Advertisement

ಹೆಸ್ಕಾಂನಲ್ಲಿ 86ಕೋಟಿ ರೂ. ಅವ್ಯವಹಾರ ಪತ್ತೆ: 20 ಅಧಿಕಾರಿಗಳ ಅಮಾನತಿಗೆ ಆದೇಶ

06:48 PM Jan 26, 2022 | Team Udayavani |

ಬೆಂಗಳೂರು :  ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ (ಹೆಸ್ಕಾಂ ) ವ್ಯಾಪ್ತಿಯ ಅಥಣಿ ವಿಭಾಗದಲ್ಲಿ ನಡೆದ ಕಾಮಗಾರಿಗಳಲ್ಲಿ ನಡೆದ ಅವ್ಯವಹಾರ ಸಂಬಂಧ ತನಿಖೆ ನಡೆಸಿರುವ ಇಂಧನ ಇಲಾಖೆ ಅಕ್ರಮಕ್ಕೆ ಕಾರಣರಾದ 20 ಅಧಿಕಾರಿಗಳನ್ನು ಅಮಾನತುಗೊಳಿಸಿದೆ. ಏಳು ಜನರಿಗೆ ವರ್ಗಾವಣೆ ಶಿಕ್ಷೆ ನೀಡಿದೆ.

Advertisement

ಸುಮಾರು 86 ಕೋಟಿ ರೂ. ಮೊತ್ತದ ಅವ್ಯವಹಾರಕ್ಕೆ ಅಧಿಕಾರಿಗಳು ಕಾರಣರಾಗಿದ್ದು, ಇದರಿಂದ ಇಲಾಖೆಗೆ ಆಥಿಕ ನಷ್ಟವಾಗುವ ಜತೆಗೆ ಸಾರ್ವಜನಿಕರಿಗೆ ಅಗತ್ಯವಾದ ಕಾಮಗಾರಿಗಳ ಗುಣಮಟ್ಟದಲ್ಲೂ ನ್ಯೂನ್ಯತೆ ಸೃಷ್ಟಿಯಾಗಿತ್ತು. ಈ ಸಂಬಂಧ ತನಿಖಾ ತಂಡ ನೀಡಿದ ವರದಿಯ ಶಿಫಾರಸಿನ ಅನ್ವಯ ಹೆಚ್ಚುವರಿ ಕಾರ್ವನಿರ‍್ವಾಹಕ ಎಂಜಿನಿಯರ್ ಸೇರಿ 20 ಜನರನ್ನು ಅಮಾನತುಗೊಳಿಸುವಂತೆ ಕನ್ನಡ-ಸಂಸ್ಕೃತಿ ಮತ್ತು ಇಂಧನ ಇಲಾಖೆ ಸಚಿವ ವಿ.ಸುನೀಲ್ ಕುಮಾರ್  ಆದೇಶ ನೀಡಿದ್ದಾರೆ.

2018ರಿಂದ  2021ರ ಅವಧಿಯಲ್ಲಿ ನಡೆದ ಯುಎನ್ಐಪಿ, ಕಾಪೆಕ್ಸ್, ಗಂಗಾ ಕಲ್ಯಾಣ, ನೀರು ಸರಬರಾಜು, ಓಟಿಎಂ, ಪ್ರಧಾನಮಂತ್ರಿ ಗ್ರಾಮೀಣ ವಿದ್ಯುದೀಕರಣ ಯೋಜನೆ ಸೇರಿದಂತೆ ನಾಗರಿಕರಿಕರಿಗೆ ನೇರವಾಗಿ ಸಂಬಂಧಪಟ್ಟ ಕಾಮಗಾರಿಗಳಲ್ಲಿ ಅವ್ಯವಹಾರ ಎಸಗಿರುವುದು ಇಲಾಖೆ ನಡೆಸಿದ ಆಂತರಿಕ ತನಿಖೆಯಿಂದ ಸ್ಪಷ್ಟವಾಗಿದೆ.

ನಡೆದಿದ್ದೇನು ? :

2018ರಿಂದ 2021ರ ಅವಧಿಗೆ ಅನ್ವಯವಾಗುವಂತೆ ಹೆಸ್ಕಾಂನ ಅಥಣಿ ವಿಭಾಗದಲ್ಲಿ ನಾನಾ ಕಾಮಗಾರಿಗಳಿಗೆ ಸಂಬಂಧಪಟ್ಟಂತೆ ಟೆಂಡರ್ ಕರೆಯಲಾಗಿತ್ತು. ಆದರೆ ಇದರಲ್ಲಿ ಅವ್ಯವಹಾರವಾಗಿದೆ. ಸಂಸ್ಥೆಗೆ  ಆರ್ಥಿಕ ನಷ್ಟವುಂಟು ಮಾಡಲಾಗುತ್ತಿದೆ ಎಂದು ಸಾರ್ವಜನಿಕರು ಹಾಗೂ ಅನೇಕ ಸಂಘಟನೆಗಳಿಂದ ದೂರು ವ್ಯಕ್ತವಾಗಿತ್ತು. ಈ ಹಿನ್ನೆಲೆಯಲ್ಲಿ ಹೆಸ್ಕಾಂ ವ್ಯವಸ್ಥಾಪಕ ನಿರ್ದೇಶಕ ತಾಂತ್ರಿಕ ನಿರ್ದೇಶಕ, ಹಣಕಾಸು ಅಧಿಕಾರಿಗಳ ತಂಡ ಆಗಷ್ಟ್  14ರಂದು ಸ್ಥಳ ಪರಿಶೀಲನೆ ನಡೆಸಿದಾಗ ಮೇಲ್ನೋಟಕ್ಕೆ ಅವ್ಯವಹಾರ ನಡೆದಿರುವುದು ಖಾತ್ರಿಯಾಗಿತ್ತು. ಈ ಹಿನ್ನೆಲೆಯಲ್ಲಿ ಶಾಖಾವಾರು ವರದಿ ನೀಡುವಂತೆ ಸೂಚನೆ ನೀಡಿದ್ದರ ಜತೆಗೆ ಆಂತರಿಕ ತನಿಖೆಗೆ ಸೂಚನೆ ನೀಡಲಾಗಿತ್ತು.

Advertisement

ತನಿಖಾ ಸಂರ‍್ಭದಲ್ಲಿ ಅಧಿಕಾರಿಗಳ ಕೈವಾಡದಿಂದಲ್ಲೇ ಅವ್ಯವಹಾರ ಹಾಗೂ ನಷ್ಟವುಂಟಾಗಿರುವುದು ದೃಢಪಟ್ಟಿದೆ. ಒಟ್ಟಾರೆಯಾಗಿ 29.72ಕೋಟಿ ರೂ.ನ್ನು ಕಾಮಗಾರಿ ನಿರ್ವಹಣೆ ಮಾಡದೇ ಹಣ ಪಾವತಿ ಮಾಡಿರುವ ಗಂಭೀರ ಲೋಪ ಪತ್ತೆಯಾಗಿದೆ. ಜತೆಗೆ ಇದರಿಂದಾಗಿ ಇಲಾಖೆಗೆ 57.16ಕೋಟಿ ರೂ. ನಿಯಮ ಬಾಹಿರವಾಗಿ ವೆಚ್ಚವಾಗಿರುವುದು ತನಿಖೆಯಿಂದ ಬೆಳಕಿಗೆ ಬಂದಿದೆ.

ಕ್ರಮ :

ಈ ಹಗರಣಕ್ಕೆ ಕಾರಣರಾದ ಅಥಣಿ ವಿಭಾಗದ ಪ್ರಭಾರಿ ಕಾರ್ಯನಿರ್ವಾಹಕ ಎಂಜಿನಿಯರ್, ನಾಲ್ವರು ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್, 12 ಶಾಖಾಧಿಕಾರಿಗಳು, ಒಬ್ಬ ಲೆಕ್ಕಾಧಿಕಾರಿ, 1 ಸಹಾಯಕ ಲೆಕ್ಕಾಧಿಕಾರಿ ಹಾಗೂ ಒಬ್ಬ ಕೇಸ್ ವರ‍್ಕರ್ ಸೇರಿ 20 ಜನರನ್ನು ಅಮಾನತುಗೊಳಿಸುವಂತೆ ಸಚಿವ ಸುನೀಲ್ ಕುಮಾರ್ ನೀಡಿದ ಸೂಚನೆ ಅನ್ವಯ ಹೆಸ್ಕಾಂ ಆದೇಶ ಹೊರಡಿಸಿದೆ. ಅವ್ಯವಹಾರಕ್ಕೆ ಪರೋಕ್ಷವಾಗಿ ಸಹಕರಿಸಿದ 1ಲೆಕ್ಕಾಧಿಕಾರಿ, ನಾಲ್ವರು ಕಿರಿಯ ತಾಂತ್ರಿಕ ಸಹಾಯಕರು, 1ಹಿರಿಯ ಸಹಾಯಕ ಹಾಗೂ ಒಬ್ಬ ಕೇಸ್  ವರ‍್ಕರನ್ನು ಬೇರೆಡೆಗೆ ವರ‍್ಗಾಯಿಸಲಾಗಿದ್ದು, ಪ್ರಕರಣದ ಬಗ್ಗೆ ಇನ್ನಷ್ಟು ತನಿಖೆ ನಡೆಸುವಂತೆ ಸೂಚನೆ ನೀಡಲಾಗಿದೆ.

ಇಂಧನ ಇಲಾಖೆಯಲ್ಲಿ ಯಾವುದೇ ಕಾರಣಕ್ಕೂ ಅವ್ಯವಹಾರ ನಡೆಸುವುದಕ್ಕೆ ಅವಕಾಶ ನೀಡುವುದಿಲ್ಲ. ರಾಜ್ಯದ ಯಾವುದೇ ಮೂಲೆಯಲ್ಲಿ ಈ ಬಗೆಯ ಘಟನೆಗಳು ನಡೆದರೆ ಅದನ್ನು ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತರುವಂತೆ ನಾನು ಸಾರ‍್ವಜನಿಕರಲ್ಲಿ ಮನವಿ ಮಾಡುತ್ತೇನೆ. ನಾಗರಿಕರು ಹಾಗೂ ಸಾರ‍್ವಜನಿಕ ಸಂಸ್ಥೆಗಳ ನೆರವಿನೊಂದಿಗೆ ಇಂಧನ ಇಲಾಖೆಯ ಎಲ್ಲ ಹಂತಗಳಲ್ಲೂ ಪಾರದರ್ಶಕತೆ ತರುವುದಕ್ಕೆ ಪ್ರಮಾಣಿಕ ಪ್ರಯತ್ನ ನಡೆಸುತ್ತೇನೆ. ಭ್ರಷ್ಟಾಚಾರ ಹಾಗೂ ಅವ್ಯವಹಾರಕ್ಕೆ ಪ್ರೇರಣೆ ನೀಡುವ ಅಧಿಕಾರಿಗಳ ವಿರುದ್ಧ ಕ್ರಮ ನಿಶ್ಚಿತ. -ವಿ.ಸುನೀಲ್ ಕುಮಾರ್, ಕನ್ನಡ-ಸಂಸ್ಕೃತಿ ಮತ್ತು ಇಂಧನ ಸಚಿವ

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next