೇ ಗೊಂದಲಗಳಿಗೆ ಯಾರೂ ಅವಕಾಶ ನೀಡಬಾರದು. ಪಕ್ಷದ ಮಾಧ್ಯಮ ಸದಸ್ಯರು ಬರುವ ದಿನಗಳಲ್ಲಿ ಇನ್ನಷ್ಟು ಕಾರ್ಯ ಚಟುವಟಿಕೆ ಮಾಡಬೇಕು ಎಂದರು.

ರಾಜ್ಯದ ಬಿಜೆಪಿಯಲ್ಲಿ ಎಲ್ಲಾ ವಿಭಾಗದಲ್ಲಿ ಮಾಧ್ಯಮ ಅತ್ಯಂತ ಪ್ರಬಲವಾಗಿದ್ದು ಪಕ್ಷದ ಬೆಳವಣಿಗೆಯಲ್ಲಿ ಮಾಧ್ಯಮ ಪ್ರಮುಖ ಪಾತ್ರವಹಿಸಿದೆ ಎಂದ ಅವರು, ಪ್ರಪಂಚದಲ್ಲಿ ಬಿಜೆಪಿ ಅತ್ಯಂತ ದೊಡ್ಡದಾದ ಬಲಿಷ್ಠ ರಾಜಕೀಯ ಪಕ್ಷವಾಗಿದ್ದು 19 ರಾಜ್ಯಗಳಲ್ಲಿ ಹಾಗೂ ಕೇಂದ್ರದಲ್ಲಿ ಸುಸ್ಥಿರ ಸರ್ಕಾರ ನೀಡಿದ ಹೆಗ್ಗಳಿಕೆಗೆ ಪಾತ್ರವಾಗಿದೆ ಎಂದರು.

ಭಾವಿಗೆ ಜಲವೆ ಸಾಕ್ಷಿ. ಬಿಜೆಪಿ ಕಾರ್ಯ ಪದ್ಧತಿಗೆ ಜನರೇ ಸಾಕ್ಷಿ ಎನ್ನುವಂತೆ ಅಭೂತಪೂರ್ವ ಬೆಂಬಲ ನೀಡುತ್ತಿರುವ ಮತದಾರರಿಗೆ ಸರ್ಕಾರದ ಸಾಧನೆಗಳು, ಯೋಜನೆಗಳು ಹಾಗೂ ಬಿಜೆಪಿಯ ಸದ್ವಿಚಾರಗಳನ್ನು ಬಿತ್ತರಿಸುವ ಕಾರ್ಯವು ಎಲ್ಲ ಮಾಧ್ಯಮಗಳ ಸಹಕಾರದಿಂದ ಅವ್ಯಾಹತವಾಗಿ ನಡೆಯುತ್ತಿರುವುದು ಸಂತಸದ ವಿಷಯವಾಗಿದೆ ಎಂದು ಹೇಳಿದರು.

ರಾಜ್ಯ ಬಿಜೆಪಿ ಮಾಧ್ಯಮ ಸಂಚಾಲಕ ಕರುಣಾಕರ ಖಾಸಲೆ ಮಾತನಾಡಿ, ಪ್ರತಿ ಜಿಲ್ಲೆಗೆ ಮಾಧ್ಯಮ ಸಂಚಾಲಕರು ಮತ್ತು ಸಹಸಂಚಾಲಕರಿದ್ದು ಮಂಡಲ ಸ್ತರಕ್ಕೆ ಮಾಧ್ಯಮ ಸದಸ್ಯ ಹಾಗೂ ಸಹ ಸದಸ್ಯರನ್ನು ನೇಮಕ ಮಾಡಿದೆ. ಬಿಜೆಪಿಗೆ ಸಂಬಂಧಿಸಿದ ವಿಷಯವನ್ನು ಮಾಧ್ಯಮಗಳಿಗೆ ನೀಡುವುದು, ಪಕ್ಷದ ಮುಖ್ಯವಾಹಿನಿಯ ಪ್ರತಿರೂಪವಾಗಿ ಜಿಲ್ಲಾ ವಕ್ತಾರರು ಇರುವುದರಿಂದ ಅವರ ಪ್ರತಿ ಹೇಳಿಕೆಗಳು ಪಕ್ಷದ ನಿಲುವಾಗಿರುತ್ತವೆ. ಹೀಗಾಗಿ ಹೇಳಿಕೆ ನೀಡುವಾಗ ಬಹಳ ಎಚ್ಚರದಿಂದ ಹಾಗೂ ವಿಷಯದ ಆಳವನ್ನರಿತು ನೀಡುವುದಾಗಬೇಕು ಎಂದರು.

Advertisement

ಬೆಳಗಾವಿ ವಿಭಾಗದ ಮಾಧ್ಯಮ ಪ್ರಭಾರಿ ಹಾಗೂ ರಾಜ್ಯ ಮಾಧ್ಯಮ ಸದಸ್ಯ ಸಿದ್ದು ಮೊಗಲಿಶೆಟ್ಟರ ಮಾತನಾಡಿ, ರಾಜ್ಯದಲ್ಲಿ ಅತ್ಯಂತ ಸಕ್ರಿಯವಾದ ತಂಡ ಬೆಳಗಾವಿ ಜಿಲ್ಲೆಯಲ್ಲಿದ್ದು ಅನೇಕ ಚುನಾವಣಾ ಗೆಲುವಿನಲ್ಲಿ ಈ ಮಾಧ್ಯಮ ವಿಭಾಗ ಪ್ರಮುಖ ಪಾತ್ರವಹಿಸಿದೆ. ಜನಸಾಮಾನ್ಯರಿಗೆ ಬಿಜೆಪಿ ಸರ್ಕಾರದ ಅನೇಕ ಯೋಜನೆಯ ವಿಷಯ ಮುಟ್ಟಿಸುವ ಮೂಲಕ ಜನಪರ ಕಾರ್ಯಗಳನ್ನು ಮಾಡುತ್ತಿರುವುದು ಶ್ಲಾಘನೀಯ ಎಂದು ಹೇಳಿದರು.

ಬೆಳಗಾವಿ ಗ್ರಾಮಾಂತರ ಜಿಲ್ಲಾ ಮಾಧ್ಯಮ ಸಂಚಾಲಕ ಎಫ್‌.ಎಸ್‌.ಸಿದ್ದನಗೌಡರ ಜಿಲ್ಲೆಯ ವರದಿ ನೀಡಿದರು. ಮಹಾನಗರ ಜಿಲ್ಲೆಯ ಸಂಚಾಲಕ ಶರದ್‌ ಪಾಟೀಲ ಮಾತನಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾ ವಕ್ತಾರರಾದ ಸಂಜಯ ಕಂಚಿ, ಪ್ರಭು ಹೂಗಾರ, ಪ್ರಧಾನ ಕಾರ್ಯದರ್ಶಿಗಳಾದ ಸುಭಾಷ ಪಾಟೀಲ, ಸಂದೀಪ್‌ ದೇಶಪಾಂಡೆ, ಜಿಲ್ಲಾ ಮಾಧ್ಯಮ ಪ್ರಭಾರಿ ಮಲ್ಲಿಕಾರ್ಜುನ ಮಾದಮ್ಮನವರ, ಜಿಲ್ಲಾ ಮೋರ್ಚಾಗಳ ಅಧ್ಯಕ್ಷರಾದ ಯಲ್ಲೇಶ್‌ ಕೊಲಕಾರ, ಉಮೇಶ್‌ ಪೂರಿ ಉಪಸ್ಥಿತರಿದ್ದರು. ಶಶಿ ಬಾಡಕರ ಸ್ವಾಗತಿಸಿದರು, ಪ್ರವೀಣ ಕೊಪ್ಪದ ವಂದಿಸಿದರು

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next