Advertisement

ಸಮುದಾಯ ಅಭಿವೃದ್ಧಿಗೆ ಸಂಘಟನೆ ಅನಿವಾರ್ಯ

05:34 PM Jul 13, 2018 | |

ಬಾಳೆಹೊನ್ನೂರು: ಸಮುದಾಯದ ಅಭಿವೃದ್ಧಿಗೆ ಸಂಘಟನೆ ಅನಿವಾರ್ಯ ಎಂದು ಜಿ.ಪಂ. ಅಧ್ಯಕ್ಷೆ ಸುಜಾತಾ ಕೃಷ್ಣಪ್ಪ ತಿಳಿಸಿದರು. 

Advertisement

ಮಾರಿಗುಡಿ ರಸ್ತೆಯ ಪಕ್ಕದ ಟೈಲರ್ ಭವನದಲ್ಲಿ ಅಖೀಲ ಭಾರತ ಮುಂಡಾಲ ಸಮಾಜದ ಜಿಲ್ಲಾ ಸಮಿತಿ ವತಿಯಿಂದ ಬುಧವಾರ ಸಂಜೆ ಆಯೋಜಿಸಿದ್ದ ಸನ್ಮಾನ ಸಮಾರಂಭದಲ್ಲಿ ಸನ್ಮಾನ ಸ್ವೀಕರಿಸಿ ಮಾತನಾಡಿದರು. ಮುಂಡಾಲ ಸಮಾಜದವರು ಶಿಕ್ಷಣಕ್ಕೆ ಹೆಚ್ಚು ಒತ್ತು ನೀಡಿ ಉನ್ನತ ಸ್ಥಾನ ಪಡೆಯಬೇಕು. 

 ಒಗ್ಗಟ್ಟಿನಿಂದ ಸಮುದಾಯದ ಕಾರ್ಯನಿರ್ವಹಣೆ ಮಾಡಿದರೆ ಮಾತ್ರ ಸಮಾಜದಲ್ಲಿ ಉನ್ನತ ಸ್ಥಾನ ಪಡೆಯಲು ಸಾಧ್ಯ. ಸಮುದಾಯದಲ್ಲಿ ಅತ್ಯಂತ ಕೆಳಸ್ಥಾನದಲ್ಲಿದ್ದ ನಾನು ಇಂದು ಜಿ.ಪಂ ಅಧ್ಯಕ್ಷ ಹುದ್ದೆಗೆ ಏರಲು ಸಮಾಜವೇ ಕಾರಣ ಎಂದು ಅಭಿಪ್ರಾಯಪಟ್ಟರು. 

ಸಮಾಜದ ವತಿಯಿಂದ ಪ್ರೀತಿ ಪೂರ್ವಕವಾಗಿ ಗೌರವಿಸಿದ ಕ್ಷಣ ಅವಿಸ್ಮರಣೀಯವಾಗಿದೆ. ಭಿನ್ನಮತವನ್ನು ಬೆಳಸದೆ ಸಮಾಜವನ್ನು ಮುನ್ನಡೆಸಬೇಕು. ನಾನು ಸ್ವತಃ ಟೈಲರ್‌ ವೃತ್ತಿ, ಬಿಸಿಯೂಟ ಕಾರ್ಯಕರ್ತೆಯಾಗಿ ಕಾರ್ಯನಿರ್ವಹಿಸಿ ಇಂದು ಉನ್ನತ ಸ್ಥಾನಕ್ಕೆ ಏರಿದ್ದೇನೆ. ರಾಜೀವ ಗಾಂಧಿ  ಚೈತನ್ಯ ಯೋಜನೆಯಲ್ಲಿ ಯುವಕರಿಗೆ ಸ್ವ ಉದ್ಯೋಗ ಕೈಗೊಳ್ಳುವ ಅವಕಾಶಗಳಿವೆ. ವಾರ್ಡ್‌ ಹಾಗೂ ಗ್ರಾಮ ಸಭೆಯಲ್ಲಿ ಭಾಗವಹಿಸಿ ಸರ್ಕಾರದಿಂದ ಬರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

ಜಿಲ್ಲಾ ಸಮಿತಿ ಅಧ್ಯಕ್ಷ ಜೆ.ಸಿ. ಲಕ್ಷ್ಮಣ ಮಾತನಾಡಿ, ಜಿ.ಪಂ ಅಧ್ಯಕ್ಷರು ಜಿಲ್ಲೆಯ ಅಭಿವೃದ್ಧಿಗೆ ಪ್ರಾಮಾಣಿಕ ಪ್ರಯತ್ನ
ಮಾಡುವುದರೊಂದಿಗೆ ಮುಂಡಾಲ ಸಮಾಜದ ಅಭಿವೃದ್ಧಿಗೂ ಮುಂದಾಗಬೇಕು ಎಂದು ತಿಳಿಸಿದರು.

Advertisement

ಜಿಲ್ಲಾ ಸಮಿತಿ ಸದಸ್ಯ ಜಾನ್ನವ ಮಾತನಾಡಿ, ಜೀವನಕ್ಕಾಗಿ ದಕ್ಷಿಣ ಕನ್ನಡದಿಂದ ಬಂದವರು ತಲೆತಲಾಂತರದಿಂದ ಇಲ್ಲೇ ವಾಸ ಮಾಡುತ್ತಿದ್ದಾರೆ. ಇಂದಿಗೂ ಕಾಫಿ ತೋಟಗಳಲ್ಲಿ ಜೀತದಾಳುಗಳಂತೆ ಕೆಲಸ ಮಾಡುತ್ತಿದ್ದಾರೆ. ಅವರಿಗೆ ಸ್ವಂತ ನಿವೇಶನ ಇಲ್ಲ. ದಯಮಾಡಿ ನಿವೇಶನ ರಹಿತರಿಗೆ ನಿವೇಶನ ಹಾಗೂ ಅನುದಾನ ಕೊಡಿಸಬೇಕು ಹಾಗೂ ಸಮಾಜದ ಸಮುದಾಯ ಭವನ ನಿರ್ಮಾಣಕ್ಕೂ ಸಹಕರಿಸಬೇಕೆಂದು ಮನವಿ ಸಲ್ಲಿಸಿದರು.

ಟೈಲರ್‌ ಅಸೋಸಿಯೇಶನ್‌ ಅಧ್ಯಕ್ಷ ಮಹಮ್ಮದ್‌ ಶಫಿಖಾನ್‌, ಟೈಲರ್‌ ಸಂಘದ ಸ್ಥಾಪಕ ಅಧ್ಯಕ್ಷ ಲಕ್ಷ್ಮಣ, ಉಪಾಧ್ಯಕ್ಷೆ ಲಕ್ಷ್ಮಿ, ರಾಜಕುಮಾರ್‌, ಸುಧಾಕರ್‌ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next