Advertisement

 ಪಿಪಿಎಫ್ ಮೇಲಿನ ಬಡ್ಡಿದರಗಳ ಕಡಿತ ವಾಪಸ್ ಪಡೆದ ಕೇಂದ್ರ ..!

11:12 AM Apr 01, 2021 | Team Udayavani |

ನವ ದೆಹಲಿ : ನಿನ್ನೆ(ಬುಧವಾರ, ಮಾ.31) ಸಂಜೆ ಹೊರಡಿಸಿದ್ದ ಸಣ್ಣ ಉಳಿತಾಯಗಳ ಯೋಜನೆಯ ಮೇಲಿನ ಬಡ್ಡಿದರಗಳ ಮೇಲಿನ ಕಡಿತವನ್ನು ಇಂದು ವಾಪಸ್ ತೆಗದುಕೊಂಡಿದೆ. ಹಣಕಾಸು ಸಚಿವೆ ನಿರ್ಮಲಾ ಸೀತಾರಮನ್ ನಿನ್ನೆ ಹೊರಡಿಸಿರುವ ಆದೇಶವನ್ನು ಹಿಂತೆಗೆದುಕೊಳ್ಳುತ್ತಿದ್ದೇವೆ ಎಂದು ಹೇಳಿದ್ದಾರೆ.

Advertisement

ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು ಅಥವಾ ಎನ್ ಎಸ್ ಸಿ ಮತ್ತು ಭವಿಷ್ಯ ನಿಧಿ ಅಥವಾ ಪಿಪಿಎಫ್ ಯೋಜನೆಗಳಲ್ಲಿನ ಕಡಿತವು ಲಕ್ಷಾಂತರ ಮಧ್ಯಮ ವರ್ಗದ ಠೇವಣಿದಾರರಿಗೆ ಸಮಸ್ಯೆಯನ್ನು ಉಂಟು ಮಾಡುತ್ತದೆ, ಹಾಗಾಗಿ ಕಣ್ತಪ್ಪಿನಿಂದ ಹೊರಡಿಸಲಾಗಿರುವ ಈ ಆದೇಶವನ್ನು ಹಿಂತೆಗೆದುಕೊಳ್ಳುವುದಾಗಿ ಹಣಕಾಸು ಸಚಿವೆ ಹೇಳಿದ್ದಾರೆ.

ಓದಿ : ಭರ್ಜರಿ ಖರೀದಿ:ಮುಂಬಯಿ ಷೇರುಪೇಟೆ ಸೆನ್ಸೆಕ್ಸ್ 390 ಅಂಕ ಏರಿಕೆ, 14,804ಕ್ಕೆ ತಲುಪಿದ ನಿಫ್ಟಿ

ಇನ್ನು, ಈ ಬಗ್ಗೆ ಅಧಿಕೃತ ಟ್ವೀಟರ್ ಖಾತೆಯಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಇಂದು ಬೆಳಗ್ಗೆ, ‘2020-2021ರ ತ್ರೈಮಾಸಿಕದಲ್ಲಿ ಅಸ್ತಿತ್ವದಲ್ಲಿದ್ದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರಗಳಲ್ಲಿ ಯಥಾಸ್ಥಿತಿಯಲ್ಲಿ ಮುಂದುವರಿಸಲಿದ್ದೇವೆ. ಈ ಬಗ್ಗೆ ಕಣ್ತಪ್ಪಿನಿಂದ ಹೊರಡಿಸಲಾದ ಆದೇಶಗಳನ್ನು ಹಿಂಪಡೆಯಲಾಗುತ್ತದೆ,” ಎಂದು ಬರೆದುಕೊಂಡಿದ್ದಾರೆ.

Advertisement

ನಿನ್ನೆ(ಬುಧವಾರ, ಮಾ.31) ಸಂಜೆ ಸಣ್ಣ ಉಳಿತಾಯಗಳ ಯೋಜನೆಯ ಮೇಲಿನ ಹೊರಡಿಸಿತ್ತು. ಪಿಪಿಎಫ್ ಮೇಲಿನ ಬಡ್ಡಿದರವನ್ನು ಶೇಕಡಾ. 7.1 ರಿಂದ ಶೇ.6.4 ಕ್ಕೆ ಕಡಿತಗೊಳಿಸಲಾಗಿತ್ತು. ಎನ್ ಎಸ್ ಸಿ ಯಲ್ಲಿ ಶೇಕಡಾ. 6.8 ರಿಂದ  ಶೇಕಡಾ 5.9ಕ್ಕೆ ಇಳಿಸಲಾಗಿತ್ತು.

ಇನ್ನು, ಪಿಪಿಎಫ್ ಮೇಲಿನ ಹೊಸ ಬಡ್ಡಿದರವು 1974 ರಿಂದೀಚೆಗೆ ಅತ್ಯಂತ ಕಡಿಮೆ ಪ್ರಮಾಣದಲ್ಲಿತ್ತು ಎಂದು ವರದಿ ತಿಳಿಸಿದೆ.

ಬಡ್ಡಿದರಗಳ ಮೇಲಿನ ಬಾರಿ ಪ್ರಮಾಣದ ಕಡಿತವನ್ನು ಹಿಂಪಡೆಯುತ್ತೇವೆ ಎಂಬ ಸರ್ಕಾರದ ಈ ದಿಢೀರ್ ನಿರ್ಧಾರಕ್ಕೆ ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರು ಟೀಕೆ ಮಾಡುತ್ತಿದ್ದಾರೆ.

ಓದಿ : ಆಧಾರ್, ಪಾನ್ ಜೋಡಣೆಯ ದಿನಾಂಕ ವಿಸ್ತರಣೆ

Advertisement

Udayavani is now on Telegram. Click here to join our channel and stay updated with the latest news.

Next