Advertisement

ಅಂಗಾಂಗ ದಾನ ಜಾಗೃತಿ: ಪ್ರಮೋದ್‌ಗೆ ಸನ್ಮಾನ

07:59 AM Jan 10, 2019 | |

ಬೆಂಗಳೂರು/ಕೆಂಗೇರಿ: ಅಂಗಾಂಗ ದಾನದ ಬಗ್ಗೆ ಜಾಗೃತಿ ಮೂಡಿಸುವ ನಿಟ್ಟಿನಲ್ಲಿ 18 ರಾಜ್ಯಗಳಲ್ಲಿ ಬೈಕ್‌ ಪ್ರವಾಸ ಕೈಗೊಂಡಿರುವ ಮಹಾರಾಷ್ಟ್ರ ಮೂಲದ ರೈತ, ಪ್ರಮೋದ್‌ ಲಕ್ಷ್ಮಣ್‌ ಮಹಾಜನ್‌ ಅವರು ಬುಧವಾರ ನಗರಕ್ಕೆ ಆಗಮಿಸಿದ್ದು, ಬಿಜಿಎಸ್‌ ಗ್ಲೋಬಲ್‌ ಆಸ್ಪತ್ರೆ ವತಿಯಿಂದ ಸನ್ಮಾನಿಸಲಾಯಿತು.

Advertisement

ಜೀವ‌ ಸಾರ್ಥಕತೆ ಟ್ರಸ್ಟ್‌ ಸಹಯೋಗದಲ್ಲಿ ಪ್ರಮೋದ್‌ ಲಕ್ಷ್ಮಣ ಮಹಾಜನ್‌ ಅವರನ್ನು ಬಿಡದಿ ಬಳಿಯೇ ಬೆಂಗಳೂರಿಗೆ ಸ್ವಾಗತಿಸಿ, ನಂತರ ಆಸ್ಪತ್ರೆಗೆ ಕರೆದೊಯ್ದು ಗೌರವಿಸಲಾಯಿತು. ಸನ್ಮಾನ ಸ್ವೀಕರಿಸಿ ಮಾತನಾಡಿದ ಪ್ರಮೋದ್‌, ಅಂಗಾಂಗ ದಾನದ ಬಗ್ಗೆ ಜನರಿಗೆ ಅರಿವಿನ ಕೊರತೆ ಮತ್ತು ತಪ್ಪು ಕಲ್ಪನೆ ಇದೆ. ಇದರಿಂದಾಗಿ ಅಂಗಾಂಗ ಕೊರತೆಯಿಂದ ದೇಶದಲ್ಲಿ ಸಾಕಷ್ಟು ಜನ ಮರಣ ಹೊಂದುತ್ತಿದ್ದಾರೆ. ಈ ಕುರಿತು ಜಾಗೃತಿ ಮೂಡಿಸಲು ಅಭಿಯಾನ ಕೈಗೊಂಡಿದ್ದೇನೆ. ನಾನು ಕೂಡ ಮೂತ್ರಪಿಂಡ ದಾನ ನೀಡಿದ್ದೇನೆ. ಆದರೂ ಆರೋಗ್ಯವಾಗೇ ಇದ್ದೇನೆ ಎಂದರು.

ಜೀವ ಸಾರ್ಥಕತೆ ಟ್ರಸ್ಟ್‌ ಸಂಚಾಲಕ ಡಾ.ಕಿಶೋರ್‌ ಫ‌ಡ್ಕೆ ಅವರು ಮಾತನಾಡಿ, ಭಾರತದಲ್ಲಿ ಅಂಗಾಂಗ ದಾನ ಮಾಡುವ ವಿಚಾರದಲ್ಲಿ ತೀವ್ರ ಹಿನ್ನಡೆ ಉಂಟಾಗುತ್ತಿದೆ. ಅಂಗಗಳು ಸಿಗದಿರುವ ಕಾರಣದಿಂದ ಭಾರತದಲ್ಲಿ ಪ್ರತಿ ವರ್ಷ 5 ಲಕ್ಷ ಜನರು ಸಾವಿಗೀಡಾಗುತ್ತಿದ್ದಾರೆ. ಮೂಢನಂಬಿಕೆಯಿಂದ ಜನ ಹೊರಬರಬೇಕು. ಈ ಕುರಿತು ಜನರಲ್ಲಿ ಮಾಹಿತಿ ನೀಡಿ, ಸ್ಫೂರ್ತಿ ತುಂಬುತ್ತಿರುವ ಪ್ರಮೋದ್‌ ಅವರ ಬದ್ಧತೆ ಶ್ಲಾಘನೀಯ ಎಂದರು. ಬಿಜಿಎಸ್‌ ಗ್ಲೆನಿಗಲ್ಸ್‌ ಗ್ಲೋಬಲ್‌ ಹಾಸ್ಪಿಟಲ್ಸ್‌ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಶೈಲಜಾ ಸುರೇಶ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next