Advertisement

ಕನ್ನಡ ಅಭಿವೃದ್ಧಿಗೆ ಹೊರಡಿಸಿ ಅಧ್ಯಾದೇಶ

12:23 AM Jan 08, 2023 | Team Udayavani |

ಹಾವೇರಿ: ಈ ಬಾರಿಯ ವಿಧಾನಮಂಡಲ ಚಳಿಗಾಲದ ಅಧಿವೇಶನದಲ್ಲಿಯೇ ಸರಕಾರ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ಮಸೂದೆ ಮಂಡಿಸಿ ಕಾನೂನು ರೂಪಿಸಬೇಕಿತ್ತು. ಆದರೆ, ಸದನದಲ್ಲಿ ಈ ವಿಧೇಯಕ ಮಂಡನೆ ಯಾಗಿಲ್ಲ. ಸರಕಾರ ತಡ ಮಾಡದೆ ಅಧ್ಯಾದೇಶ ಮೂಲಕ ಮಸೂದೆ ಜಾರಿಗೆ ಮುಂದಾಗಬೇಕು ಎಂದು ಹಿರಿಯ ನ್ಯಾಯವಾದಿ ಅಶೋಕ್‌ ಹಾರನಹಳ್ಳಿ ಒತ್ತಾಯಿಸಿದರು.

Advertisement

86ನೇ ಸಾಹಿತ್ಯ ಸಮ್ಮೇಳನದ ಪಾಪು -ಚಂಪಾ ವೇದಿಕೆಯಲ್ಲಿ ಶನಿವಾರ ನಡೆದ “ಕನ್ನಡಪರ ಮತ್ತು ಪ್ರಗತಿಪರ ವರದಿಗಳ ಅನುಷ್ಠಾನ’ ಗೋಷ್ಠಿಯಲ್ಲಿ ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ಮಸೂದೆಯ ಕಾನೂನು ಚಿಂತನೆ ವಿಷಯದ ಕುರಿತು ಅವರು ಮಾತನಾಡಿದರು.

ರಾಜ್ಯ ಸರಕಾರ 1963ರಲ್ಲಿ ರಾಜ್ಯ ಭಾಷಾ ಅಧಿನಿಯಮ ಜಾರಿಗೆ ತಂದಿದೆ. ಗೋಕಾಕ್‌, ಸರೋಜಿನಿ ಮಹಿಷಿ, ನರ ಸಿಂಹಯ್ಯ, ರಾಜಾ ರಾಮಣ್ಣ, ವಿ.ಎಸ್‌.ಆಚಾರ್ಯ ಸೇರಿದಂತೆ ಅನೇಕ ಮಹನಿಯರು ಕನ್ನಡ ಭಾಷೆಯ ಪರ ವರದಿಗಳನ್ನು ನೀಡಿದ್ದಾರೆ. ಆದರೆ ಯಾವುದೂ ಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಂಡಿಲ್ಲ. ಹೀಗಾಗಿ ಈ ಅ ಧಿನಿಯಮಕ್ಕೆ ಬದಲಾವಣೆ ತರುವುದು ಅಗತ್ಯವಾಗಿದೆ. ಸಿಎಂ ಬಸವರಾಜ ಬೊಮ್ಮಾಯಿ ಅವರು ಈ ಮಸೂದೆಯ ಜಾರಿ ಕುರಿತು ಹೆಚ್ಚಿನ ಒಲವು ಹೊಂದಿದ್ದಾರೆ ಎಂದರು.

ಸಮಗ್ರ ಕನ್ನಡ ಭಾಷಾ ಅಭಿವೃದ್ಧಿ ಮಸೂದೆಯಲ್ಲಿ ರಾಜ್ಯ ಭಾಷಾ ಆಯೋಗದ ರಚನೆ, ರಾಜ್ಯ ಭಾಷಾ ಸಮಿತಿ, ಜಿಲ್ಲಾ ಹಾಗೂ ತಾಲೂಕು ಮಟ್ಟದ ಸಮಿತಿಗಳ ರಚನೆ ಕುರಿತು ಪ್ರಸ್ತಾವಿಸಲಾಗಿದೆ. ಈ ಸಮಿತಿಗಳಿಗೆ ಕನ್ನಡ ಸಾಹಿತ್ಯ ಪರಿಷತ್‌ನ ರಾಜ್ಯ, ಜಿಲ್ಲೆ ಹಾಗೂ ತಾಲೂಕುಗಳ ಅಧ್ಯಕ್ಷರನ್ನು ನೇಮಿಸಿಕೊಳ್ಳುವಂತೆ ಸರಕಾರಕ್ಕೆ ಸಲಹೆ ನೀಡಿದ್ದೇನೆ ಎಂದರು.

ಬೃಹತ್‌ ಬೆಂಗಳೂರು ಮಹಾನಗರ ಪಾಲಿಕೆ ಉಪ ಆಯುಕ್ತ ಡಾ| ಕೆ. ಮುರ ಳೀಧರ ಮಾತನಾಡಿ, ಶಿಕ್ಷಣ ಸಮವರ್ತಿ ಪಟ್ಟಿಯಲ್ಲಿರುವ ಕಾರಣ ರಾಜ್ಯ ಸರಕಾರ ಪ್ರಾಥಮಿಕ ಹಂತದಲ್ಲಿ ಕನ್ನಡ ಭಾಷೆ ಯನ್ನು ಕಡ್ಡಾಯಗೊಳಿಸಲು ಸಾಧ್ಯವಾ ಗು ತ್ತಿಲ್ಲ. ಇಂದು ಶೇ.70ರಷ್ಟು ಖಾಸಗಿ ಶಾಲೆಗಳು ಕಾರ್ಯನಿರ್ವಹಿಸುತ್ತಿವೆ. ಶೇ.30ರಷ್ಟು ಮಾತ್ರ ಸರಕಾರಿ ಶಾಲೆಗಳು ಉಳಿದಿವೆ. ಈ ಸಂದರ್ಭದಲ್ಲಿ ಸರಕಾರ ವಿಭಿನ್ನ ರೀತಿಯ ಕಾನೂನುಗಳನ್ನು ಜಾರಿಗೆ ತರಬೇಕಾದ ಪರಿಸ್ಥಿತಿಯಿದೆ ಎಂದರು.

Advertisement

ಕಚೇರಿಗಳಲ್ಲಿ ಕನ್ನಡ ಬಳಕೆಗೆ ಆದ್ಯತೆ ನೀಡಲಾಗಿದೆ. ಆದರೆ, ರಾಜ್ಯ ಹೈಕೋರ್ಟ್‌ ನಲ್ಲಿ ಕನ್ನಡ ಭಾಷೆ ಬಳಕೆಯಾಗುವುದಿಲ್ಲ. ಇದರಿಂದ ಕನ್ನಡರಿಗೆ ತೊಂದರೆಯಾಗಿದೆ. ರಾಜ್ಯ ಸರಕಾರ ರೂಪಿಸುವ ನೀತಿ -ನಿಯಮಗಳಲ್ಲಿ ಕನ್ನಡ ಕುರಿತ, ಕನ್ನಡ ಕೇಂದ್ರಿತ ಚಿಂತನೆ ಇರಬೇಕು ಎಂದರು. ಡಾ| ವೀರಣ್ಣ ರಾಜೂರು ಗೋಷ್ಠಿ ಅಧ್ಯಕ್ಷತೆ ವಹಿಸಿದ್ದರು.

ಸೋಮಶೇಖರ್‌ ಜಮಶೆಟ್ಟಿ ಸ್ವಾಗತಿ ಸಿದರು. ಮಲ್ಲಿಕಾರ್ಜುನ ಶಾಂತಗಿರಿ ನಿರೂಪಿಸಿದರು. ಬಸವರೆಡ್ಡಿ ಪಾಟೀಲ್‌ ವಂದಿಸಿದರು. ಗೊರಳ್ಳಿ ಜಗದೀಶ್‌ ನಿರ್ವಹಿಸಿದರು.

ಸಾಮಾಜಿಕ ಬದಲಾವಣೆ: ಹೆಗ್ಡೆ
ಎಲ್‌.ಜಿ. ಹಾವನೂರು ವರದಿಯ ಸಂಪೂರ್ಣ ಅನುಷ್ಠಾನದಿಂದಾಗಿ ರಾಜ್ಯದಲ್ಲಿ ಸಾಮಾಜಿಕ ಬದಲಾವಣೆ ಉಂಟಾಗಿದೆ ಎಂದು ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಅಧ್ಯಕ್ಷ ಕೆ.ಜಯಪ್ರಕಾಶ್‌ ಹೆಗ್ಡೆ ಹೇಳಿದರು.

ಎಲ್‌.ಜಿ.ಹಾವನೂರು ನೇತೃತ್ವದ ಆಯೋಗ ರಾಜ್ಯದ 180 ನಗರ ಹಾಗೂ 190 ಗ್ರಾಮೀಣ ಭಾಗದ ಬ್ಲಾಕ್‌ಗಳಲ್ಲಿ ಸಂಚರಿಸಿ 63 ಸಾವಿರ ಕುಟುಂಬಗಳ ಮೂರು ಲಕ್ಷ ಹಿಂದುಳಿದ ವರ್ಗಗಳ ಜನರ ಸಮೀಕ್ಷೆ ನಡೆಸಿತ್ತು. 1972ರ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಾನದಂಡ ಆಧರಿಸಿ ಹಿಂದುಳಿದ ವರ್ಗಗಳ ಜಾತಿಗಳನ್ನು ಹಿಂದುಳಿದ, ಅತಿ ಹಿಂದುಳಿದ ಹಾಗೂ ಅತ್ಯಂತ ಹಿಂದುಳಿದ ಜಾತಿ ಎಂದು ವಿಭಾಗ ಮಾಡಿತು ಎಂದರು.

ಎಲ್‌.ಜಿ.ಹಾವನೂರು ಅವರು ಹಿಂದುಳಿದ ವರ್ಗಗಳ ಏಳ್ಗೆಗೆ ನೀಡಿದ ಕೊಡುಗೆಯನ್ನು ಗಮನಿಸಿ ನೆಲ್ಸನ್‌ ಮಂಡೇಲಾ ಅವರು ದಕ್ಷಿಣ ಆಫ್ರಿಕಾದ ಸಂವಿಧಾನ ರಚನೆಯ ಸಲಹೆಗಾರರನ್ನಾಗಿ ಹಾವನೂರು ಅವರನ್ನು ನೇಮಿಸಿದರು. ಇದು ನಾವೆಲ್ಲ ಹೆಮ್ಮೆ ಪಡಬೇಕಾದ ವಿಷಯ ಎಂದರು.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next