Advertisement

ಗೋವಾದಲ್ಲಿ ಅನುಮತಿ ಇಲ್ಲದೆ ನಿರ್ಮಿಸಿರುವ ಶಾಕ್ಸ್‌ ಗುಡಿಸಲುಗಳನ್ನು ತೆರವುಗೊಳಿಸಲು ಆದೇಶ

07:37 PM Mar 28, 2023 | Team Udayavani |

ಪಣಜಿ: ಕಾಂದೋಳಿಮ್-ಕಲಂಗುಟ್ ಸಮುದ್ರ ತೀರದಲ್ಲಿ ಪ್ರದೇಶದಲ್ಲಿ ಅನುಮತಿ ಇಲ್ಲದೆ ನಿರ್ಮಿಸಿರುವ 161 ಶಾಕ್ಸ್‌ (ಬಾರ್‌ ಮತ್ತು ರೆಸ್ಟೊರೆಂಟ್) ಗುಡಿಸಲುಗಳನ್ನು ತೆರವುಗೊಳಿಸುವಂತೆ ಮುಂಬೈ ಹೈಕೋರ್ಟ್‍ನ ಗೋವಾ ಪೀಠ ಮಂಗಳವಾರ ಆದೇಶಿಸಿದೆ. ಹೈಕೋರ್ಟ್‌ ಪೀಠವು ಉತ್ತರ ಗೋವಾದ ಜಿಲ್ಲಾಧಿಕಾರಿಗಳಿಗೆ ಆದೇಶ ಹೊರಡಿಸಿದೆ.

Advertisement

ಕಲಂಗುಟ್-ಕಾಂದೋಳಿಮ್ ಪ್ರದೇಶದಲ್ಲಿ ಒಟ್ಟು 161 ಶಾಕ್ಸ್‌ಗಳು ಅನುಮತಿಯಿಲ್ಲದೆ ಕಾರ್ಯನಿರ್ವಹಿಸುತ್ತಿವೆ ಎಂದು ಗೋವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ (ಜಿಎಸ್‍ಪಿಸಿಬಿ) ಹೇಳಿದೆ ಎಂದು ಹೈಕೋರ್ಟ್‌ ಗೋವಾ ಪೀಠ ಹೇಳಿದೆ. ಈ ಶಾಕ್ಸ್‌ ಗುಡಿಸಲುಗಳು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಯಾವುದೇ ಅನುಮತಿ ಪಡೆದಿಲ್ಲ.  ಆದ್ದರಿಂದ, ಗೋವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಈ ಶಾಕ್ಸ  ಮುಚ್ಚುವ ಆದೇಶವನ್ನು ನೀಡಿತ್ತು. ಈ ಆದೇಶವನ್ನು ಜಾರಿಗೆ ತರುವಂತೆ ಮುಂಬಯಿ ಉಚ್ಛ ನ್ಯಾಯಾಲಯದ ಗೋವಾ ಪೀಠವು ಜಿಲ್ಲಾಧಿಕಾರಿಗಳಿಗೆ ಸೂಚಿಸಿದೆ.

ಈ ಶಾಕ್ಸ್‌ ಗುಡಿಸಲುಗಳನ್ನು ಮುಚ್ಚಲು ಜಿಲ್ಲಾಧಿಕಾರಿಗಳು ಸ್ಥಳೀಯ ಪೊಲೀಸರ ಸಹಕಾರವನ್ನು ಪಡೆಯಬಹುದು. ಗೋವಾ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಹಾಗೂ ಜಿಲ್ಲಾಧಿಕಾರಿಗಳು ತಮ್ಮ ವರದಿಯನ್ನು ಏಪ್ರಿಲ್ ಒಳಗೆ ಸಲ್ಲಿಸುವಂತೆ ಹೈಕೋರ್ಟ್ ಸೂಚಿಸಿದೆ ಸೋಮವಾರ, ಗೋವಾದ ಪೀಠವು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಮತ್ತು ಪ್ರವಾಸೋದ್ಯಮ ಇಲಾಖೆಗೆ ಒಪ್ಪಿಗೆಯಿಲ್ಲದೆ ಕಾರ್ಯನಿರ್ವಹಿಸುತ್ತಿರುವ ಈ ಶಾಕ್ಸ ಗುಡಿಸಲುಗಳ ವಿರುದ್ಧ ಕಾನೂನು ಕ್ರಮದ ಕುರಿತು ಮಾಹಿತಿ ನೀಡುವಂತೆ ಸೂಚಿಸಿತ್ತು.

ರಾಜ್ಯದ ಕಡಲತೀರಗಳಲ್ಲಿ ಶಾಕ್ಸ ಗುಡಿಸಲುಗಳ ನಿರ್ಮಾಣಕ್ಕೆ ಪ್ರವಾಸೋದ್ಯಮ ಇಲಾಖೆ ಅನುಮತಿ ನೀಡಿದೆ. ಅದರಂತೆ, ಪ್ರತಿ ಶಾಕ್ಸ್ ಆಪರೇಟರ್ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಪಡೆಯಬೇಕು. ಆದರೆ, ಕಾಂದೋಳಿಮ್-ಹಣಜುಣ ಪ್ರದೇಶದ ಕೆಲವು ಶಾಕ್ಸ ಗುಡಿಸಲು ನಿರ್ವಾಹಕರು ಈ ಅನುಮತಿಯನ್ನು ಹೊಂದಿಲ್ಲ ಎಂದು ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಯಲ್ಲಿ ಹೇಳಲಾಗಿದೆ. ಪೀಠವು ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ವರದಿ ಕೇಳಿತ್ತು. ಅವರಲ್ಲಿ ಹಲವರಿಗೆ ಪರವಾನಗಿ ಇಲ್ಲದಿರುವುದು ಕಂಡುಬಂದಿದೆ.

Advertisement

Udayavani is now on Telegram. Click here to join our channel and stay updated with the latest news.

Next