ಬೆಂಗಳೂರು: ಸಾರ್ವಜನಿಕ ಶಿಕ್ಷಣ ಇಲಾಖೆಯು ಬೇಸಿಗೆ ರಜಾವಧಿಯಲ್ಲಿ ನಡೆಸಲು ಉದ್ದೇಶಿಸಿರುವ ತರಗತಿಯನ್ನು ತಕ್ಷಣವೇ ನಿಲ್ಲಿಸುವಂತೆ ರಾಜ್ಯ ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗ ಆದೇಶ ಹೊರಡಿಸಿದೆ.
ಬೇಸಿಗೆ ರಜೆಯಲ್ಲಿ ತರಗತಿ ನಡೆಸುವ ಸಂಬಂಧ ಇತ್ತೀಚೆಗೆ ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿತ್ತು. ರಜಾವಧಿಯಲ್ಲಿ ತರಗತಿ ನಡೆಸುವುದು ಮಕ್ಕಳ ಹಕ್ಕಿಗೆ ವಿರುದ್ಧವಾಗಿದ್ದು, ಇದನ್ನು ನಿಲ್ಲಿಸುವಂತೆ ಪಾಲಕರು ಹಾಗೂ ಕೆಲ ಶಿಕ್ಷಕರು ಆಯೋಗಕ್ಕೆ ದೂರು ನೀಡಿದರು.
ದೂರನ್ನು ಸಮಗ್ರವಾಗಿ ಪರಿಶೀಧಿಲಿಸಿದ ಆಯೋಗದ ಅಧ್ಯಕ್ಷರು, ಸರ್ಕಾರಿ ಶಾಲೆ, ಸಿಬಿಎಸ್‌ಇ, ಐಸಿಎಸ್‌ಇ ಹಾಗೂ ಸರ್ಕಾರದಿಂದ ನೋಂದಾಯಿತ ಎಲ್ಲಾ ಖಾಸಗಿ ಅನುದಾನಿತ ಮತ್ತು ಅನುದಾನ ರಹಿತ ಶಾಲೆಗಳಿಗೂ ಇದು ಅನ್ವಯಧಿವಾಗುವಂತೆ ರಜಾದಿನದ ತರಗತಿ ನಡೆಸದಂತೆ ಆದೇಶಿಸಿದ್ದಾರೆ.
ಬೇಸಿಗೆ ಶಿಬಿರ ನಡೆಸುವ ಸಂದರ್ಭಧಿದಲ್ಲಿ ವಿದ್ಯಾರ್ಥಿಗಳ ಹಾಜರಾತಿ, ಕುಡಿಯುವ ನೀರು ಮತ್ತು ಶೌಚಾಲಯ ಸೌಲಭ್ಯ ಇದೆಯೇ ಎಂಬುದನ್ನು ಪರಿಶೀಲಿಸಬೇಕು. ಈ ಆದೇಶಕ್ಕೆ ಸಂಬಂಧಿಸಿದಂತೆ ಶಿಕ್ಷಣ ಇಲಾಖೆ ಆಯುಕ್ತರು ಕೈಗೊಂಡಿರುವ ಕ್ರಮದ ಬಗ್ಗೆ 10 ದಿನದೊಳಗೆ ವರದಿ ಸಲ್ಲಿಸುವಂತೆ ಸೂಚಿಸಿದ್ದಾರೆ.
ನಿರಂತರ ಶಾಲಾ ಚಟುವಟಿಕೆಯಲ್ಲಿರುವ ಮಕ್ಕಳನ್ನು ಬೇಸಿಗೆ ರಜಾದಿನಗಳಲ್ಲೂ ತರಗತಿಗೆ ಆಹ್ವಾನಿಸುವುದು ಮಕ್ಕಳ ಹಕ್ಕಿನ ಉಲ್ಲಂಘನೆ ಯಾಗುತ್ತದೆ. ಆದ್ದರಿಂದ ಎಲ್ಲ ಶಾಲೆಗಳ ರಜಾ ದಿನಗಳ ತರಗತಿ ರದ್ದು ಮಾಡುವಂತೆ ಆದೇಶ ನೀಡಲಾಗಿದೆ
-ಡಾ. ಕೃಪಾ ಅಮರ್ ಆಳ್ವ, ಮಕ್ಕಳ ಹಕ್ಕುಗಳ ರಕ್ಷಣಾ ಆಯೋಗದ ಅಧ್ಯಕ್ಷೆ